ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಸ್ಟೀವ್ ಸ್ಮಿತ್

T20 World Cup 2021: Steve Smith said Team india Terrific side and favourites to win T20 World Cup

ಈ ಬಾರಿಯ ಟಿ20 ವಿಶ್ವಕಪ್‌ನ ಎರಡು ಅಭ್ಯಾಸ ಪಮದ್ಯದಲ್ಲಿಯೂ ಭಾರತ ಅದ್ಭುತವಾದ ಗೆಲುವು ಸಾಧಿಸುವ ಮೂಲಕ ಮುಖ್ಯ ಟೂರ್ನಿಗೆ ಸಜ್ಜಾಗಿದೆ. ಬುಧವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್‌ಗಳ ಅಂತರದಿಂದ ಭಾರೀ ಗೆಲುವನ್ನು ಸಾಧಿಸಿದೆ. ಈ ಪಂದ್ಯದ ಬಳಿಕ ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ಸಾಧ್ಯತೆಯಿರುವ ತಂಡವನ್ನು ಹೆಸರಿಸಿದ್ದಾರೆ.

ಭಾರತದ ವಿರುದ್ಧಧ ಅಭ್ಯಾಸ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಉತ್ತಮವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತಾರೆ. 48 ಎಸೆತಗಳನ್ನು ಎದುರಿಸಿದ ಸ್ಟೀವ್ ಸ್ಮಿತ್ 57 ರನ್‌ಗಳ ಕೊಡುಗೆಯನ್ನು ನೀಡಿದರು. ಸ್ಮಿತ್ ಅವರ ಈ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಗಿತ್ತು. ಆದರೆ ಇದು ಆಸಿಸ್ ತಂಡದ ಗೆಲುವಿಗೆ ಸಾಕಾಗಲಿಲ್ಲ. ಗೆಲುವಿಗೆ 153 ರನ್‌ಗಳ ಗುರಿ ಪಡೆದುಕೊಂಡಿದ್ದ ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ.

ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!

ಭಾರತದ ವಿರುದ್ಧದ ಈ ಸೋಲಿನ ಬಳಿಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತ ಅದ್ಭುತವಾದ ಆಟಗಾರರನ್ನು ಒಳಗೊಂಡಿದೆ. ಎಲ್ಲಾ ವಿಭಾಗಗಳನ್ನು ಕೂಡ ಸಂಪೂರ್ಣವಾಗಿ ಹೊಂದಿದೆ. ತಂಡದಲ್ಲಿ ಕೆಲ ಅದ್ಭುತವಾದ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ" ಎಂದು ಟೀಮ್ ಇಂಡಿಯಾವನ್ನು ಪ್ರಶಂಸಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಕಂಡೀಶನ್‌ನಲ್ಲಿ ಅವರು ಐಪಿಎಲ್‌ನಲ್ಲಿ ಭಾಗವಹಿಸಿರುವುದು ಅವರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಇನ್ನು ಸ್ಟೀವ್ ಸ್ಮಿತ್ ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಎರಡನೇ ಚರಣದಲ್ಲಿ ಕೇವಲ ಎರಡು ಪಂದ್ಯದಲ್ಲಿ ಮಾತ್ರವೇ ಸ್ಟೀವ್ ಸ್ಮಿತ್ ಆಡಿದ್ದಾರೆ. ಆದರೆ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಜೊತೆಗೆ ಎರಡು ಉತ್ತಮ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಸ್ಮಿತ್ ಮೊದಲಿಗೆ ಮ್ಯಾಕ್ಸ್‌ವೆಲ್ ಜೊತೆಗೆ 61 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರೆ ನಂತನ ಸ್ಟೋಯ್ನಿಸ್ ಜೊತೆ 86 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ನಾಲ್ಕು ಓವರ್‌ಗಳಾಗುವಾಗ 11 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಪ್ರದರ್ಶನ ಕೂಡ ಅತ್ಯುತ್ತಮವಾಗಿತ್ತು. ಆರ್ ಅಶ್ವಿವ್ ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾಗೆ ಆಘಾತ ನೀಡಿದರು. ಭುವನೇಶ್ವರ್ ಕುಮಾರ್ ರನ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗದ್ದಾರೆ. ರವೀಂದ್ರ ಜಡೇಜಾ ಹಾಗೂ ರಾಹುಲ್ ಚಾಹರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು.

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆಡಮ್ ಜಂಪಾ

ರಿಷಬ್ ಪಂತ್ ಗೆ ಧೋನಿಯಿಂದ ಸಖತ್ ಕ್ಲಾಸ್:ವಿಡಿಯೋ ವೈರಲ್ | Oneindia Kannada

Story first published: Thursday, October 21, 2021, 15:22 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X