ಟಿ20 ವಿಶ್ವಕಪ್: ರಾಹುಲ್, ಇಶಾನ್ ಕಿಶನ್ ಅಬ್ಬರ; ಅಭ್ಯಾಸ ಪಂದ್ಯದಲ್ಲಿ ಆಂಗ್ಲರಿಗೆ ಸೋಲುಣಿಸಿದ ಭಾರತ

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ 17ರ ಭಾನುವಾರದಿಂದ ಆರಂಭವಾಗಿವೆ. ಟೂರ್ನಿಯ ಸೂಪರ್ 12 ಹಂತ ಅಕ್ಟೋಬರ್ 23ರ ಶನಿವಾರದಿಂದ ಆರಂಭಗೊಳ್ಳಲಿದ್ದು ಇದಕ್ಕೂ ಮುನ್ನ ಕೆಲ ಅಭ್ಯಾಸ ಪಂದ್ಯಗಳಲ್ಲಿ ವಿವಿಧ ತಂಡಗಳು ಕಣಕ್ಕಿಳಿಯುತ್ತಿವೆ.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಹೀಗೆ ಅಭ್ಯಾಸ ಪಂದ್ಯಗಳ ಪೈಕಿ ಮೊದಲನೇ ಪಂದ್ಯ ಇಂದು ( ಅಕ್ಟೋಬರ್ 18 ) ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಮತ್ತು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡಗಳ ನಡುವೆ ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು.

ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾದ ಜೇಸನ್ ರಾಯ್ 17 ಮತ್ತು ತಂಡದ ನಾಯಕ ಜೋಸ್ ಬಟ್ಲರ್ 18 ರನ್ ಗಳಿಸಿ ದೊಡ್ಡ ಮಟ್ಟದ ಆರಂಭವನ್ನು ಕಟ್ಟಿಕೊಡುವಲ್ಲಿ ವಿಫಲರಾದರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ಮಲನ್ ಕೂಡ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ನಂತರ ಬಂದ ಜಾನಿ ಬೈರ್‌ಸ್ಟೋ 49, ಲಿಯಾಮ್ ಲಿವಿಂಗ್‌ಸ್ಟನ್ 30 ಮತ್ತು ಮೊಯಿನ್ ಅಲಿ ಅಜೇಯ 43 ರನ್ ಗಳಿಸಿ ಉತ್ತಮ ಆಟವನ್ನಾಡಿದರು ಹಾಗೂ ಕ್ರಿಸ್ ವೋಕ್ಸ್ ಅಜೇಯ 1 ರನ್ ಗಳಿಸಿದರು. ಅದರಲ್ಲಿಯೂ ಮೊಯಿನ್ ಅಲಿ 20 ಎಸೆತಗಳಲ್ಲಿ ಅಜೇಯ 43 ರನ್ ಬಾರಿಸುವುದರ ಮೂಲಕ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಟೀಮ್ ಇಂಡಿಯಾಗೆ 189 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು.

ದುಬೈನಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಮೇಣದ ಪ್ರತಿಮೆದುಬೈನಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ

ಇಂಗ್ಲೆಂಡ್ ನೀಡಿದ ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 19 ಓವರ್‌ಗಳಲ್ಲಿ 192 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು.

ಕೆಎಲ್ ರಾಹುಲ್ - ಇಶಾನ್ ಕಿಶನ್ ಅಬ್ಬರದ ಆರಂಭ

ಕೆಎಲ್ ರಾಹುಲ್ - ಇಶಾನ್ ಕಿಶನ್ ಅಬ್ಬರದ ಆರಂಭ

ಇಂಗ್ಲೆಂಡ್ ವಿರುದ್ಧದ ಈ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಪರ ಆರಂಭಿಕ ಆಟಗಾರರಾಗಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಕಣಕ್ಕಿಳಿದರು. ಈ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದ ಕಾರಣದಿಂದಾಗಿ ಕೆಎಲ್ ರಾಹುಲ್ ಜೊತೆ ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. 82 ರನ್‌ಗಳ ಜತೆಯಾಟವಾಡಿದ ಈ ಜೋಡಿ ಟೀಮ್ ಇಂಡಿಯಾಗೆ ಅಬ್ಬರದ ಆರಂಭವನ್ನು ನೀಡಿತು. ಈ ಮೂಲಕ ಮುಂದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಿದ್ದರೂ ಈ ಜೋಡಿ ತಂಡದ ಪರ ಉತ್ತಮ ಆರಂಭವನ್ನು ನೀಡಬಲ್ಲ ಸಾಮರ್ಥ್ಯವನ್ನೊಂದಿದೆ ಎಂಬ ಭರವಸೆಯನ್ನು ಹುಟ್ಟು ಹಾಕಿದೆ.

ಟೀಮ್ ಇಂಡಿಯಾ ಸಂಕ್ಷಿಪ್ತ ಸ್ಕೋರ್ ವಿವರ

ಟೀಮ್ ಇಂಡಿಯಾ ಸಂಕ್ಷಿಪ್ತ ಸ್ಕೋರ್ ವಿವರ

ಇಂಗ್ಲೆಂಡ್ ತಂಡ ನೀಡಿದ್ದ 189 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 24 ಎಸೆತಗಳಲ್ಲಿ 51 ರನ್ ಮತ್ತು ಇಶಾನ್ ಕಿಶನ್ 46 ಎಸೆತಗಳಿಗೆ 70 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 11 ರನ್ ಮತ್ತು ಸೂರ್ಯಕುಮಾರ್ ಯಾದವ್ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ ಅಜೇಯ 12 ಮತ್ತು ರಿಷಭ್ ಪಂತ್ 14 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದರು. ಅಂತಿಮವಾಗಿ 7 ಎಸೆತಗಳಿಗೆ 3 ರನ್ ಅಗತ್ಯ ಇದ್ದಾಗ ರಿಷಭ್ ಪಂತ್ ಕ್ರಿಸ್ ಜೋರ್ಡನ್ ಎಸೆತಕ್ಕೆ ಸಿಕ್ಸ್ ಬಾರಿಸುವ ಮೂಲಕ ಇನ್ನೂ ಒಂದು ಓವರ್‌ ಬಾಕಿ ಇರುವಾಗಲೇ ಟೀಂ ಇಂಡಿಯಾ ಗೆಲುವಿನ ದಡ ತಲುಪಿತು. ಈ ಮೂಲಕ ಟೀಮ್ ಇಂಡಿಯಾ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು.

ಶ್ರೇಯಸ್ ಐಯರ್ ನ ಬಿಟ್ಟು ಈತನನ್ನು ನಂಬಿದಕ್ಕೆ ಕೊಹ್ಲಿಗೆ ಮುಖಭಂಗ | Oneindia Kannada
ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ಚಹರ್ ಫ್ಲಾಪ್ ಶೋ

ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ಚಹರ್ ಫ್ಲಾಪ್ ಶೋ

ಇನ್ನು ಭಾರತದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ಚಹರ್ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದುಬಾರಿಯಾಗಿದ್ದಾರೆ. 4 ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯದೇ ಬರೋಬ್ಬರಿ 54 ರನ್ ನೀಡಿದರು. ರಾಹುಲ್ ಚಹರ್ ಕೂಡ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ ಕೇವಲ 1 ವಿಕೆಟ್ ಪಡೆಯುವಲ್ಲಿ ಶಕ್ತರಾದರು.

For Quick Alerts
ALLOW NOTIFICATIONS
For Daily Alerts
Story first published: Monday, October 18, 2021, 23:15 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X