ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2021: 15 ಮಂದಿಯ ದಕ್ಷಿಣ ಆಫ್ರಿಕಾ ತಂಡ ಪ್ರಕಟ

T20 World Cup 2021: South Africa announces 15 mens squad

ಜೋಹಾನ್ಸ್‌ಬರ್ಗ್: ಮುಂಬರಲಿರುವ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಗುರುವಾರ (ಸೆಪ್ಟೆಂಬರ್‌ 9) ಪ್ರಕಟವಾಗಿರುವ ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡದಲ್ಲಿ ಮೂವರು ಪ್ರಮುಖ ಸ್ಪಿನ್ನರ್‌ಗಳು ಕಾಣಿಸಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್

ಟಿ20 ವಿಶ್ವಕಪ್‌ 2021ಗಾಗಿ ಪ್ರಕಟವಾಗಿರುವ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ ಜನ್ನೆಮನ್ ಮಲನ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತೆಂಬ ಬವುಮಾ ತಂಡದ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಇನ್ನು ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್ ವಿಶ್ವಕಪ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಐಡನ್ ಮಾರ್ಕ್ರಮ್ ಅವರು ಟಾಪ್ ಆರ್ಡರ್‌ನ ಮೂರನೇ ಆಯ್ಕೆಯ ಆಟಗಾರನಾಗಿ ಆರಿಸಲ್ಪಟ್ಟಿದ್ದಾರೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್ ಚಹರ್ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್ ಚಹರ್

ಇನ್ನು ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಕೇಶವ್ ಮಹರಾಜ್, ಜಾರ್ನ್ ಫಾರ್ಚ್ಯುಯಿನ್ ಮತ್ತು ಟಿ20ಐ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ತಬ್ರೈಝ್ ಶಂಸಿ ವೀಶ್ವಕಪ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಐಡೆನ್ ಮಾರ್ಕ್ರಮ್ ಅವಶ್ಯಕತೆ ಬಿದ್ದಾಗ ಬಳಸಿಕೊಳ್ಳಬಹುದುದಾದ ಸ್ಪಿನ್ನರ್ ಆಗಿದ್ದಾರೆ.

ಈ ಕ್ಷಣದಲ್ಲಿ ಧವನ್‌ಗೆ ವಿಶ್ರಾಂತಿಯ ಅಗತ್ಯವಿದೆ: ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾಈ ಕ್ಷಣದಲ್ಲಿ ಧವನ್‌ಗೆ ವಿಶ್ರಾಂತಿಯ ಅಗತ್ಯವಿದೆ: ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ

ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಟಿ20 ವಿಶ್ವಕಪ್‌ ಟೂರ್ನಿ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾದ ಸವಾಲು ಸ್ವೀಕರಿಸಲಿದೆ. ಅಕ್ಟೋಬರ್ 23ರಂದು ಅಬುಧಾಬಿಯಲ್ಲಿ ಈ ಪಂದ್ಯ ನಡೆಯಲಿದೆ.

ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!

ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ
ತೆಂಬಾ ಬವುಮಾ (ಕ್ಯಾಪ್ಟನ್), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚ್ಯುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡಾ, ತಬ್ರೈಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸೆನ್,
ಮೀಸಲು ಆಟಗಾರರು: ಆಂಡಿಲೆ ಫೆಹ್ಲುಕ್ವಾಯೋ, ಜಾರ್ಜ್ ಲಿಂಡೆ, ಲಿಜಾಡ್ ವಿಲಿಯಮ್ಸ್.

ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು: ಗವಾಸ್ಕರ್ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು: ಗವಾಸ್ಕರ್

ಟಿ20 ವಿಶ್ವಕಪ್‌ನಲ್ಲಿ ವಿವಿಧ ಗ್ರೂಪ್‌ಗಳ ಮಾಹಿತಿ
ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ನಡೆಯಲಿದೆ. ಗ್ರೂಪ್‌-1ರಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. ಗ್ರೂಪ್‌ 'ಬಿ'ಯಲ್ಲಿ ಬಾಂಗ್ಲಾದೇಶ ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ದೇಶಗಳಿವೆ. ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್‌ ಮತ್ತು ನಮೀಬಿಯಾ ದೇಶಗಳಿವೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್, ಗ್ರೂಪ್ 'ಎ'ಯ ವಿನ್ನರ್, ಗ್ರೂಪ್‌ 'ಬಿ'ಯ ರನ್ನರ್ ತಂಡಗಳು ಸ್ಪರ್ಧಿಸಲಿವೆ. ಗ್ರೂಪ್‌-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗ್ರೂಪ್‌ 'ಎ'ಯ ರನ್ನರ್ ಮತ್ತು ಗ್ರೂಪ್‌ 'ಬಿ'ಯ ವಿನ್ನರ್ ತಂಡಗಳು ಸೆಣಸಾಡಲಿವೆ.

Story first published: Thursday, September 9, 2021, 19:14 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X