ಪಾಕ್ ವಿರುದ್ಧ ಭಾರತ ಸೋತ ಬಳಿಕ ವಿರೇಂದ್ರ ಸೆಹ್ವಾಗ್ ಪ್ರಕಾರ ಈ ಬಾರಿ ಟ್ರೋಫಿ ಗೆಲ್ಲಲಿರುವ ತಂಡವಿದು

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಅತ್ಯುತ್ತಮ ಆರಂಭವನ್ನು ಪಡೆದುಕೊಳ್ಳುವುದರ ಮೂಲಕ ಸೂಪರ್ 12 ಗ್ರೂಪ್‌ 2ರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 2 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಎರಡೂ ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮವಾಗಿಸಿಕೊಂಡಿದೆ.

ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

ಕಳೆದ ಅಕ್ಟೋಬರ್ 24ರ ಭಾನುವಾರದಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತು. ಅಕ್ಟೋಬರ್ 26ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿಯೂ ಪಾಕಿಸ್ತಾನ ಗೆದ್ದು ಬೀಗಿದೆ. ಹೀಗೆ ಗ್ರೂಪ್‌ 2ರ ತಂಡಗಳ ಪೈಕಿ 2 ಬಲಿಷ್ಠ ತಂಡಗಳನ್ನು ಸೋಲಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಉತ್ತುಂಗಕ್ಕೇರಿದೆ.

ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'

ಅತ್ತ ಗ್ರೂಪ್‌ 1ರ ಅಂಕಪಟ್ಟಿಯಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯ ಸೂಪರ್ 12 ಹಂತದಲ್ಲಿ ತನ್ನ ಮೊದಲನೇ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಇಂಗ್ಲೆಂಡ್ ಭರ್ಜರಿ ಜಯ ಗಳಿಸುವುದರ ಮೂಲಕ ಶುಭಾರಂಭ ಮಾಡಿ ನಂತರ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಹೀಗೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ 2 ಪಂದ್ಯಗಳಲ್ಲಿ ಸತತವಾಗಿ ಗೆಲ್ಲುವುದರ ಮೂಲಕ ಸೆಮಿಫೈನಲ್ ಹಾದಿಯನ್ನು ಭದ್ರಪಡಿಸಿಕೊಂಡಿವೆ. ಇತ್ತ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಸೋತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಅಕ್ಟೋಬರ್ 31ರಂದು ಸೆಣಸಾಡಲಿದ್ದು ಈ ಪಂದ್ಯದಲ್ಲಿ ಸೋಲುವ ತಂಡ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಬಹುತೇಕ ಕಳೆದುಕೊಳ್ಳಲಿದೆ. ಹೀಗಾಗಿ ಈ ಪಂದ್ಯ ಗೆಲ್ಲುವುದು ಅತಿ ಮುಖ್ಯವಾಗಿದ್ದು, ಇವುಗಳ ನಡುವೆಯೇ ಯಾವ ತಂಡ ಸೆಮಿಫೈನಲ್ ಹಾಗೂ ಫೈನಲ್ ಹಂತವನ್ನು ಪ್ರವೇಶಿಸಲಿದೆ ಎಂಬ ಊಹೆಗಳು ಸಹ ನಡೆಯುತ್ತಿವೆ.

'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಇದೀಗ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋತ ನಂತರ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ಬಾರಿ ಯಾವ ತಂಡ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲಿದೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಸೆಹ್ವಾಗ್ ಪ್ರಕಾರ ಟ್ರೋಫಿ ಗೆಲ್ಲಲಿರುವ ತಂಡವಿದು

ಸೆಹ್ವಾಗ್ ಪ್ರಕಾರ ಟ್ರೋಫಿ ಗೆಲ್ಲಲಿರುವ ತಂಡವಿದು

"ನನ್ನ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿಯನ್ನು ಗೆಲ್ಲಲಿದೆ. ಮುಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಉತ್ತಮ ಕ್ರಿಕೆಟ್ ಆಡಬೇಕಿದೆ. ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿ ಟ್ರೋಫಿ ಗೆಲ್ಲಲಿದೆ ಎನ್ನುವ ನಂಬಿಕೆ ನನಗಿದೆ" ಎಂದು ವಿರೇಂದ್ರ ಸೆಹ್ವಾಗ್ ಭರವಸೆ ವ್ಯಕ್ತಪಡಿಸಿದ್ದಾರೆ.

ಗೆದ್ದಾಗ ಮಾತ್ರವಲ್ಲ ಸೋತಾಗಲೂ ನಮ್ಮ ತಂಡಕ್ಕೆ ಬೆಂಬಲ ನೀಡಬೇಕು

ಗೆದ್ದಾಗ ಮಾತ್ರವಲ್ಲ ಸೋತಾಗಲೂ ನಮ್ಮ ತಂಡಕ್ಕೆ ಬೆಂಬಲ ನೀಡಬೇಕು

"ನಮ್ಮ ಟೀಮ್ ಇಂಡಿಯಾ ಗೆದ್ದಾಗಲೆಲ್ಲಾ ನಾವು ಅವರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ಅದೇ ರೀತಿ ಟೀಮ್ ಇಂಡಿಯಾ ಸೋತಾಗಲೂ ಸಹ ಅವರ ಬೆನ್ನಿಗೆ ನಿಲ್ಲಬೇಕು" ಎಂದು ಹೇಳಿಕೆಯನ್ನು ನೀಡುವುದರ ಮೂಲಕ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋತ ನಂತರ ಭಾರತ ತಂಡ ಮತ್ತು ಅದರ ಆಟಗಾರರನ್ನು ನಿಂದಿಸುತ್ತಿರುವವರಿಗೆ ವಿರೇಂದ್ರ ಸೆಹ್ವಾಗ್ ತಿಳಿ ಹೇಳಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕು

ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕು

ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದು ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಎರಡೂ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಆ ತಂಡಕ್ಕೆ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ಅವಕಾಶಗಳು ಹೆಚ್ಚಿರಲಿವೆ. ಹೀಗಾಗಿ ಟೀಮ್ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಅಕ್ಟೋಬರ್ 31ರಂದು ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

Hardik Pandya ಮುಂದಿನ ಪಂದ್ಯದಲ್ಲಿ ಆಡೇ ಆಡ್ತಾರೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Thursday, October 28, 2021, 12:04 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X