ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಮಾತ್ರವಲ್ಲ, ಟಿ20 ವಿಶ್ವಕಪ್‌ಗೂ ಜಸ್ಪ್ರೀತ್ ಬೂಮ್ರಾ ಅನುಮಾನ!

T20 world cup 2022: Not only Asia Cup Jasprit Bumrah can be doubtful for T20 World Cup also

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎರಡು ದೊಡ್ಡ ಟೂರ್ನಿಗಳು ನಡೆಯಲಿದೆ. ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಯನ್ನು ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಟೀಮ್ ಇಂಡಿಯಾ ಸರ್ವ ಪ್ರಯತ್ನವನ್ನೂ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯಾಗುವ ಲಕ್ಷಣಗಳು ಕಾಣಿಸಿದೆ. ತಂಡದ ಪ್ರಮುಖ ಅಸ್ತ್ರವಾಗಬೇಕಿದ್ದ ಆಟಗಾರ ಈ ಎರಡೂ ಟೂರ್ನಿಗಳಿಗೆ ಲಭ್ಯವಾಗುವಂತಾ ಬೆಳವಣಿಗೆ ನಡೆದಿದೆ.

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ ಗಾಯದ ಕಾರಣದಿಂದಾಗಿ ಈಗಾಗಲೇ ಏಷ್ಯಾ ಕಪ್‌ನಿಂದ ಹೊರಬಿದ್ದಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ವಿಶ್ವಕಪ್‌ಗೆ ಜಸ್ಪ್ರೀತ್ ಬೂಮ್ರಾ ಲಭ್ತವಾಗಬಹುದು ಎಂಬ ನಿರೀಕ್ಷೆಯಿಟ್ಟುಕೊಳ್ಳಲಾಗಿದೆ. ಆದರೆ ಬಿಸಿಸಿಐನ ಅಧಿಕಾರಿಯೊಬ್ಬರು ಬೂಮ್ರಾ ಗಾಯದ ಬಗ್ಗೆ ನೀಡಿರುವ ಮಾಹಿತಿ ಹಿನ್ನಡೆಯುಂಟಾಗುವ ಸುಳಿವು ನೀಡಿದೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

ಮತ್ತೆ ಜೋರಾಗಿ ಕಾಡುತ್ತಿದೆ ಬೆನ್ನುನೋವು

ಮತ್ತೆ ಜೋರಾಗಿ ಕಾಡುತ್ತಿದೆ ಬೆನ್ನುನೋವು

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ 2019ರಲ್ಲಿ ತೀವ್ರ ನೋವಿಗೆ ತುತ್ತಾಗಿ ಸುದೀರ್ಘ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಬೂನ್ರಾಗೆ ಬೆನ್ನುನೋವ ಕಾಡುತ್ತಿದೆ ಎನ್ನಲಾಗಿದೆ. ಇನ್ನು ವಿಶ್ವಕಪ್‌ನ ತಂಡದ ಘೋಷಣೆಗೆ ಕೇವಲ ಒಮದು ತಿಣಗಳ ಕಾಲಾವಕಾಶ ಮಾತ್ರವೇ ಬಾಕಿಯಿದೆ. ಹೀಗಾಗಿ ಬಿಸಿಸಿಐ ಹಾಗೂ ಆಯ್ಕೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

"ಕಳವಳಕಾರಿಯಾಗಿರುವುದು ನಿಜ"

ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್‌ ಬೌಲ್ಟ್‌! ಏಕೆ ಈ ನಿರ್ಧಾರ?
ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್‌ಗೆ ಮಾಹಿತಿಯನ್ನು ನೀಡಿದ್ದಾರೆ. "ಹೌದು, ಬೂಮ್ರಾ ಗಾಯ ಕಳವಳಕಾರಿಯಾಗಿದೆ. ಅವರು ರಿಹ್ಯಾಬ್‌ಗೆ ಬಂದು ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ನೆರವನ್ನು ಪಡೆಯುತ್ತಿದ್ದಾರೆ. ಸಮಸ್ಯೆಯೆಂದರೆ ಅದು ಅವರ ಹಳೆಯ ಗಾಯವಾಗಿದೆ. ಅದೇ ಕಳವಳಕ್ಕೆ ಕಾರಣ. ಈಗ ನಾವು ಕೇವಲ ವಿಶ್ವಕಪ್‌ಗೆ ಕೇವಲ ಎರಡು ತಿಂಗಳ ಅಂತರದಲ್ಲಿದ್ದೇವೆ. ಈ ಸಂದರ್ಭದಲ್ಲಿಯೇ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಅವರ ಸ್ಥಿತಿಯನ್ನು ವಿಶ್ಲೇಷಣೆ ಮಾಡಲಿದ್ದೇವೆ. ಅವರು ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಆಗಿದ್ದು ಎಚ್ಚರಿಕೆಯಿಂದ ಈ ಗಾಯವನ್ನು ನಿರ್ವಹಿಸಬೇಕಿದೆ" ಎಂದಿದ್ದಾರೆ ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಅಧಿಕಾರಿ.

ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್‌ ಬೌಲ್ಟ್‌! ಏಕೆ ಈ ನಿರ್ಧಾರ?

ವಿಶ್ವಕಪ್‌ಗೆ ಕರೆ ಸ್ವೀಕರಿಸಲಿದ್ದಾರಾ ಮೊಹಮ್ಮದ್ ಶಮಿ

ವಿಶ್ವಕಪ್‌ಗೆ ಕರೆ ಸ್ವೀಕರಿಸಲಿದ್ದಾರಾ ಮೊಹಮ್ಮದ್ ಶಮಿ

ಜಸ್ಪ್ರೀತ್ ಬೂಮ್ರಾ ಜೊತೆಗೆ ಹರ್ಷಲ್ ಪಟೇಲ್ ಗಾಯಗೊಂಡಿದ್ದು ಏಷ್ಯಾಕಪ್‌ಗೆ ಅಲಭ್ಯವಾಗಿದ್ದಾರೆ. ಬೂಮ್ರಾ ಅವರಂತೆಯೇ ಹರ್ಷಲ್ ಕೂಡ ವಿಶ್ವಕಪ್‌ಗೆ ಅಲಭ್ಯವಾಗುವ ಸಾಧ್ಯತೆಯಿದೆ. ಹೀಗಾಗಿ ಟಿ20 ವಿಶ್ವಕಪ್‌ಗೆ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಹರ್ಷಲ್ ಪಟೇಲ್ ಹಾಗೂ ಬೂಮ್ರಾ ಇಬ್ಬರು ಕೂಡ ಆಸ್ಟ್ರೇಲಿಯಾ್ಎ ಪ್ರಯಣಿಸುವುದು ಅಸಾಧ್ಯವಾದರೆ ಶಮಿ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದರಲ್ಲಿ ಅನುಮಾನವಿಲ್ಲ.

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!

ಆಯ್ಕೆ ಸಮಿತಿ ಸದಸ್ಯರು ಹೇಳಿದ್ದಿಷ್ಟು!

ಆಯ್ಕೆ ಸಮಿತಿ ಸದಸ್ಯರು ಹೇಳಿದ್ದಿಷ್ಟು!

"ನೋಡಿ, ಮೊಹಮ್ಮದ್ ಶಮಿ ಸಣ್ಣವರಾಗುತ್ತಿಲ್ಲ. ಅವರ ಕಾರ್ಯದ ಒತ್ತಡವನ್ನು ಕೂಡ ನಾವು ನಿರ್ವಹಿಸಬೇಕು. ಹಾಗಾಗಿಯೇ ಟಿ20 ಮಾದರಿಗೆ ಪರಿಗಣಿಸುವುದಿಲ್ಲ ಎಂದು ಈಗಾಗಲೇ ಅವರಿಗೆ ತಿಳಿಸಿದ್ದೇವೆ. ಆದರೆ ನಮ್ಮ ಇಬ್ಬರು ಪ್ರಮುಖ ಬೌಲರ್‌ಗಳು ಗಾಯದಿಂದ ಅಲಭ್ಯವಾದಲ್ಲಿ ಆಸ್ಟ್ರೇಲಿಯಾದಲ್ಲಿ ನಮಗೆ ಅಸ್ತ್ರವಾಗಬಲ್ಲವರತ್ತ ಗಮನ ನೀಡಬೇಕಿದೆ. ಶಮಿ ಬೇರೆ ಎಲ್ಲರಿಒಗಿಂತಲೂ ಈ ಪರಿಸ್ಥಿತಿಯನ್ನು ಬೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದು ನಮಗೆ ದೊಡ್ಡ ಅಸ್ತ್ರವಾಗಬಲ್ಲರು. ಆದರೆ ಈ ಬಗ್ಗೆ ನಾವು ಅಂತಿಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ಇನ್‌ಸೈಡ್‌ ಸ್ಪೋರ್ಟ್‌ಗೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

Story first published: Friday, August 12, 2022, 10:25 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X