ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಟಾಪ್-5ರಲ್ಲಿ ಆಸಕ್ತಿ ಇಲ್ಲ; ದಿನೇಶ್ ಕಾರ್ತಿಕ್ ಬಗ್ಗೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ

T20 World Cup 2022: No Interest In Top-5; Gautam Gambhirs Big Statement About Dinesh Karthik

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಇದೀಗ ಎಲ್ಲರ ಗಮನವು ಆಡುವ ಹನ್ನೊಂದರ ಬಳಗದ ಮೇಲೆ ಕೇಂದ್ರೀಕೃತವಾಗಿದೆ. ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಇಬ್ಬರು ನಿಯೋಜಿತ ವಿಕೆಟ್ ಕೀಪರ್‌ಗಳಾಗಿದ್ದಾರೆ.

ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಫಿನಿಶರ್ ಆಗಿ ಮತ್ತು ಭಾರತಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅದ್ಭುತವಾಗಿದ್ದರೂ, ರಿಷಭ್ ಪಂತ್ ಪ್ರಮುಖ ಸಂದರ್ಭಗಳಲ್ಲಿ ಮಿಂಚುವ ಸರಣಿಯನ್ನು ತೋರಿಸಿದ್ದಾರೆ.

ಮೊಹಮ್ಮದ್ ಶಮಿಗೆ ಕೋವಿಡ್-19 ಪಾಸಿಟಿವ್; ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಿಂದ ಔಟ್!ಮೊಹಮ್ಮದ್ ಶಮಿಗೆ ಕೋವಿಡ್-19 ಪಾಸಿಟಿವ್; ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಿಂದ ಔಟ್!

ಶನಿವಾರದಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರನ್ನು ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಇಬ್ಬರನ್ನೂ ಒಂದೇ ಆಡುವ 11ರ ಬಳಗದಲ್ಲಿ ಆಡುವುದು ವಿವೇಕಯುತ ಕ್ರಮವೇ ಎಂದು ಕೇಳಲಾಯಿತು. ಇದಕ್ಕೆ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಒಪ್ಪಲಿಲ್ಲ.

ಇಬ್ಬರೂ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ನಾನು ನೋಡುವುದಿಲ್ಲ

ಇಬ್ಬರೂ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ನಾನು ನೋಡುವುದಿಲ್ಲ

"ನೀವು ಹಾಗೆ ಮಾಡಲು ಸಾಧ್ಯವಿಲ್ಲ. ನೀವು ಹಾಗೆ ಮಾಡಿದರೆ, ನೀವು ಆರನೇ ಬೌಲರ್ ಅನ್ನು ಕಳೆದುಕೊಳ್ಳುತ್ತೀರಿ ಮತ್ತು ನೀವು ಐದು ಬೌಲರ್‌ಗಳೊಂದಿಗೆ ವಿಶ್ವಕಪ್‌ಗೆ ಹೋಗುವುದಕ್ಕೆ ಆಗಲ್ಲ, ನೀವು ಬ್ಯಾಕ್ಅಪ್ ಹೊಂದಿರಬೇಕು. ನೀವು ಸೂರ್ಯಕುಮಾರ್ ಯಾದವ್‌ರಂತಹವರನ್ನು ಕೈಬಿಡದಿದ್ದರೆ ಅಥವಾ ಕೆಎಲ್ ರಾಹುಲ್ ಕೆಟ್ಟ ಪಂದ್ಯಾವಳಿಯನ್ನು ಹೊಂದಿದ್ದಾರೆ. ನೀವು ರಿಷಭ್ ಪಂತ್‌ರೊಂದಿಗೆ ಬ್ಯಾಟಿಂಗ್ ಅನ್ನು ಪ್ರಾರಂಭಿಸಬಹುದು. ಇಲ್ಲದಿದ್ದರೆ, ಈ ಇಬ್ಬರೂ (ಕಾರ್ತಿಕ್-ಪಂತ್) ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ನಾನು ನೋಡುವುದಿಲ್ಲ," ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದಿನೇಶ್ ಕಾರ್ತಿಕ್ ಅಗ್ರ ಕ್ರಮಾಂಕದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲ

ದಿನೇಶ್ ಕಾರ್ತಿಕ್ ಅಗ್ರ ಕ್ರಮಾಂಕದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲ

ದಿನೇಶ್ ಕಾರ್ತಿಕ್ ಅಗ್ರ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಲು "ಆಸಕ್ತಿಯನ್ನು ತೋರಿಸದ ಕಾರಣ' ರಿಷಭ್ ಪಂತ್ ಅವರು ತಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಗೌತಮ್ ಗಂಭೀರ್ ತಿಳಿಸಿದರು.

"ಇನ್ನಿಂಗ್ಸ್ ಪ್ರಾರಂಭಿಸಲು ರಿಷಬ್ ಪಂತ್ ಇದ್ದಾರೆ. ನಾನು ಈ ಹಿಂದೆಯೂ ಹೇಳಿದ್ದರಿಂದ ನೀವು 10-12 ಎಸೆತಗಳನ್ನು ಆಡಲು ಮಾತ್ರ ಟಿ20 ಆಟಗಾರನನ್ನು ಆಯ್ಕೆ ಮಾಡುವುದಿಲ್ಲ. ಅವರು ನಿಮ್ಮ ಪಂದ್ಯಗಳನ್ನು ಗೆಲ್ಲಿಸುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಮತ್ತು ದುರದೃಷ್ಟವಶಾತ್, ದಿನೇಶ್ ಕಾರ್ತಿಕ್ ಟಾಪ್-5ರಲ್ಲಿ ಬ್ಯಾಟಿಂಗ್ ಮಾಡಲು ಆಸಕ್ತಿ ತೋರಿಸಿಲ್ಲ. ನಿಮ್ಮ ವಿಕೆಟ್‌ಕೀಪರ್ ಟಾಪ್-5ರಲ್ಲಿ ಬ್ಯಾಟಿಂಗ್ ಮಾಡಲು ಶಕ್ತರಾಗಿರಬೇಕು ಮತ್ತು ರಿಷಭ್ ಪಂತ್ ಆ ವಿಷಯಕ್ಕಾಗಿ ಯಾವುದೇ ಸಂಖ್ಯೆಯಲ್ಲಿ ಬ್ಯಾಟ್ ಮಾಡುವ ಗುಣವನ್ನು ಹೊಂದಿದ್ದಾರೆ," ಎಂದು ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.

ರಿಷಭ್ ಪಂತ್ ನಂ.5ರಲ್ಲಿ ಬ್ಯಾಟಿಂಗ್ ಮಾಡಬಲ್ಲರು

ರಿಷಭ್ ಪಂತ್ ನಂ.5ರಲ್ಲಿ ಬ್ಯಾಟಿಂಗ್ ಮಾಡಬಲ್ಲರು

"ನನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ರಿಷಭ್ ಪಂತ್ ಖಂಡಿತವಾಗಿಯೂ ಇರುತ್ತಾರೆ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರ ಬೇಕು ಎಂಬ ಕಲ್ಪನೆಯನ್ನು ನಾನು ನಂಬುವುದಿಲ್ಲ. ವಿಶೇಷವಾಗಿ ಭಾರತದಂತಹ ತಂಡದಲ್ಲಿ ಅದು ಮಾನದಂಡವಲ್ಲ. ಮಾನದಂಡ ಹೀಗಿರಬೇಕು, ನೀವು ಪಂದ್ಯವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದೀರಾ? ಮತ್ತು ರಿಷಭ್ ಪಂತ್‌ಗೆ ಅದು ಇದೆ. ಹೌದು, ರಿಷಭ್ ಪಂತ್ ನಂ.5ರಲ್ಲಿ ಬ್ಯಾಟಿಂಗ್ ಮಾಡಿದರೆ, ಹಾರ್ದಿಕ್ ಪಾಂಡ್ಯ 6, ಅಕ್ಷರ್ ಪಟೇಲ್ 7 ಮತ್ತು ರವಿಚಂದ್ರನ್ ಅಶ್ವಿನ್ 8ರಲ್ಲಿ ಬರುತ್ತಾರೆ, ನಂತರ ಮೂರು ವೇಗಿಗಳು," ಎಂದು ತಿಳಿಸಿದರು.

ಟಿ20 ವಿಶ್ವಕಪ್‌ಗಾಗಿ ಭಾರತದ ಪೂರ್ಣ ತಂಡ

ಟಿ20 ವಿಶ್ವಕಪ್‌ಗಾಗಿ ಭಾರತದ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Sunday, September 18, 2022, 9:57 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X