ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್

T20 World Cup 2021: Nathan Hauritz names Dangerous player in Team India

ಅಬುಧಾಬಿ: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ನೇಥನ್ ಹೌರಿಟ್ಜ್ ಮುಂಬರಲಿರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಅಪಾಯಕಾರಿ ಆಟಗಾರ ಯಾರು ಅನ್ನೋದನ್ನು ಹೆಸರಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಭಾರತ ತಂಡದಲ್ಲಿ ಹೆಚ್ಚು ಅಪಾಯಕಾರಿ ಬ್ಯಾಟ್ಸ್‌ಮನ್‌, ಅವರು ತನ್ನ ತಂಡಕ್ಕಾಗಿ ಮತ್ತು ನಾಯಕ ವಿರಾಟ್ ಕೊಹ್ಲಿಗಾಗಿ ಅದ್ಭುತ ಸೃಷ್ಟಿಸಬಲ್ಲರು ಎಂದು ಹೌರಿಟ್ಜ್ ಹೇಳಿದ್ದಾರೆ.

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

ಟಿ20 ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ಭಾರತ ತಂಡಕ್ಕೆ ಉಪನಾಯಕರಾಗಿ ರೋಹಿತ್ ಶರ್ಮಾ ಹೆಸರಿಸಲ್ಪಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಮುಗಿಯುತ್ತಲೇ ವಿಶ್ವಕಪ್‌ ಆರಂಭವಾಗಲಿದೆ.

ರೋಹಿತ್ ಶರ್ಮಾ ಬಹಳ ಅಪಾಯಕಾರಿ ಆಟಗಾರ

ರೋಹಿತ್ ಶರ್ಮಾ ಬಹಳ ಅಪಾಯಕಾರಿ ಆಟಗಾರ

"ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮತ್ತು ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾ ಖಂಡಿತವಾಗಿಯೂ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ. ಆತ ಬಹಳ ಅಪಾಯಕಾರಿ ಆಟಗಾರ. ಹೌದು, ವಿರಾಟ್ ಕೊಹ್ಲಿ ಕೂಡ ಅಪಾಯಕಾರಿ ಆಟಗಾರ ನಿಜ. ಆದರೆ ರೋಹಿತ್ ಒತ್ತಡದ ಸಂದರ್ಭಗಳಲ್ಲೂ ಯೋಜನೆಯನ್ನು ಕಾರ್ಯರೂಪಕ್ಕೆ ತರಬಲ್ಲರು. ಒತ್ತಡದ ಸಂದರ್ಭಗಳಿಗೂ ಒಗ್ಗಿಕೊಳ್ಳುವ ಗುಣ ರೋಹಿತ್ ಅವರಲ್ಲಿದೆ. ಇಕ್ಕಟ್ಟಿನ ಕ್ಷಣದಲ್ಲೂ ಶರ್ಮಾ ತಂತ್ರಗಾರಿಕೆ ಬಳಸಿಕೊಳ್ಳುತ್ತಾರೆ," ಎಂದು ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಮಾತನಾಡಿದ ನೇಥನ್ ಹೌರಿಟ್ಜ್ ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಕೊಹ್ಲಿ ಪಡೆಯ ಸ್ಪರ್ಧೆ ಆರಂಭವಾಗಲಿದೆ. ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯ ಮೊದಲ ಪಂದ್ಯ ಆಡಲಿವೆ.

ಎರಡನೇ ಪ್ರಶಸ್ತಿಗಾಗಿ ಭಾರತ ಕಣ್ಣು

ಎರಡನೇ ಪ್ರಶಸ್ತಿಗಾಗಿ ಭಾರತ ಕಣ್ಣು

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆ ವಿಶ್ವಕಪ್‌ನಲ್ಲಿ ಭಾರತ ತನ್ನ ಚೊಚ್ಚಲ ಟ್ರೋಫಿ ಗೆದ್ದಿತ್ತು. ಆವತ್ತು ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪ್ರಶಸ್ತಿ ಜಯಿಸಿತ್ತು. ಈ ವಿಶ್ವಕಪ್‌ ಆವೃತ್ತಿಗೆ ನೂತನ ಜೆರ್ಸಿ ಧರಿಸಲಿರುವ ಭಾರತ ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಚೊಚ್ಚಲ ಐಸಿಸಿ ಟ್ರೋಫಿ ಜಯಿಸಲು ಯೋಜನೆ ಹಾಕಿಕೊಂಡಿದೆ. 2014ರಲ್ಲಿ ಧೋನಿ ನಾಯಕತ್ವದಲ್ಲೇ ಭಾರತ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಬಾಂಗ್ಲಾದ ಧಾಕಾದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 6 ವಿಕೆಟ್‌ ಸೋಲಿನೊಂದಿಗೆ ನಿರಾಸೆ ಅನುಭವಿಸಿತ್ತು.

ಟಿ20 ವಿಶ್ವಕಪ್‌ನಲ್ಲಿ ವಿವಿಧ ಗ್ರೂಪ್‌ಗಳ ಮಾಹಿತಿ

ಟಿ20 ವಿಶ್ವಕಪ್‌ನಲ್ಲಿ ವಿವಿಧ ಗ್ರೂಪ್‌ಗಳ ಮಾಹಿತಿ

ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ನಡೆಯಲಿದೆ. ಗ್ರೂಪ್‌-2ರಲ್ಲಿ ಭಾರತ ತಂಡವಿದೆ. ಗ್ರೂಪ್‌ 'ಬಿ'ಯಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ದೇಶಗಳಿವೆ. ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್‌ ಮತ್ತು ನಮೀಬಿಯಾ ದೇಶಗಳಿವೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್, ಗ್ರೂಪ್ 'ಎ'ಯ ವಿನ್ನರ್, ಗ್ರೂಪ್‌ 'ಬಿ'ಯ ರನ್ನರ್ ತಂಡಗಳು ಸ್ಪರ್ಧಿಸಲಿವೆ. ಗ್ರೂಪ್‌-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗ್ರೂಪ್‌ 'ಎ'ಯ ರನ್ನರ್ ಮತ್ತು ಗ್ರೂಪ್‌ 'ಬಿ'ಯ ವಿನ್ನರ್ ತಂಡಗಳು ಸೆಣಸಾಡಲಿವೆ.

Story first published: Friday, October 15, 2021, 8:35 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X