ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜೊತೆಗಿದ್ದ ಈ ಕೋಚ್ ಭಾರತಕ್ಕೆ ಮರು ಸೇರ್ಪಡೆ

Paddy upton

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸಹಾಯಕ ಕೋಚಿಂಗ್‌ ತಂಡಕ್ಕೆ ಮೆಂಟಲ್ ಕಂಡೀಶನ್ ಸ್ಪೆಷಲಿಸ್ಟ್ ಆಗಿ ಪ್ಯಾಡಿ ಆಪ್ಟನ್ ಸೇರ್ಪಡೆಯಾಗಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾದಲ್ಲಿ ಪ್ಯಾಡಿ ಆಪ್ಟನ್‌ರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಕ ಮಾಡಲಾಗಿತ್ತು.

ರಾಹುಲ್ ದ್ರಾವಿಡ್‌ ಜೊತೆಗೆ ಐಪಿಎಲ್‌ನಲ್ಲಿ ಒಟ್ಟಾಗಿ ರಾಜಸ್ತಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಲಸ ಮಾಡಿರುವ ಪ್ಯಾಡಿ ಆಪ್ಟನ್‌ರನ್ನು ರಾಹುಲ್ ದ್ರಾವಿಡ್‌ ಸಲಹೆ ಮೇರೆಗೆ ತಂಡದ ಸಹಾಯಕ ಕೋಚಿಂಗ್ ಸ್ಟಾಫ್‌ಗೆ ಸೇರ್ಪಡೆಯಾಗಿದ್ದಾರೆ.

ವಿಶ್ವದಾದ್ಯಂತ ಅನೇಕ ಕ್ರಿಕೆಟ್‌ ತಂಡಗಳಲ್ಲಿ ಸಹಾಯಕ ಕೋಚಿಂಗ್‌ ಸಿಬ್ಬಂದಿಯಾಗಿ ಕೆಲಸ ಮಾಡಿರುವ ಪ್ಯಾಡಿ ಆಪ್ಟನ್, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ನೆರವಾಗಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದಲೇ ತಂಡಕ್ಕೆ ಸೇರ್ಪಡೆ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದಲೇ ತಂಡಕ್ಕೆ ಸೇರ್ಪಡೆ

ವೆಸ್ಟ್ ಇಂಡೀಸ್‌ ವಿರುದ್ಧ ಮುಂಬರುವ ಟಿ20 ಸರಣಿಯಿಂದಲೇ ಮೆಂಟಲ್ ಕಂಡೀಶನ್ ಸ್ಪೆಷಲಿಸ್ಟ್ ಕೋಚ್ ಆಗಿ ಪ್ಯಾಡಿ ಆಪ್ಟನ್‌ ತಂಡವನ್ನು ಸೇರಿಕೊಳ್ಳಲಿದ್ದು, ಮುಂಬರುವ ಟಿ 20 ವಿಶ್ವಕಪ್‌ನವರೆಗೂ ಅವರು ಇರಲಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜೊತೆಗೆ ಕೆಲಸ ಮಾಡುವ ಮೊದಲು 2007ರ ವಿಶ್ವಕಪ್‌ನಲ್ಲಿ ಕೋಚ್‌ ಗ್ರೇಗ್ ಚಾಪೆಲ್ ಸಲಹೆ ಮೇರೆಗೆ ಸಹಾಯವನ್ನ ಕೋರಿದ್ದರು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಕ್ರೀಡೆಗಳಲ್ಲಿ ಮಾನಸಿಕ ತರಬೇತಿಯ ಅಭ್ಯಾಸವು ಬಹುಮುಖ್ಯವಾದ ಅಂಶಗಳಲ್ಲಿ ಒಂದಾಗಿದೆ. ಕ್ರೀಡಾಪಟುಗಳಿಗೆ ಮಾನಸಿಕವಾಗಿ ಒತ್ತಡವನ್ನ ಹಿಮ್ಮೆಟ್ಟಲು ಸಹಾಯ ಮಾಡಲು ತಾನು ಕೆಲಸ ಮಾಡುವುದಾಗಿ ಆಪ್ಟನ್ ಹಿಂದಿನ ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾನೆ.

15 ವರ್ಷಗಳ ಹಿಂದೆ ಟಿ20 ವಿಶ್ವಕಪ್‌ ಗೆದ್ದಿದ್ದ ಟೀಂ ಇಂಡಿಯಾ, ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯುವ ಕನಸಿನೊಂದಿಗೆ ಆಸ್ಟ್ರೇಲಿಯಾಗೆ ತೆರಳಲಿದೆ. 2021ರ ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲನ್ನು ಮರೆತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಆಗುವ ಯೋಜನೆ ರೂಪಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗೆ ಸಲಹೆ ನೀಡಿದ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ

ಏಳು ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು

ಏಳು ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು

ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಏಳು ಆತಿಥೇಯ ನಗರಗಳನ್ನು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

ಈ ವರ್ಷ ನಡೆಯಲಿರುವ ವಿಶ್ವಕಪ್ ಆತಿಥ್ಯವನ್ನು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ವಹಿಸಲಿದ್ದು, ಒಟ್ಟು 45 ಪಂದ್ಯಗಳನ್ನು ಆಯೋಜಿಸಲಿದೆ.

ಕಾಮನ್‌ವೆಲ್ತ್ ಗೇಮ್ಸ್: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತ: ಇಬ್ಬರು ಆಟಗಾರ್ತಿಯರಿಗೆ ಕೋವಿಡ್ ದೃಢ

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಟಿ20 ವಿಶ್ವಕಪ್ 2022ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ದಿನಾಂಕವೂ ಫೈನಲ್‌ ಆಗಿದ್ದು, ನವೆಂಬರ್ 9 ಮತ್ತು 10ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್ ಓವಲ್‌ನಲ್ಲಿ ಸೆಮಿಫೈನಲ್ಸ್ ನಡೆಯಲಿದೆ. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13, 2022ರಂದು ಫೈನಲ್ ಪಂದ್ಯ ನಡೆಯಲಿದೆ.

Story first published: Tuesday, July 26, 2022, 22:40 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X