ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World cup 2021: 4 ದೇಶಗಳ ಆಕರ್ಷಕ ಜೆರ್ಸಿ ಅನಾವರಣ

T20 World cup 2021: Ireland, Namibia, Scotland and Sri Lanka unveil jerseys

ಅಬುಧಾಬಿ: ಮುಂಬರಲಿರುವ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಮುಕ್ತಾಯವಾಗುತ್ತಲೇ ಟಿ20 ವಿಶ್ವಕಪ್‌ ಶುರುವಾಗಲಿದೆ. ಐಪಿಎಲ್ ಟೂರ್ನಿ ಅಕ್ಟೋಬರ್ 15ರಂದು ಕೊನೆಗೊಂಡರೆ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ.

ಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋ

ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಸಂಬಂಧಿಸಿ ನಾಲ್ಕು ದೇಶಗಳು ತಮ್ಮ ಆಕರ್ಷಕ ಜೆರ್ಸಿ ಅನಾವರಣಗೊಳಿಸಿವೆ. ಅಕ್ಟೋಬರ್‌ 12ರ ಮಂಗಳವಾರದ ವೇಳೆ ಐರ್ಲೆಂಡ್, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ದೇಶಗಳು ಟಿ20 ವಿಶ್ವಕಪ್‌ಗಾಗಿ ತಮ್ಮ ನೂತನ ಜರ್ಸಿ ಬಿಡುಗಡೆ ಮಾಡಿವೆ.

ಐರ್ಲೆಂಡ್ ದೇಶದ ವಿಶ್ವಕಪ್‌ ಜೆರ್ಸಿ ತಿಳಿ ಹಸಿರು ಮತ್ತು ಕಡು ಹಸಿರು ಬಣ್ಣದಲ್ಲಿದ್ದರೆ, ನಮೀಬಿಯಾ ದೇಶದ ಆಟಗಾರರು ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ವಿನ್ಯಾಸದ ಜೆರ್ಸಿ ಧರಿಸಲಿದ್ದಾರೆ. ಸ್ಕಾಟ್ಲೆಂಡ್ ದೇಶದ ಆಟಗಾರರು ತಿಳಿ ನೇರಳೆ ಮತ್ತು ಕಡು ನೇರಳೆ ಬಣ್ಣದ ಜೆರ್ಸಿ ಧರಿಸಲಿದ್ದಾರೆ.

ಐಪಿಎಲ್ ಯುಎಇ ಚರಣದಲ್ಲಿ ಆರ್‌ಸಿಬಿಗೆ ಕೈಕೊಟ್ಟು 'ಫ್ಲಾಪ್ ಸ್ಟಾರ್' ಆದ ಸ್ಟಾರ್ ಬ್ಯಾಟ್ಸ್‌ಮನ್‌ ಇವರೇ!ಐಪಿಎಲ್ ಯುಎಇ ಚರಣದಲ್ಲಿ ಆರ್‌ಸಿಬಿಗೆ ಕೈಕೊಟ್ಟು 'ಫ್ಲಾಪ್ ಸ್ಟಾರ್' ಆದ ಸ್ಟಾರ್ ಬ್ಯಾಟ್ಸ್‌ಮನ್‌ ಇವರೇ!

ನಾಲ್ಕು ದೇಶಗಳಲ್ಲಿ ಶ್ರೀಲಂಕಾ ದೇಶ ಎರಡು ಬಣ್ಣಗಳಲ್ಲಿ ವಿಭಿನ್ನ ಜೆರ್ಸಿ ಹೊರ ತಂದಿದೆ. ಇದರಲ್ಲಿ ಒಂದು ಜೆರ್ಸಿಯ ಬಣ್ಣ ನೀಲಿ ಮತ್ತು ಹಳದಿ ಬಣ್ಣದ ವಿನ್ಯಾಸ ಹೊಂದಿದ್ದರೆ, ಇನ್ನೊಂದು ಜೆರ್ಸಿ ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದಲ್ಲಿ ರಚಿಸಲ್ಪಟ್ಟಿದೆ.

ನಾಯಕತ್ವ ಬಿಟ್ರೂ RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವಿರಾಟ್ | Oneindia Kannada

ಅದ್ದೂರಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 16 ದೇಶಗಳು ಪಾಲ್ಗೊಳ್ಳಲಿವೆ. ಗ್ರೂಪ್‌-ಎ, ಗ್ರೂಪ್-ಬಿ, ಗ್ರೂಪ್-1 ಮತ್ತು ಗ್ರೂಪ್-2 ಹೀಗೆ ಒಟ್ಟು ನಾಲ್ಕು ಗ್ರೂಪ್‌ಗಳ ಮೂಲಕ ಟೂರ್ನಿ ನಡೆಯಲಿದೆ. ಇದರಲ್ಲಿ ಭಾರತ ಗ್ರೂಪ್-2ರಲ್ಲಿ ಇರಲಿದೆ. ಅಂದ್ಹಾಗೆ ಅಕ್ಟೋಬರ್‌ 13ರ ಬುಧವಾರ ಟೀಮ್ ಇಂಡಿಯಾದ ಜೆರ್ಸಿ ಬಿಡುಗಡೆಯಾಗಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಹೇಳಿದೆ.

Story first published: Tuesday, October 12, 2021, 17:26 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X