ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್: ಭಾರತಕ್ಕೆ ಹೆಚ್ಚು ರನ್ ಬರಬೇಕೆಂದರೆ ಆತನನ್ನು ತಂಡದಿಂದ ಹೊರಗಿಡಿ: ಆಕಾಶ್ ಚೋಪ್ರಾ

T20 World Cup 2021: Shradul Thakur cant replace Hardik Pandya says Aakash Chopra

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಆರಂಭವಾಗಿದ್ದು ಮೊದಲನೇ ದಿನವೇ ಕಡಿಮೆ ರನ್‌ಗಳ ಪಂದ್ಯಗಳು ನಡೆದಿದ್ದು ಕ್ರಿಕೆಟ್ ಪ್ರೇಕ್ಷಕರಿಗೆ ಈ ಹಿಂದೆ ಚುಟುಕು ಕದನಗಳಿಂದ ಸಿಗುತ್ತಿದ್ದಂತಹ ಮನರಂಜನೆ ಸಿಕ್ಕಿಲ್ಲ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಮೊದಲನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ಗಳು ಬಂದರೆ, ಹಾಲಿ ಟಿ ಟ್ವೆಂಟಿ ಚಾಂಪಿಯನ್ಸ್ ಆಗಿರುವ ವೆಸ್ಟ್ ಇಂಡೀಸ್ ಮತ್ತು ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ಸ್ ಆಗಿರುವ ಇಂಗ್ಲೆಂಡ್ ನಡುವೆ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಹರಿದು ಬಂದ ರನ್ ಕೇವಲ 55. ಹೀಗೆ ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಾದ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೋಲನುಭವಿಸಿವೆ. ಎರಡೂ ತಂಡಗಳ ಪರ ಯಾರಾದರೂ ಒಬ್ಬ ಆಟಗಾರ ದೊಡ್ಡ ಇನ್ನಿಂಗ್ಸ್ ಕಟ್ಟಿದ್ದರೂ ತಂಡದ ಮೊತ್ತ ದೊಡ್ಡ ಮಟ್ಟಕ್ಕೆ ತಲುಪಿ ಪಂದ್ಯದಲ್ಲಿ ಪೈಪೋಟಿಯಾದರೂ ಏರ್ಪಡುತ್ತಿತ್ತು.

ಕೊಹ್ಲಿ ನಾಯಕತ್ವದ ಆರ್‌ಸಿಬಿ ಪರ ಆಡಿದ್ದ ಈತ ಇಂದು ಕ್ರಿಕೆಟ್ ಶಿಶು ನಮೀಬಿಯಾವನ್ನು ಸೂಪರ್12ಗೆ ಕರೆತಂದ!ಕೊಹ್ಲಿ ನಾಯಕತ್ವದ ಆರ್‌ಸಿಬಿ ಪರ ಆಡಿದ್ದ ಈತ ಇಂದು ಕ್ರಿಕೆಟ್ ಶಿಶು ನಮೀಬಿಯಾವನ್ನು ಸೂಪರ್12ಗೆ ಕರೆತಂದ!

ಹೀಗಾಗಿ ಪೈಪೋಟಿಯಿಲ್ಲದ ಮೊದಲ ದಿನದ ಎರಡೂ ಪಂದ್ಯಗಳನ್ನು ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳು ಸದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ದೊಡ್ಡ ರನ್ ಹರಿದು ಬರುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಗಳೆಂದರೆ ಎಲ್ಲಿಲ್ಲದ ನಿರೀಕ್ಷೆ ಮತ್ತು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಸೆಣಸಾಡಲಿರುವ ತಂಡ ಹೇಗಿರಬೇಕು ಮತ್ತು ಯಾವ ಆಟಗಾರರಿಗೆ ಅವಕಾಶವನ್ನು ಕೊಟ್ಟರೆ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಸರೆಯಾಗುತ್ತಾರೆ ಎಂಬುದರ ಕುರಿತು ತಮ್ಮ ಪಾಲಿನ ಸಲಹೆಗಳನ್ನು ನೀಡುತ್ತಿರುತ್ತಾರೆ.

 ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಮುಕ್ತಾಯದ ನಂತರ ಪಾಕ್ ಸೇಫ್, ಈ ಬಲಿಷ್ಠ ತಂಡಗಳಿಗೆ ಹೆಚ್ಚಾಯ್ತು ಕಷ್ಟ! ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಮುಕ್ತಾಯದ ನಂತರ ಪಾಕ್ ಸೇಫ್, ಈ ಬಲಿಷ್ಠ ತಂಡಗಳಿಗೆ ಹೆಚ್ಚಾಯ್ತು ಕಷ್ಟ!

ಇದೇ ರೀತಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹೇಗಿರಬೇಕು ಹಾಗೂ ಯಾವ ಆಟಗಾರನಿಗೆ ಅವಕಾಶವನ್ನು ಕೊಟ್ಟರೆ ಉತ್ತಮ ಪ್ರದರ್ಶನವನ್ನು ನೀಡಿ ತಂಡಕ್ಕೆ ಹೆಚ್ಚಿನ ರನ್ ತಂದುಕೊಡುತ್ತಾನೆ ಎಂಬುದರ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ತಂಡದಲ್ಲಿ ಯಾವ ಆಟಗಾರನಿಗೆ ಅವಕಾಶ ನೀಡಿದರೆ ತಂಡಕ್ಕೆ ಹೆಚ್ಚಿನ ರನ್ ಬರುವುದಿಲ್ಲ ಎಂಬುದನ್ನು ಕೂಡ ಕಾರಣ ಸಮೇತವಾಗಿ ಆಕಾಶ್ ಚೋಪ್ರಾ ಈ ಕೆಳಕಂಡಂತೆ ತಿಳಿಸಿದ್ದಾರೆ.

{photo-feature}

Virat Kohli ಪಾಕಿಸ್ತಾನದ ಪಂದ್ಯ ಮುಗಿದಾದ ನಂತರ Rohit ಬಗ್ಗೆ ಹೇಳಿದ್ದೇನು | Oneindia Kannada

Story first published: Sunday, October 24, 2021, 16:07 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X