ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಗೆಲ್ಲಲು ಈ ಮೂವರು ಭಾರತ ತಂಡದಲ್ಲಿ ಇರಲೇಬೇಕು: ಸಲ್ಮಾನ್ ಬಟ್

T20 World Cup 2021: These 3 players must be included in Team Indian against New Zealand says Salman But

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯವೊಂದರಲ್ಲಿ ಇಂದು ( ಅಕ್ಟೋಬರ್ 31 ) ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ.

ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!

ಈ ಬಾರಿಯ ಟೂರ್ನಿಯ ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಟೂರ್ನಿಯ ತಮ್ಮ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದ್ದವು. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ ಟೀಮ್ ಇಂಡಿಯಾ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯದಲ್ಲಿಯೇ ಬದ್ಧ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿತ್ತು. ಅತ್ತ ಅಕ್ಟೋಬರ್ 26ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ಜೊತೆ ಸೆಣಸಾಡಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಕೂಡ ಸೋಲನುಭವಿಸುವುದರ ಮೂಲಕ ಟೂರ್ನಿಯಲ್ಲಿ ನೀರಸ ಆರಂಭವನ್ನು ಪಡೆದುಕೊಂಡಿತ್ತು.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಗೆಲ್ಲಲು ಈ ಇಬ್ಬರನ್ನು ಭಾರತ ತಂಡದಿಂದ ಕೈಬಿಡಬೇಕು: ಗವಾಸ್ಕರ್ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಗೆಲ್ಲಲು ಈ ಇಬ್ಬರನ್ನು ಭಾರತ ತಂಡದಿಂದ ಕೈಬಿಡಬೇಕು: ಗವಾಸ್ಕರ್

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನ ಇತ್ತೀಚೆಗಷ್ಟೇ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಜಯಗಳಿಸುವುದರ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಗೆಲುವನ್ನು ದಾಖಲಿಸಿ ತನ್ನ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಹೀಗಾಗಿ ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಲಿರುವ ದ್ವಿತೀಯ ತಂಡ ಯಾವುದು ಎಂಬುದನ್ನು ಇಂದು ( ಅಕ್ಟೋಬರ್ 31 ) ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಬಹುತೇಕ ತೀರ್ಮಾನಿಸಲಿದೆ. ಈ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮುಂದೆ ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆಗಳು ತೀರಾ ಕಡಿಮೆ ಇರಲಿದ್ದು,

ಇಶಾನ್ ಕಿಶನ್ ತಂಡಕ್ಕೆ ಬೇಕು

ಇಶಾನ್ ಕಿಶನ್ ತಂಡಕ್ಕೆ ಬೇಕು

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಇಶಾನ್ ಕಿಶನ್ ಅವರಿಗೆ ಆಡುವ ಅವಕಾಶ ನೀಡಬೇಕೆಂದು ಸಲ್ಮಾನ್ ಬಟ್ ಹೇಳಿಕೆ ನೀಡಿದ್ದಾರೆ. "ಇಶಾನ್ ಕಿಶನ್ ಉತ್ತಮ ಫಾರ್ಮ್ ಹೊಂದಿದ್ದಾನೆ, ಹೀಗಾಗಿ ಟೀಮ್ ಇಂಡಿಯಾ ಆತನನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾನು ಹಲವಾರು ದಿನಗಳಿಂದ ಹೇಳುತ್ತಾ ಬಂದಿದ್ದೇನೆ" ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇಶಾನ್ ಕಿಶನ್ ಬೇಕು ಎಂಬುದನ್ನು ಸಲ್ಮಾನ್ ಬಟ್ ತಿಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್

"ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶವನ್ನು ನೀಡಬೇಕು. ಆತ ಓರ್ವ ಅತ್ಯುನ್ನತ ಸ್ಪಿನ್ನರ್ ಹಾಗೂ ವಿಕೆಟ್ ಉರುಳಿಸುವಂತಹ ಬೌಲರ್. ಆತನನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠವಾಗಲಿದೆ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್

ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್

"ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅಲಭ್ಯರಾದರೆ ಆ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಕರೆತರಬೇಕು. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಕೊಡುಗೆಯನ್ನು ನೀಡಲಿದ್ದಾರೆ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಹೀಗೆ ಇಂದು ( ಅಕ್ಟೋಬರ್ 31 ) ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕೆಂದರೆ ಈ ಮೂವರು ಆಟಗಾರರು ತಂಡದಲ್ಲಿರಬೇಕೆಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದ್ದಾರೆ.

Story first published: Sunday, October 31, 2021, 11:42 [IST]
Other articles published on Oct 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X