ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಕಳಪೆ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲು ಆಗುವುದಿಲ್ಲ ಎಂದು ಕೊಂಕು ನುಡಿದ ಶೋಯೆಬ್ ಅಖ್ತರ್

T20 world cup 2021: Shoaib akhtar Unhappy with his countrys team squad

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂಬರುವ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿದೆ. 2016ರ ನಂತರ ಯಾವುದೇ ವರ್ಷದಲ್ಲಿಯೂ ನಡೆಯದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಈ ವರ್ಷ ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಟೂರ್ನಿಯ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟವಾದ ಬೆನ್ನಲ್ಲೇ ಮನನೊಂದ ರಶೀದ್ ಖಾನ್ ರಾಜೀನಾಮೆ!ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟವಾದ ಬೆನ್ನಲ್ಲೇ ಮನನೊಂದ ರಶೀದ್ ಖಾನ್ ರಾಜೀನಾಮೆ!

5 ವರ್ಷಗಳ ನಂತರ ಮರಳಿ ಬಂದಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಟೂರ್ನಿ ಅಕ್ಟೋಬರ್ 17ರಂದು ಯುಎಇಯಲ್ಲಿ ಆರಂಭವಾಗಲಿದೆ. ಟೂರ್ನಿಗೆ ಇನ್ನೂ ತಿಂಗಳ ಸಮಯವಿರುವಾಗಲೇ ಟೂರ್ನಿಯಲ್ಲಿ ಭಾಗವಹಿಸಲಿರುವ ವಿವಿಧ ದೇಶಗಳು ತಮ್ಮ ತಂಡಗಳನ್ನು ಘೋಷಣೆ ಮಾಡಿಕೊಂಡಿವೆ. ಹೌದು, ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಹಲವಾರು ತಂಡಗಳ ಪ್ರಕಟವಾಗಿದ್ದು ವಾರದ ಹಿಂದಷ್ಟೇ ಪಾಕಿಸ್ತಾನ ಕೂಡ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತನ್ನ ತಂಡವನ್ನು ಪ್ರಕಟ ಮಾಡಿತ್ತು.

ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!

ಆದರೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಸಾಲುಸಾಲು ಟೀಕೆಗಳು ವ್ಯಕ್ತವಾದವು. ಅನುಭವವೇ ಇಲ್ಲದ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ, ಹಲವಾರು ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯ ವಿರುದ್ಧ ಕೇಳಿಬಂದವು. ಪಾಕಿಸ್ತಾನದ ಹಲವಾರು ಮಾಜಿ ಕ್ರಿಕೆಟಿಗರು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾದ ಪಾಕಿಸ್ತಾನ ತಂಡದ ವಿರುದ್ಧ ಕಿಡಿಕಾರಿದರು. ಇದೀಗ ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಮಾತನಾಡಿದ್ದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಪಾಕಿಸ್ತಾನ ತಂಡದ ಆಯ್ಕೆಗಾರರ ವಿರುದ್ಧ ತೀಕ್ಷ್ಣವಾಗಿ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಪಾಕಿಸ್ತಾನ ಟೀಮ್ ಆಯ್ಕೆಗಾರನ ವಿರುದ್ಧ ಕಿಡಿಕಾರಿದ ಶೋಯೆಬ್ ಅಖ್ತರ್

ಪಾಕಿಸ್ತಾನ ಟೀಮ್ ಆಯ್ಕೆಗಾರನ ವಿರುದ್ಧ ಕಿಡಿಕಾರಿದ ಶೋಯೆಬ್ ಅಖ್ತರ್

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶೋಯೆಬ್ ಅಖ್ತರ್ ಪಾಕಿಸ್ತಾನ ಟೀಮ್ ಆಯ್ಕೆಗಾರರಾದ ಮೊಹಮ್ಮದ್ ವಾಸೀಂ ವಿರುದ್ಧ ಕಿಡಿಕಾರಿದ್ದಾರೆ. "ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ರಚಿಸಲಾಗಿರುವ ಪಾಕಿಸ್ತಾನ ತಂಡದ ಆಟಗಾರರ ಬದಲಾವಣೆ ಬಹು ಶೀಘ್ರದಲ್ಲಿಯೇ ನಡೆಯಲಿದೆ. ಇಂತಹ ಕೆಟ್ಟ ತಂಡವನ್ನು ಆಯ್ಕೆ ಮಾಡಿರುವ ಮೊಹಮ್ಮದ್ ವಾಸಿಂ ಓರ್ವ ಸಮಯದ ಗೊಂಬೆ ಅಷ್ಟೇ" ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ.

ಪಾಕಿಸ್ತಾನ ತಂಡದಲ್ಲಿ ಈ ಆಟಗಾರರು ಇರಲೇಬೇಕು

ಪಾಕಿಸ್ತಾನ ತಂಡದಲ್ಲಿ ಈ ಆಟಗಾರರು ಇರಲೇಬೇಕು

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ತಂಡ ಬಲಿಷ್ಠವಾಗಿರಬೇಕೆಂದರೆ ಈ ಕೆಳಕಂಡ ಎಲ್ಲಾ ಆಟಗಾರರು ಕೂಡ ತಂಡದಲ್ಲಿರಬೇಕು, ಈಗಿರುವ ತಂಡದೊಂದಿಗೆ ಟೂರ್ನಿಯಲ್ಲಿ ಭಾಗವಹಿಸಿದರೆ ಸೋಲು ಖಚಿತ ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಬಾಬರ್ ಅಜಮ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ಶೋಯೆಬ್ ಮಲಿಕ್, ಇಮಾದ್ ವಾಸಿಂ, ಶಾದಬ್ ಖಾನ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಶಹನವಾಜ್ ದಹನಿ, ಫಹೀಮ್ ಅಶ್ರಫ್, ಮೊಹಮ್ಮದ್ ಅಮೀರ್, ಫಖರ್ ಜಮಾನ್, ಮತ್ತು ಹುಸೇನ್ ತಲತ್

ಟೀಮ್ ಇಂಡಿಯಾ ನಾಯಕತ್ವದಿಂದ ವಿರಾಟ್ ಔಟ್ | Oneindia Kannada
ಆಟಗಾರರ ಆಯ್ಕೆ ನಾಯಕನಿಗೆ ಖುಷಿ ತಂದಿದೆ ಎಂದ ವಾಸೀಮ್

ಆಟಗಾರರ ಆಯ್ಕೆ ನಾಯಕನಿಗೆ ಖುಷಿ ತಂದಿದೆ ಎಂದ ವಾಸೀಮ್

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆಗಾರ ಮೊಹಮ್ಮದ್ ವಾಸಿಂ ವಿರುದ್ಧ ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಆಯ್ಕೆಗಾರ ಮೊಹಮ್ಮದ್ ವಾಸಿಂ ತಾನು ಆಯ್ಕೆ ಮಾಡಿರುವ ತಂಡ ಪಾಕಿಸ್ತಾನದ ನಾಯಕ ಬಾಬರ್ ಅಜಮ್‌ಗೆ ತೃಪ್ತಿ ನೀಡಿದೆ ಎಂದು ತಮ್ಮ ಆಯ್ಕೆಯನ್ನು ಸ್ವತಃ ತಾವೇ ಬೆಂಬಲಿಸಿಕೊಂಡಿದ್ದಾರೆ.

Story first published: Saturday, September 11, 2021, 13:47 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X