ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ಸಂಕಷ್ಟ; ಪ್ರಮುಖ ಆಟಗಾರ ಟೂರ್ನಿಯಿಂದಲೇ ಹೊರಕ್ಕೆ!

t20 world cup 2021: New Zealands Lockie Ferguson ruled out of the tournament
IND vs NZ ಮಾಡು ಇಲ್ಲವೇ ಮಡಿ ಪಂದ್ಯ | Oneindia Kannada

ಹಾಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ಎನಿಸಿಕೊಂಡಿರುವ ನ್ಯೂಜಿಲೆಂಡ್ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಅಕ್ಟೋಬರ್ 26ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ಜೊತೆ ಸೆಣಸಾಡಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಸೋಲನುಭವಿಸುವುದರ ಮೂಲಕ ಟೂರ್ನಿಯಲ್ಲಿ ನೀರಸ ಆರಂಭವನ್ನು ಪಡೆದುಕೊಂಡಿದೆ.

ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 134 ರನ್ ಗಳಿಸುವುದರ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 135 ರನ್‌ಗಳ ಗುರಿಯನ್ನು ನೀಡಿತು. ಅತ್ತ ಪಾಕಿಸ್ತಾನ ನ್ಯೂಜಿಲೆಂಡ್ ತಂಡ ನೀಡಿದ ಈ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಅಂತಿಮ ಹಂತದಲ್ಲಿ ಪಂದ್ಯ ನ್ಯೂಜಿಲೆಂಡ್ ತಂಡದ ಪರ ತಿರುಗುವಷ್ಟರಲ್ಲಿ ಪಾಕಿಸ್ತಾನದ ಆಸಿಫ್ ಅಲಿ 12 ಎಸೆತಗಳಿಗೆ ಅಜೇಯ 27 ರನ್ ಚಚ್ಚುವುದರ ಮೂಲಕ ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸಿದರು.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಹೀಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 134 ರನ್‌ಗಳ ಅಲ್ಪ ಮೊತ್ತ ದಾಖಲಿಸಿದರೂ ಸಹ ನ್ಯೂಜಿಲೆಂಡ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತ್ತು. ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಫಕರ್ ಜಮಾನ್ ಮತ್ತು ಮೊಹಮ್ಮದ್ ಹಫೀಜ್ ಅವರ ವಿಕೆಟ್‍ಗಳನ್ನು ಪಡೆದು ಪಾಕಿಸ್ತಾನ ತಂಡದ ಮೇಲೆ ಒತ್ತಡ ಹೇರಿದ್ದ ನ್ಯೂಜಿಲೆಂಡ್ ಬೌಲರ್‌ಗಳು ಅಂತಿಮ ಹಂತದಲ್ಲಿ ಎಡವಿದರು. ಹೀಗೆ ಪಾಕಿಸ್ತಾನ ತಂಡ 18.4 ಓವರ್‌ಗಳಲ್ಲಿ 135 ರನ್ ಕಲೆ ಹಾಕುವುದರ ಮೂಲಕ 5 ವಿಕೆಟ್‍ಗಳ ಜಯ ಸಾಧಿಸಿತು. ಹೀಗೆ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್ ಮುಂಬರುವ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲಿದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನವೇ ನ್ಯೂಜಿಲೆಂಡ್ ತನ್ನ ತಂಡದ ಪ್ರಮುಖ ವೇಗಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟೂರ್ನಿಯಿಂದ ಹೊರಬಿದ್ದ ಲಾಕಿ ಫರ್ಗ್ಯುಸನ್

ಟೂರ್ನಿಯಿಂದ ಹೊರಬಿದ್ದ ಲಾಕಿ ಫರ್ಗ್ಯುಸನ್

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿದ್ದ ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖ ವೇಗಿ ಲಾಕಿ ಫರ್ಗ್ಯುಸನ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಳಗದ ಬಲಿಷ್ಠತೆಯಲ್ಲಿ ಪ್ರಮುಖರಾಗಿದ್ದ ಲಾಕಿ ಫರ್ಗ್ಯುಸನ್ ಪಾಕಿಸ್ತಾನ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸದ ವೇಳೆ ಕಾಲಿನ ಗಾಯಕ್ಕೆ ಒಳಗಾಗಿದ್ದು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗಾಯದ ಪರಿಣಾಮ ತುಸು ಹೆಚ್ಚಾಗಿಯೇ ಇರುವ ಕಾರಣ ಲಾಕಿ ಫರ್ಗ್ಯುಸನ್ ನಾಲ್ಕೈದು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಲಾಕಿ ಫರ್ಗ್ಯುಸನ್ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಲಾಕಿ ಫರ್ಗ್ಯೂಸನ್ ಮಿಂಚು

2019ರ ಏಕದಿನ ವಿಶ್ವಕಪ್‌ನಲ್ಲಿ ಲಾಕಿ ಫರ್ಗ್ಯೂಸನ್ ಮಿಂಚು

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಾಕಿ ಫರ್ಗ್ಯುಸನ್ ನ್ಯೂಜಿಲೆಂಡ್ ತಂಡದ ಪರ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದರು. ಆ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿದ್ದ ಲಾಕಿ ಫರ್ಗ್ಯುಸನ್ 21 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ನ್ಯೂಜಿಲೆಂಡ್ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಕೂಡ ಲಾಕಿ ಫರ್ಗ್ಯುಸನ್ ಉತ್ತಮ ಪ್ರದರ್ಶನವನ್ನು ನೀಡಿದ್ದರು.

ಲಾಕಿ ಫರ್ಗ್ಯುಸನ್ ಬದಲು ಆ್ಯಡಂ ಮಿಲ್ನೆ ಸೇರ್ಪಡೆ

ಲಾಕಿ ಫರ್ಗ್ಯುಸನ್ ಬದಲು ಆ್ಯಡಂ ಮಿಲ್ನೆ ಸೇರ್ಪಡೆ

ಲಾಕಿ ಫರ್ಗ್ಯುಸನ್ ಗಾಯದ ಸಮಸ್ಯೆಗೊಳಗಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಕಾರಣ ತಂಡದ ಮತ್ತೋರ್ವ ವೇಗಿ ಆ್ಯಡಮ್ ಮಿಲ್ನೆಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.


Story first published: Wednesday, October 27, 2021, 16:52 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X