ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆಯಾಗುವ ಮೂವರು ಕ್ರಿಕೆಟಿಗರನ್ನು ಹೆಸರಿಸಿದ ಕೈಫ್

ಮುಂಬರುವ ಏಷ್ಯಾ ಕಪ್ 2022ಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ ಮತ್ತು ಇದರೊಂದಿಗೆ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2022ರ ಅಂತಿಮ ತಂಡಕ್ಕೆ ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದರ ಕುರಿತು ಬಿಸಿಸಿಐ ಮೂಲಗಳು ಸುಳಿವು ನೀಡಿವೆ.

ಆದಾಗ್ಯೂ, 2022ರ ಏಷ್ಯಾ ಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಆಟಗಾರರು ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್ ತಂಡಕ್ಕೆ ಇನ್ನೂ ಸ್ಥಾನ ಪಡೆಯಲು ಸಮಯ ಮತ್ತು ಅವಕಾಶವಿದೆ. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಖಾಸಗಿ ಮಾಧ್ಯಮದ ಜೊತೆಗಿನ ವಿಶೇಷ ಸಂವಾದದಲ್ಲಿ ಭಾರತೀಯ ತಂಡಕ್ಕೆ ಮರಳಬಹುದಾದ ಮೂವರು ಭಾರತೀಯರನ್ನು ಆಯ್ಕೆ ಮಾಡಿದ್ದಾರೆ.

Asia Cup 2022: ಈಗಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಬಾಬರ್ ಅಜಂ ನಾಯಕತ್ವದ ಪಾಕ್ ಟೀಂAsia Cup 2022: ಈಗಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಬಾಬರ್ ಅಜಂ ನಾಯಕತ್ವದ ಪಾಕ್ ಟೀಂ

ಮೊಹಮ್ಮದ್ ಕೈಫ್ ಪ್ರಕಾರ, ವೇಗಿ ದೀಪಕ್ ಚಾಹರ್, ಆಲ್‌ರೌಂಡರ್ ದೀಪಕ್ ಹೂಡಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ 2022ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡಕ್ಕೆ ಮರಳಬಹುದು. ದೀಪಕ್ ಚಾಹರ್ ಕೊನೆಯದಾಗಿ ಭಾರತೀಯ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ ತಿಂಗಳಲ್ಲಿ ಆಡುವಾಗ ಬೆನ್ನುನೋವಿನಿಂದ ಬಳಲುತ್ತಿದ್ದರು ಮತ್ತು ಹೊರಗುಳಿದಿದ್ದರು. ನಂತರ ಅವರು ಐಪಿಎಲ್ 2022ರಿಂದಲೂ ಹೊರಗುಳಿದಿದ್ದರು.

ದೀಪಕ್ ಚಹಾರ್ ಟೀಮ್ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು

ದೀಪಕ್ ಚಹಾರ್ ಟೀಮ್ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು

ಆದರೆ, ದೀಪಕ್ ಚಹಾರ್ 2022ರ ಏಷ್ಯಾ ಕಪ್‌ಗೆ ಸ್ಟ್ಯಾಂಡ್-ಬೈ ಆಟಗಾರನಾಗಿ ಭಾರತೀಯ ತಂಡಕ್ಕೆ ಮರಳಿದರು ಮತ್ತು ಜಿಂಬಾಬ್ವೆ ಸರಣಿಯ ಏಕದಿನ ತಂಡದಲ್ಲಿಯೂ ಸಹ ಅವರನ್ನು ಹೆಸರಿಸಲಾಗಿದೆ. "ನಾವು ಕೊನೆಯ ಬಾರಿಗೆ ದೀಪಕ್ ಚಹರ್ ಅವರನ್ನು ತಂಡದಲ್ಲಿ ನೋಡಿ ಬಹಳ ಸಮಯವಾಗಿದೆ. ಅವರು ಕೊನೆಯ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಆಲ್‌ರೌಂಡರ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿದರು. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರು ಟೀಮ್ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು. ಅವರನ್ನು ಆಯ್ಕೆ ಮಾಡಲಾಗುತ್ತದೆ. ಜಿಂಬಾಬ್ವೆ ಸರಣಿಯು ಅವರಿಗೆ ನಿರ್ಣಾಯಕವಾಗಿರುತ್ತದೆ," ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದರು.

ಆಲ್‌ರೌಂಡರ್ ದೀಪಕ್ ಹೂಡಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ

ಆಲ್‌ರೌಂಡರ್ ದೀಪಕ್ ಹೂಡಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ

ಟಿ20 ವಿಶ್ವಕಪ್ ತಂಡಕ್ಕೆ ಯಾವ ಆಲ್‌ರೌಂಡರ್ ಸ್ಥಾನ ಪಡೆಯಬಹುದು ಎಂದು ಕೇಳಿದಾಗ ಮೊಹಮ್ಮದ್ ಕೈಫ್ ಅವರು ದೀಪಕ್ ಹೂಡಾ ಎಂಬ ಪ್ರಬಲ ಹೆಸರನ್ನು ಆಯ್ಕೆ ಮಾಡಿ ಹೀಗೆ ಹೇಳಿದ್ದಾರೆ, "ದೀಪಕ್ ಅವರು ಮಧ್ಯಮ ಆರ್ಡರ್‌ನಲ್ಲಿ ಮತ್ತು ಅಗ್ರ ಕ್ರಮಾಂಕದಲ್ಲಿಯೂ ಬ್ಯಾಟ್ ಮಾಡಬಲ್ಲ ವ್ಯಕ್ತಿ. ಅವರು ಇತ್ತೀಚಿನ ಸರಣಿಯಲ್ಲಿ ಕೆಲವು ಅದ್ಭುತ ಪ್ರದರ್ಶನಗಳನ್ನು ಆಡಿದ್ದಾರೆ. ಅವರು ಆಫ್-ಸ್ಪಿನ್ ಬೌಲ್ ಮಾಡುತ್ತಾರೆ ಮತ್ತು ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ ಅವರನ್ನು ಪ್ರಬಲ ಆಯ್ಕೆಯನ್ನಾಗಿ ಮಾಡುತ್ತೇನೆ," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.

ಕುಲದೀಪ್ ಯಾದವ್ ಟಿ20 ವಿಶ್ವಕಪ್ ತಂಡಕ್ಕೆ ಪುನರಾಗಮನ

ಕುಲದೀಪ್ ಯಾದವ್ ಟಿ20 ವಿಶ್ವಕಪ್ ತಂಡಕ್ಕೆ ಪುನರಾಗಮನ

ಇನ್ನು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಿಸಿರುವುದರಿಂದ ಟಿ20 ತಂಡಕ್ಕೆ ಮರಳಬಹುದು ಎಂದು ಮೊಹಮ್ಮದ್ ಕೈಫ್ ಭಾವಿಸಿದ್ದಾರೆ. "ಕುಲದೀಪ್ ಐಪಿಎಲ್ 2022ರಲ್ಲಿ ಅದ್ಭುತ ಎಕಾನಮಿಯಲ್ಲಿ ನೀಡಿದ್ದರು. ಆದರೆ ಅವರ ಗಾಯದ ನಂತರ ಅವರು ಹೆಚ್ಚು ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಈಗ ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್ ಪಟ್ಟಿಯಲ್ಲಿ ಮುಂದಿದ್ದಾರೆ. ಆದರೆ ಕುಲದೀಪ್ ಇನ್ನೂ ಸರಣಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಪುನರಾಗಮನ ಮಾಡಬಹುದು," ಎಂದು ಮಾಜಿ ಬಲಗೈ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 22:57 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X