ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

IND vs NZ ಮಾಡು ಇಲ್ಲವೇ ಮಡಿ ಪಂದ್ಯ | Oneindia Kannada

ಕಳೆದ ಅಕ್ಟೋಬರ್ 24ರ ಭಾನುವಾರದಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತು. ಇತ್ತ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಸೋಲುವುದರ ಮೂಲಕ ಟೂರ್ನಿಯಲ್ಲಿ ಕೆಟ್ಟ ಆರಂಭ ಪಡೆದುಕೊಳ್ಳುವುದರ ಮೂಲಕ ಆಡಿದ ಮೊದಲ ಪಂದ್ಯದ ಸೋಲಿನಿಂದಲೇ ಸೆಮಿಫೈನಲ್ ಪ್ರವೇಶಿಸುವ ಹಾದಿಯಲ್ಲಿ ಹಿನ್ನಡೆಯನ್ನು ಅನುಭವಿಸಿತು.

ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!

ಇನ್ನು ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡ ಪಾಕಿಸ್ತಾನ ಅಕ್ಟೋಬರ್ 26ರ ಮಂಗಳವಾರದಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ತನ್ನ ದ್ವಿತೀಯ ಪಂದ್ಯವನ್ನು ಗೆದ್ದು ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೌದು, ನ್ಯೂಜಿಲೆಂಡ್ ಮತ್ತು ಪಾಕ್ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಅತ್ತ ಪಾಕಿಸ್ತಾನ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿದೆ.

ಪಾಕ್ ವಿರುದ್ಧ ಸೋಲು, ಈಗ ಪ್ರಮುಖ ಆಟಗಾರ ತಂಡದಿಂದ ಔಟ್; ಭಾರತಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ!ಪಾಕ್ ವಿರುದ್ಧ ಸೋಲು, ಈಗ ಪ್ರಮುಖ ಆಟಗಾರ ತಂಡದಿಂದ ಔಟ್; ಭಾರತಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ!

ಪಾಕಿಸ್ತಾನ ತಂಡವೇನೋ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಸತತವಾಗಿ ಜಯ ಗಳಿಸುವುದರ ಮೂಲಕ ತನ್ನ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಗುಂಪಿನಲ್ಲಿದ್ದ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಮಣಿಸಿರುವ ಪಾಕಿಸ್ತಾನಕ್ಕೆ ಇನ್ನುಳಿದ ತಂಡಗಳನ್ನು ಸೋಲಿಸುವುದು ದೊಡ್ಡ ವಿಷಯವೇನಲ್ಲ. ಹೀಗಾಗಿ ಪಾಕಿಸ್ತಾನ ಗ್ರೂಪ್‌ 2ನಿಂದ ಸೆಮಿಫೈನಲ್ ಪ್ರವೇಶಿಸಲಿರುವ ಮೊದಲ ತಂಡವಾಗಿದೆ. ಆದರೆ ಸದ್ಯ ಸೆಮಿಫೈನಲ್ ಕುರಿತಾಗಿ ತಲೆನೋವು ಎದುರಾಗಿರುವುದು ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್‌ಗೆ. ಹೌದು, ಪಾಕ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಹೊರಬಿದ್ದ ನಂತರ ಈ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಹಾದಿ ಮತ್ತಷ್ಟು ಕಠಿಣವಾಗಿದೆ. ಸದ್ಯ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದು ಅನುಮಾನ ಎನ್ನುವುದರ ಹಿಂದಿರುವ ಕಾರಣಗಳಾದರೂ ಏನು ಎಂಬುವುದರ ಮಾಹಿತಿ ಮುಂದಿದೆ ಓದಿ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ!

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ!

ಹೌದು, ಭಾರತ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಸದ್ಯ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಸಹ ತಮ್ಮ ಮೊದಲನೇ ಪಂದ್ಯದಲ್ಲಿ ಸೋತಿದ್ದು ಈ ಎರಡೂ ತಂಡಗಳ ವಿರುದ್ಧ ಗೆದ್ದಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಪ್ರವೇಶಿಸುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಹೀಗಾಗಿ ಈ ಗುಂಪಿನಿಂದ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿರುವ ಮತ್ತೊಂದು ತಂಡದ ಸ್ಥಾನಕ್ಕೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದುವೇಳೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಗೆಲುವು ಸಾಧಿಸಿದರೆ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ ಮತ್ತು ಸೆಮಿಫೈನಲ್ ರೇಸ್‌ನಿಂದ ಟೀಮ್ ಇಂಡಿಯಾ ಬಹುತೇಕ ಹೊರಬೀಳಲಿದೆ. ಭಾರತ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ ಗುಂಪಿನಲ್ಲಿನ ಇನ್ನುಳಿದ ತಂಡಗಳ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲುವುದು ಕಷ್ಟದ ಕೆಲಸವಲ್ಲ. ಹೀಗಾಗಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ನ್ಯೂಜಿಲೆಂಡ್ ತಂಡಕ್ಕೆ ಇದೇ ಪರಿಸ್ಥಿತಿ ಬಂದೊದಗಲಿದೆ. ಇದೆಲ್ಲದರ ನಡುವೆ ಅಫ್ಘಾನಿಸ್ತಾನ ಮೊನ್ನೆಯ ರೀತಿ ಅತ್ಯುತ್ತಮ ನೆಟ್ ರನ್ ರೇಟ್ ಜೊತೆಗೆ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸೆಮಿಫೈನಲ್ ಹಾದಿ ಬಹಳಷ್ಟು ಕಠಿಣವಾಗಲಿದೆ.

ನ್ಯೂಜಿಲೆಂಡ್‌ ವಿರುದ್ಧ 18 ವರ್ಷಗಳಿಂದ ಐಸಿಸಿ ಪಂದ್ಯ ಗೆದ್ದಿಲ್ಲ ಭಾರತ

ನ್ಯೂಜಿಲೆಂಡ್‌ ವಿರುದ್ಧ 18 ವರ್ಷಗಳಿಂದ ಐಸಿಸಿ ಪಂದ್ಯ ಗೆದ್ದಿಲ್ಲ ಭಾರತ

ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಹಾಗೂ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆಲ್ಲಲಿದೆ ಎಂಬುದನ್ನು ಹೇಳುವುದು ಕಷ್ಟ. ಏಕೆಂದರೆ ಭಾರತ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದು 18 ವರ್ಷಗಳೇ ಕಳೆದಿವೆ. ಹೌದು 2003ರಲ್ಲಿ ನಡೆದಿದ್ದ ಐಸಿಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಇದಾದ ನಂತರ ನಡೆದ ಯಾವುದೇ ಐಸಿಸಿ ಪಂದ್ಯಾವಳಿಯ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸಿ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಾ ಎಂಬುದರ ಕುರಿತು ಅನುಮಾನದ ಹೊಗೆಯಾಡುತ್ತಿದೆ.

ನ್ಯೂಜಿಲೆಂಡ್ ವಿರುದ್ಧ ಕಳೆದೆರಡು ವರ್ಷಗಳಲ್ಲಿ ಭಾರತ ಎದುರಿಸುತ್ತಿರುವ 3ನೇ ಮಾಡು ಇಲ್ಲವೆ ಮಡಿ ಪಂದ್ಯವಿದು

ನ್ಯೂಜಿಲೆಂಡ್ ವಿರುದ್ಧ ಕಳೆದೆರಡು ವರ್ಷಗಳಲ್ಲಿ ಭಾರತ ಎದುರಿಸುತ್ತಿರುವ 3ನೇ ಮಾಡು ಇಲ್ಲವೆ ಮಡಿ ಪಂದ್ಯವಿದು

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಪಂದ್ಯಾವಳಿಗಳಲ್ಲಿ ಗೆದ್ದು 18 ವರ್ಷಗಳಾಗಿವೆ ಎಂಬ ಚಿಂತೆ ಒಂದೆಡೆಯಾದರೆ, ಕಳೆದೆರಡು ವರ್ಷಗಳಲ್ಲಿ ಇತ್ತಂಡಗಳ ನಡೆದಿರುವ ಐಸಿಸಿ ಪಂದ್ಯಾವಳಿಯ 2 ಮಾಡು ಇಲ್ಲವೇ ಮಡಿ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ಸೋಲುಣಿಸಿದೆ ಎನ್ನುವ ತಲೆನೋವು ಮತ್ತೊಂದೆಡೆ. ಹೌದು, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿದ್ದ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ನಂತರ ಪ್ರಸ್ತುತ ವರ್ಷದ ಪ್ರತಿಷ್ಠಿತ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೂಡ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಇದೀಗ ಇದೇ ರೀತಿಯ ಮಾಡು ಇಲ್ಲವೆ ಮಡಿ ಪಂದ್ಯ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿಯೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಕ್ಟೋಬರ್ 31ರ ಭಾನುವಾರ ನಡೆಯಲಿದ್ದು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲ್ಲುವುದರ ಮೂಲಕ ತನ್ನ ಗೆಲುವಿನ ಸರಪಳಿಯನ್ನು ಮುಂದುವರೆಸುತ್ತಾ ಅಥವಾ ಟೀಮ್ ಇಂಡಿಯಾ ಗೆಲ್ಲುವುದರ ಮೂಲಕ 18 ವರ್ಷಗಳ ನಂತರ ಐಸಿಸಿ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 27, 2021, 8:47 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X