ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pakistan Squad For T20 World Cup : ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ; ಮೀಸಲು ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್

T20 World Cup 2022: PCB Announces Pakistan Squad For T20 World Cup

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು ಗುರುವಾರ ಪ್ರಕಟಿಸಿದೆ. ಬಾಬರ್ ಅಜಂ ನಾಯಕತ್ವದ ತಂಡವು ಇತ್ತೀಚೆಗೆ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಿದ ತಂಡವೇ ಹೆಚ್ಚುಕಡಿಮೆ ಹೋಲುತ್ತದೆ.

2022ರ ಏಷ್ಯಾ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಫೈನಲ್‌ನಲ್ಲಿ ಪಾಕಿಸ್ತಾನ ಸೋತ ನಂತರ ಬಹಳಷ್ಟು ಮಾಜಿ ಕ್ರಿಕೆಟಿಗರು ಮರುಸೇರ್ಪಡೆಗೊಳ್ಳಲು ಬೆಂಬಲಿಸುತ್ತಿದ್ದ ಅನುಭವಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್‌ಗೆ ಯಾವುದೇ ಸಂತೋಷ ಸಿಗಲಿಲ್ಲ.

ಆಲ್‌ರೌಂಡರ್ ಶಾದಾಬ್ ಖಾನ್ ಅವರನ್ನು ಬಾಬರ್ ಅಜಂರ ಉಪನಾಯಕನಾಗಿ ಹೆಸರಿಸಲಾಗಿದ್ದು, ಪ್ರಧಾನ ವೇಗಿ ಶಾಹೀನ್ ಶಾ ಆಫ್ರಿದಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ರಿದಿ ಜೊತೆಗೆ ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್ ಅವರಂತಹ ಪೇಸ್ ಬೌಲಿಂಗ್ ವಿಭಾಗವನ್ನು ಪಾಕಿಸ್ತಾನ ಹೊಂದಿದೆ. ಮೀಸಲು ಪಟ್ಟಿಯಲ್ಲಿ ಶಹನವಾಜ್ ದಹಾನಿ ಅವರನ್ನು ಹೆಸರಿಸಲಾಗಿದೆ.

T20 World Cup 2022: PCB Announces Pakistan Squad For T20 World Cup

ಕಳಪೆ ಏಷ್ಯಾಕಪ್ ಹೊಂದಿದ್ದ ಸ್ಟಾರ್ ಬ್ಯಾಟರ್ ಫಖರ್ ಜಮಾನ್ ಅವರನ್ನು ಮೀಸಲು ಆಟಗಾರರ ಪಟ್ಟಿಗೆ ಕೆಳಗಿಳಿಸಲಾಗಿದೆ. ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಖುಶ್ದಿಲ್ ಶಾ ಮತ್ತು ಇತರರೊಂದಿಗೆ ಟೆಸ್ಟ್ ಆರಂಭಿಕ ಶಾನ್ ಮಸೂದ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

""15 ಆಟಗಾರರ ವಿಶ್ವಕಪ್ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಶಾನ್ ಮಸೂದ್ ಅವರು ವೇಗದ ಬೌಲರ್‌ಗಳಾದ ಮೊಹಮ್ಮದ್ ವಾಸಿಮ್ ಜೂನಿಯರ್ ಮತ್ತು ಶಾಹೀನ್ ಶಾ ಅಫ್ರಿದಿ ಜೊತೆಗೆ ಮೊದಲ ಬಾರಿಗೆ ಟಿ20 ಸ್ವರೂಪಕ್ಕಾಗಿ ತಂಡದಲ್ಲಿ ಸೇರ್ಪಡೆಗೊಂಡರೆ, ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿಯನ್ನು ಮೂರು ಪ್ರಯಾಣಿಕ ಮೀಸಲು ಆಟಗಾರರು,'' ಎಂದು ಹೆಸರಿಸಲಾಗಿದೆ.

ಎಸಿಸಿ ಟಿ20 ಏಷ್ಯಾ ಕಪ್‌ನಲ್ಲಿ ಅವರು ಅನುಭವಿಸಿದ ಸೈಡ್ ಸ್ಟ್ರೈನ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ವಾಸಿಂ ಜೂನಿಯರ್ ಅವರನ್ನು ಸೇರಿಸಲಾಗಿದೆ. ಆದರೆ ಲಂಡನ್‌ನಲ್ಲಿ ಮೊಣಕಾಲಿನ ಗಾಯದಿಂದ ಪುನರ್ವಸತಿಗೆ ಒಳಗಾಗುತ್ತಿರುವ ಮತ್ತು ಮುಂದಿನ ತಿಂಗಳ ಆರಂಭದಲ್ಲಿ ಬೌಲಿಂಗ್ ಅನ್ನು ಪುನರಾರಂಭಿಸುವ ನಿರೀಕ್ಷೆಯಲ್ಲಿರುವ ಶಾಹೀನ್ ಶಾ ಅಫ್ರಿದಿ ಅಕ್ಟೋಬರ್ 15ರಂದು ಬ್ರಿಸ್ಬೇನ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ,'' ಪಿಸಿಬಿ ಹೇಳಿಕೆ ತಿಳಿಸಿದೆ.

T20 World Cup 2022: PCB Announces Pakistan Squad For T20 World Cup

ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಪ್ರಕಟ
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಖಾದಿರ್

ಮೀಸಲು ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ

Story first published: Friday, September 16, 2022, 10:09 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X