ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಭಾರತಕ್ಕೆ ಸತತ ಜಯ; ಪಾಕಿಸ್ತಾನಕ್ಕೆ ಶುರು ಈ ತ್ರಿಮೂರ್ತಿಗಳ ಭಯ!

T20 World Cup 2021: Team Indian won against Australia by 9 wickets in a warm up match

ಕಳೆದ ಭಾನುವಾರದಿಂದ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಚಾಲನೆಯನ್ನು ಪಡೆದುಕೊಂಡಿದೆ.

ಈ ಅರ್ಹತಾ ಸುತ್ತಿನ ಪಂದ್ಯಗಳ ಜೊತೆಗೆ ವಿವಿಧ ತಂಡಗಳು ಅಭ್ಯಾಸ ಪಂದ್ಯಗಳಲ್ಲಿಯೂ ಕಣಕ್ಕಿಳಿದಿವೆ. ಇತ್ತೀಚಿಗಷ್ಟೆ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಅಭ್ಯಾಸ ಪಂದ್ಯವೊಂದು ನಡೆದಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಎದುರಾಳಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಇನ್ನು ಈ ಪಂದ್ಯದ ನಂತರ ಇಂದು ( ಅಕ್ಟೋಬರ್ 20 ) ಆಸ್ಟ್ರೇಲಿಯಾ ವಿರುದ್ಧವೂ ಕೂಡ ಭಾರತ ಅಭ್ಯಾಸ ಪಂದ್ಯವನ್ನಾಡಿದೆ.

ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಕಾರಣದಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದು ರೋಹಿತ್ ಶರ್ಮಾ ಈ ಪಂದ್ಯದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟಾಯಿನಿಸ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!

ಇನ್ನು ಆಸ್ಟ್ರೇಲಿಯಾ ನೀಡಿದ 153 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 9 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. 17.5 ಓವರ್‌ಗಳಲ್ಲಿ 153 ರನ್ ಬಾರಿಸಿದ ಟೀಮ್ ಇಂಡಿಯಾ 9 ವಿಕೆಟ್‍ಗಳ ಅಮೋಘ ಜಯವನ್ನು ಕಂಡಿದೆ. ಹೀಗೆ ಟೀಮ್ ಇಂಡಿಯಾ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದು, ಈ ಕೆಳಕಂಡ ತ್ರಿಮೂರ್ತಿಗಳ ಭಯ ಇದೀಗ ಪಾಕಿಸ್ತಾನ ತಂಡಕ್ಕೆ ಶುರುವಾಗಿಬಿಟ್ಟಿದೆ.

ಪಾಕಿಸ್ತಾನಕ್ಕೆ ಶುರುವಾಯಿತು ಈ ತ್ರಿಮೂರ್ತಿಗಳ ಭಯ

ಪಾಕಿಸ್ತಾನಕ್ಕೆ ಶುರುವಾಯಿತು ಈ ತ್ರಿಮೂರ್ತಿಗಳ ಭಯ

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹುಟ್ಟು ಹಾಕಿದೆ. ಇದರ ಜೊತೆಗೆ ಇದೀಗ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಟೀಮ್ ಇಂಡಿಯಾ ವಿರುದ್ಧ ಆಡಲಿರುವ ಪಾಕಿಸ್ತಾನ ತಂಡಕ್ಕೆ ತ್ರಿಮೂರ್ತಿಗಳ ಭಯ ಶುರುವಾಗಿದೆ. ಹೌದು, ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡದ ಪರ ಯಾರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಬೇಕೆಂಬ ಗೊಂದಲಗಳಿತ್ತು. ಆದರೆ ಈ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಎರಡು ರೀತಿಯ ಆರಂಭಿಕ ಜೋಡಿಗಳನ್ನು ಕಣಕ್ಕಿಳಿಸಲಾಗಿದ್ದು ಎರಡೂ ಆಯ್ಕೆಗಳೂ ಸಹ ಕೆಲಸ ಮಾಡಿವೆ. ಹೌದು ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಆರಂಭಿಕ ಜೋಡಿ ತಲಾ ಅರ್ಧಶತಕಗಳ ಆಟವನ್ನು ಆಡುವುದರ ಮೂಲಕ ಮಿಂಚಿತ್ತು. ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಆರಂಭಿಕ ಜೋಡಿ ಕೂಡ ಉತ್ತಮ ಆಟವನ್ನಾಡಿತು. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಕೆ ಎಲ್ ರಾಹುಲ್ ಅರ್ಧ ಶತಕವನ್ನು ಸಿಡಿಸಿದರೆ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗೆ ಭಾರತ ತಂಡದ ಎರಡೂ ಆರಂಭಿಕ ಜೋಡಿಗಳೂ ಸಹ ಉತ್ತಮ ಪ್ರದರ್ಶನ ನೀಡಿರುವುದು ಸದ್ಯ ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೂವರು ಸಹ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿರುವುದು ಪಾಕಿಸ್ತಾನ ಪಾಳಯದಲ್ಲಿ ಭಯ ಹುಟ್ಟಿಸಿರುವುದಂತೂ ಸುಳ್ಳಲ್ಲ.

ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್

ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್

ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ಸಿಡಿಸುವುದರ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. 41 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 60 ರನ್ ಚಚ್ಚುವುದರ ಮೂಲಕ 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಇನ್ನುಳಿದಂತೆ ಕೆಎಲ್ ರಾಹುಲ್ 39 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಅಜೇಯ 38 ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 14 ರನ್ ಗಳಿಸುವುದರ ಮೂಲಕ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.

ಅಂತೂ ಟೀಂ ಇಂಡಿಯಾದ ಹೊಸ ನಾಯಕ ಯಾರು ಅಂತಾ ಕನ್ಫರ್ಮ್ ಮಾಡ್ತು BCCI | Oneindia Kannada
ಅಶ್ವಿನ್ ಕಮ್ ಬ್ಯಾಕ್

ಅಶ್ವಿನ್ ಕಮ್ ಬ್ಯಾಕ್

4 ವರ್ಷಗಳ ಬಳಿಕ ರವಿಚಂದ್ರನ್ ಅಶ್ವಿನ್ ಅವರಿಗೆ ಭಾರತ ಟ್ವೆಂಟಿ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಹೀಗೆ ದೊಡ್ಡ ಅಂತರದ ನಂತರ ಟೀಮ್ ಇಂಡಿಯಾ ಸೇರಿರುವ ರವಿಚಂದ್ರನ್ ಅಶ್ವಿನ್ ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಕುತೂಹಲ ಮನೆಮಾಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಅಭ್ಯಾಸ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ರವಿಚಂದ್ರನ್ ಅಶ್ವಿನ್ 23 ರನ್ ನೀಡಿದ್ದರು ಹಾಗೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಹೀಗೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಈ ಪಂದ್ಯದಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿದ ಅಶ್ವಿನ್ 8 ರನ್ ನೀಡಿ, 2 ವಿಕೆಟ್ ಪಡೆದು ಮಿಂಚಿದರು.

Story first published: Thursday, October 21, 2021, 9:45 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X