ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಹಸರಂಗ ಹ್ಯಾಟ್ರಿಕ್ ವಿಕೆಟ್ ವ್ಯರ್ಥ; ಹರಿಣಗಳ ಎದುರು ತಲೆ ಬಾಗಿದ ಶ್ರೀಲಂಕಾ

T20 World Cup 2021: South Africa won against Sri Lanka by 4 wickets

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 25ನೇ ಪಂದ್ಯ ಇಂದು ( ಅಕ್ಟೋಬರ್ 30 ) ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯ ನಡೆಯುವ ಮುನ್ನ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳೆರಡೂ ತಲಾ 2 ಪಂದ್ಯಗಳನ್ನಾಡಿ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸಮಬಲ ಸಾಧಿಸಿದ್ದವು.

ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುವುದರ ಮೂಲಕ ಸೆಮಿಫೈನಲ್ ರೇಸ್‌ನಲ್ಲಿ ಮುನ್ನುಗ್ಗಲಿದೆ ಎಂಬ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಹೀಗೆ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳಿಗೆ ಮಹತ್ವವಾಗಿದ್ದ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 4 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ತನ್ನ ಎದುರಾಳಿ ತಂಡವಾದ ಶ್ರೀಲಂಕಾಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು. ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾದ ಪರ ಆರಂಭಿಕ ಆಟಗಾರನಾದ ಪತುಮ್ ನಿಸ್ಸಾಂಕ 58 ಎಸೆತಗಳಲ್ಲಿ 72 ರನ್ ಬಾರಿಸುವ ಮೂಲಕ ಅತ್ಯದ್ಭುತ ಆಟವನ್ನಾಡಿದರು, ಮೂರನೇ ಕ್ರಮಾಂಕದಲ್ಲಿ ಬಂದ ಚರಿತ ಅಸಲಂಕ 21 ರನ್ ಕಲೆ ಹಾಕಿದರು. ಈ ಇಬ್ಬರನ್ನು ಬಿಟ್ಟರೆ ಶ್ರೀಲಂಕಾ ತಂಡದ ಪರ ಇನ್ಯಾವುದೇ ಆಟಗಾರನೂ ಕೂಡ ಜವಾಬ್ದಾರಿಯುತ ಆಟವನ್ನಾಡುವ ಪ್ರಯತ್ನವನ್ನು ಮಾಡಲೇ ಇಲ್ಲ. ಶ್ರೀಲಂಕಾ ತಂಡದ ಪರ ಕುಸಾಲ್ ಪೆರೇರಾ 7, ಬನುಕಾ ರಾಜಪಕ್ಷ 0, ಅವಿಷ್ಕಾ ಫರ್ನಾಂಡೊ 3, ವನಿಂದು ಹಸರಂಗ 4, ದಾಸುನ್ ಶನಕ 11, ಶಮಿಕಾ ಕರುಣರತ್ನೆ 5, ದುಷ್ಮಂತ ಚಮೀರ 3, ಲಹಿರು ಕುಮಾರ 0 ಮತ್ತು ಮಹೀಶ್ ತೀಕ್ಷಣ ಅಜೇಯ 7 ರನ್ ಕಲೆ ಹಾಕಿದರು.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಾಗಬೇಕಾದ ಬದಲಾವಣೆಗಳನ್ನು ತಿಳಿಸಿದ ಪಠಾಣ್ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಾಗಬೇಕಾದ ಬದಲಾವಣೆಗಳನ್ನು ತಿಳಿಸಿದ ಪಠಾಣ್

ದಕ್ಷಿಣ ಆಫ್ರಿಕಾ ತಂಡದ ಪರ ಡ್ವೈನ್ ಪ್ರಿಟೋರಿಯಸ್ 3, ತಬ್ರೇಜ್ ಸಂಶಿ 3 ಮತ್ತು ಆನ್ರಿಚ್ ನಾರ್ಕಿಯಾ 2 ವಿಕೆಟ್ ಕಬಳಿಸಿದರು.

ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 142 ರನ್ ಗಳಿಸುವುದರ ಮೂಲಕ ಎದುರಾಳಿ ತಂಡವಾದ ಸೌತ್ ಆಫ್ರಿಕಾಗೆ 143 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 12 ಮತ್ತು ರೀಜಾ ಹೆಂಡ್ರಿಕ್ಸ್ 11 ರನ್ ಕಲೆಹಾಕಿ ಪೆವಿಲಿಯನ್ ಕಡೆ ಹೆಜ್ಜೆ ಇಟ್ಟರು. ಇನ್ನುಳಿದಂತೆ ವಾನ್ ಡರ್ ಡುಸೆನ್ 16, ನಾಯಕ ಟೆಂಬಾ ಬವುಮಾ 46, ಏಡನ್ ಮರ್ಕ್ರಾಮ್ 19, ಡ್ವೈನ್ ಪ್ರಿಟೋರಿಯಸ್ 0 ರನ್ ಕಲೆ ಹಾಕಿದರು. ಅಂತಿಮವಾಗಿ ಪಂದ್ಯ ಶ್ರೀಲಂಕಾ ಕಡೆ ಇದ್ದ ಸಂದರ್ಭದಲ್ಲಿ ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಹೊಡಿಬಡಿ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿತು. ಡೇವಿಡ್ ಮಿಲ್ಲರ್ 13 ಎಸೆತಗಳಲ್ಲಿ ಅಜೇಯ 23 ಮತ್ತು ಕಗಿಸೋ ರಬಾಡ 7 ಎಸೆತಗಳಲ್ಲಿ ಅಜೇಯ 13 ರನ್ ಚಚ್ಚಿದರು.

ಹೀಗೆ ಅಂತಿಮವಾಗಿ 19.5 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸುವುದರ ಮೂಲಕ 4 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು.

ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡದ ತಬ್ರೇಜ್ ಸಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇತ್ತ ಶ್ರೀಲಂಕಾ ತಂಡದ ಬೌಲರ್ ವನಿಂದು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹೊಸ ಮೈಲಿಗಲ್ಲನ್ನು ನೆಟ್ಟರು. ವನಿಂದು ಹಸರಂಗ ಮಾಡಿದ 15ನೇ ಓವರ್‌ನ ಕೊನೆಯ ಎಸೆತದಲ್ಲಿ ಏಡೆನ್ ಮಾರ್ಕರಮ್ ವಿಕೆಟ್ ಒಪ್ಪಿಸಿದರು. ನಂತರ 18ನೇ ಓವರ್ ಮಾಡಲು ಮರಳಿ ಬಂದ ವನಿಂದು ಹಸರಂಗ ಆ ಓವರ್‌ನ ಮೊದಲೆರಡು ಎಸೆತಗಳಲ್ಲಿ ವಿಕೆಟ್ ಪಡೆಯುವುದರ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ತಾವು ಮಾಡಿದ ಈ ಓವರ್‌ನ ಮೊದಲ ಎಸೆತದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಹಾಗೂ ಎರಡನೇ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ಅವರ ವಿಕೆಟ್ ಪಡೆಯುವುದರ ಮೂಲಕ ವನಿಂದು ಹಸರಂಗ ಈ ಸಾಧನೆಯನ್ನು ಮಾಡಿದ್ದಾರೆ.

ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!

ಈ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಸಾಧನೆಯನ್ನು ವನಿಂದು ಹಸರಂಗ ಮಾಡಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ.

ಬ್ರೆಟ್ ಲೀ vs ಬಾಂಗ್ಲಾದೇಶ ( 2007 )

ಕರ್ಟಿಸ್ ಕ್ಯಾಂಫರ್ vs ನೆದರ್ಲೆಂಡ್ಸ್‌ ( 2021 )

ವನಿಂದು ಹಸರಂಗ vs ದಕ್ಷಿಣ ಆಫ್ರಿಕಾ ( 2021 )

Story first published: Saturday, October 30, 2021, 20:08 [IST]
Other articles published on Oct 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X