ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಸತತ ಎರಡನೇ ಗೆಲುವು ಕಂಡ ಇಂಗ್ಲೆಂಡ್; ಮತ್ತೆ ಮುಗ್ಗರಿಸಿದ ಬಾಂಗ್ಲಾದೇಶ

T20 World Cup 2021, Match 20: England won against Bangladesh by 8 wickets

ಪ್ರಸಕ್ತ ಸಾಲಿನ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 20ನೇ ಪಂದ್ಯ ಇಂದು ( ಅಕ್ಟೋಬರ್ 27 ) ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಹೀಗೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶದ ಪರ ಆರಂಭಿಕ ಆಟಗಾರರಾದ ಲಿಟನ್ ದಾಸ್ ಮತ್ತು ಮೊಹಮ್ಮದ್ ನಯಿಮ್ ಉತ್ತಮ ಆರಂಭವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಲಿಟನ್ ದಾಸ್ 9 ಮತ್ತು ಮಹಮ್ಮದ್ ನಯಿಮ್ 5 ರನ್ ಗಳಿಸಿ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ಪ್ರಮುಖ ಆಟಗಾರ ಶಕಿಬ್ ಅಲ್ ಹಸನ್ 4 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಮುಶ್ಪೀಕರ್ ರಹೀಂ 29, ತಂಡದ ನಾಯಕ ಮಹಮದುಲ್ಲಾ 19, ಅಫೀಫ್ ಹಸನ್ 5, ನೂರುಲ್ ಹಸನ್ 16, ಮೆಹದಿ ಹಸನ್ 11, ಮುಸ್ತಫಿಜರ್ ರಹಮಾನ್ 0 ಮತ್ತು ನಸುಮ್ ಅಹ್ಮದ್ ಅಜೇಯ 19 ರನ್ ಕಲೆ ಹಾಕಿದರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 125 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ನೀಡಿತು.

ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡದ ಬೌಲರ್‌ಗಳು ಬಾಂಗ್ಲಾದೇಶ ವಿರುದ್ಧದ ಇಂದಿನ ಪಂದ್ಯದಲ್ಲಿಯೂ ಕೂಡ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇಂಗ್ಲೆಂಡ್ ತಂಡದ ಪರ ಟೈಮಲ್ ಮಿಲ್ಸ್ 3 ವಿಕೆಟ್, ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಮೊಯಿನ್ ಅಲಿ ತಲಾ 2 ವಿಕೆಟ್ ಹಾಗೂ ಕ್ರಿಸ್ ವೋಕ್ಸ್ 1 ವಿಕೆಟ್ ಪಡೆಯುವುದರ ಮೂಲಕ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಇನ್ನು ಬಾಂಗ್ಲಾದೇಶ ತಂಡ ನೀಡಿದ 125 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೇಸನ್ ರಾಯ್ ಅಮೋಘ ಪ್ರದರ್ಶನವನ್ನು ನೀಡಿ ಉತ್ತಮ ಆರಂಭವನ್ನು ತಂಡಕ್ಕೆ ಕಟ್ಟಿಕೊಟ್ಟರು. 38 ಎಸೆತಗಳನ್ನು ಎದುರಿಸಿದ ಜೇಸನ್ ರಾಯ್ 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸುವುದರ ಮೂಲಕ 61 ರನ್ ಕಲೆ ಹಾಕಿದರು. ಇನ್ನು ಮತ್ತೋರ್ವ ಆರಂಭಿಕ ಆಟಗಾರನಾದ ಜೋಸ್ ಬಟ್ಲರ್ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ಮಲನ್ ಅಜೇಯ 28 ಮತ್ತು ಜಾನಿ ಬೈರ್‌ಸ್ಟೋ ಅಜೇಯ 8 ರನ್ ಬಾರಿಸುವುದರ ಮೂಲಕ ಇಂಗ್ಲೆಂಡ್ 14.1 ಓವರ್‌ಗಳಲ್ಲಿ 126 ರನ್ ಗಳಿಸುವುದರ ಮೂಲಕ 8 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತದಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿದ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡು ಸೆಮಿಫೈನಲ್ ಸುತ್ತಿನತ್ತ ದಾಪುಗಾಲಿಟ್ಟಿದೆ.

ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'

ಅತ್ತ ಬಾಂಗ್ಲಾದೇಶ ಸೂಪರ್ 12 ಹಂತದಲ್ಲಿ ಸತತ ಎರಡನೇ ಸೋಲನ್ನು ಕಂಡಿದೆ. ಇನ್ನು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಹೀಗೆ ಇತ್ತಂಡಗಳ ಚೊಚ್ಚಲ ಟಿ ಟ್ವೆಂಟಿ ಪಂದ್ಯದ ಮುಖಾಮುಖಿಯಲ್ಲಿಯೇ ಇಂಗ್ಲೆಂಡ್ ಬಾಂಗ್ಲಾದೇಶಕ್ಕೆ ಸೋಲಿನ ರುಚಿಯನ್ನು ತೋರಿಸಿದೆ.

ನೆಕ್ಸ್ಟ್ ಮ್ಯಾಚ್ ನಲ್ಲಿ ನೋ ಫೋರ್ ನೋ ಸಿಕ್ಸ್: ಟೀಂ ಇಂಡಿಯಾದ ಸಖತ್ ಪ್ಲಾನ್ | Oneindia Kannada

Story first published: Thursday, October 28, 2021, 10:07 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X