ಟಿ20 ವಿಶ್ವಕಪ್ 2022: ವಿಮಾನ ತಪ್ಪಿಸಿಕೊಂಡು ವೆಸ್ಟ್ ಇಂಡೀಸ್ ತಂಡದಿಂದಲೇ ಹೊರಬಿದ್ದ ಸ್ಟಾರ್ ಬ್ಯಾಟರ್

ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಸೋಮವಾರ (ಅಕ್ಟೋಬರ್ 3) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿಗಾಗಿ ವೆಸ್ಟ್ ಇಂಡೀಸ್ ತಂಡದಲ್ಲಿ ಶಿಮ್ರಾನ್ ಹೆಟ್ಮೆಯರ್ ಬದಲಿಗೆ ಶಮರ್ಹ್ ಬ್ರೂಕ್ಸ್ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಕೌಟುಂಬಿಕ ಕಾರಣಗಳಿಂದಾಗಿ ಶಿಮ್ರಾನ್ ಹೆಟ್ಮೆಯರ್ ಕೋರಿಕೆಯ ಮೇರೆಗೆ ಅಕ್ಟೋಬರ್ 1ರಿಂದ ಬದಲಾಯಿಸಲಾದ ಆಸ್ಟ್ರೇಲಿಯಾಕ್ಕೆ ತನ್ನ ಮರು ನಿಗದಿತ ವಿಮಾನವನ್ನು ಶಿಮ್ರಾನ್ ಹೆಟ್ಮೆಯರ್ ತಪ್ಪಿಸಿಕೊಂಡ ನಂತರ ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ನಿರ್ಧಾರವನ್ನು ಪ್ರಕಟಿಸಿತು.

IND vs SA 3rd T20: ಇಂದೋರ್‌ನ ಕ್ರಿಕೆಟ್ ಪಿಚ್ ಇತಿಹಾಸ, ಟಿ20 ದಾಖಲೆ; ಭಾರತವೇ ಮೇಲುಗೈIND vs SA 3rd T20: ಇಂದೋರ್‌ನ ಕ್ರಿಕೆಟ್ ಪಿಚ್ ಇತಿಹಾಸ, ಟಿ20 ದಾಖಲೆ; ಭಾರತವೇ ಮೇಲುಗೈ

ಅಕ್ಟೋಬರ್ 3ರಂದು ಗಯಾನಾದಿಂದ ಹೊರಡಲು ಶಿಮ್ರಾನ್ ಹೆಟ್ಮೆಯರ್‌ಗೆ ಟಿಕೆಟ್ ಬುಕ್ ಮಾಡಲಾಗಿತ್ತು ಆದರೆ ಹೆಟ್ಮೆಯರ್ ಅವರು ತಮ್ಮ ವಿಮಾನದ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಕ್ರಿಕೆಟ್ ನಿರ್ದೇಶಕರಿಗೆ ತಿಳಿಸಿದರು.

ಶಿಮ್ರಾನ್ ಹೆಟ್ಮೆಯರ್ ಬದಲಿಗೆ ಶಮರ್ಹ್ ಬ್ರೂಕ್ಸ್ ಆಯ್ಕೆ

ಶಿಮ್ರಾನ್ ಹೆಟ್ಮೆಯರ್ ಬದಲಿಗೆ ಶಮರ್ಹ್ ಬ್ರೂಕ್ಸ್ ಆಯ್ಕೆ

CWI ಆಯ್ಕೆ ಸಮಿತಿಯು ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಶಿಮ್ರಾನ್ ಹೆಟ್ಮೆಯರ್ ತನ್ನ ಮರು-ನಿಗದಿಪಡಿಸಲಾದ ಆಸ್ಟ್ರೇಲಿಯಾದ ವಿಮಾನವನ್ನು ತಪ್ಪಿಸಿಕೊಂಡರು ಮತ್ತು ವಿಶ್ವಕಪ್ ತಂಡದಿಂದಲೇ ಹೊರಬಿದ್ದರು.

"ಇಂದು ಮಧ್ಯಾಹ್ನ ನಾವು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಬೋರ್ಡ್ ಆಫ್ ಡೈರೆಕ್ಟರ್‌ಗಳಿಗೆ ನಮ್ಮ ಟಿ20 ವಿಶ್ವಕಪ್ ತಂಡದಲ್ಲಿ ಶಿಮ್ರಾನ್ ಹೆಟ್ಮೆಯರ್ ಬದಲಿಗೆ ಶಮರ್ಹ್ ಬ್ರೂಕ್ಸ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ," ಎಂದು CWI ಹೇಳಿಕೆಯಲ್ಲಿ ತಿಳಿಸಿದೆ.

ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು

ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು

ಶಿಮ್ರಾನ್ ಹೆಟ್ಮೆಯರ್ ಐಪಿಎಲ್ 2022ರ ಫೈನಲಿಸ್ಟ್‌ಗಳಾದ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು ಮತ್ತು ಈ ಋತುವಿನಲ್ಲಿ 15 ಪಂದ್ಯಗಳಲ್ಲಿ 153.92 ಸ್ಟ್ರೈಕ್ ರೇಟ್‌ನಲ್ಲಿ 314 ರನ್ ಗಳಿಸಿದರು.

ಕೌಟುಂಬಿಕ ಕಾರಣಗಳಿಂದಾಗಿ ನಾವು ಶಿಮ್ರಾನ್ ಅವರ ವಿಮಾನವನ್ನು ಶನಿವಾರದಿಂದ ಸೋಮವಾರಕ್ಕೆ ಬದಲಾಯಿಸಿದ್ದೇವೆ, ಆಸ್ಟ್ರೇಲಿಯಾಕ್ಕೆ ಅವರ ಪ್ರಯಾಣದಲ್ಲಿ ಯಾವುದೇ ವಿಳಂಬಗಳು ಮತ್ತು ಸಮಸ್ಯೆಗಳಿದ್ದರೆ, ಅವರನ್ನು ತಂಡದಲ್ಲಿ ಬದಲಾಯಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಅವರಿಗೆ ಸ್ಪಷ್ಟಪಡಿಸಲಾಯಿತು. ಈ ಅತ್ಯಂತ ಪ್ರಮುಖವಾದ ಜಾಗತಿಕ ಟೂರ್ನಿಗಾಗಿ ತಯಾರಿ ಮಾಡುವ ತಂಡದ ಸಾಮರ್ಥ್ಯವನ್ನು ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ.

ಅಕ್ಟೋಬರ್ 17ರಂದು ಹೋಬರ್ಟ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪಂದ್ಯ

ಅಕ್ಟೋಬರ್ 17ರಂದು ಹೋಬರ್ಟ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪಂದ್ಯ

"ಶಮರ್ಹ್ ಬ್ರೂಕ್ಸ್ ನಮ್ಮ ಇತ್ತೀಚಿನ ಟಿ20 ಅಂತರಾಷ್ಟ್ರೀಯ ತಂಡಗಳ ಭಾಗವಾಗಿದ್ದಾರೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ CPLನ ಕೊನೆಯ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದರು. ಅವರು ಈ ವಾರ ಆಸ್ಟ್ರೇಲಿಯಾಕ್ಕೆ ಆದಷ್ಟು ಬೇಗ ಹೊರಡಲಿದ್ದಾರೆ ಮತ್ತು ಪಂದ್ಯಾವಳಿಗೆ ಅವರಿಗೆ ಮತ್ತು ಎಲ್ಲಾ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ," ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ನಿರ್ದೇಶಕ ಜಿಮ್ಮಿ ಆಡಮ್ಸ್ ಸೇರಿಸಲಾಗಿದೆ.

ವೆಸ್ಟ್ ಇಂಡೀಸ್ ತಂಡವು ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಐರ್ಲೆಂಡ್ ಜೊತೆಗೆ 1ನೇ ಸುತ್ತಿನಲ್ಲಿ B ಗುಂಪಿನಲ್ಲಿ ಸ್ಥಾನ ಪಡೆದಿದೆ. ನಿಕೋಲಸ್ ಪೂರನ್ ನಾಯಕತ್ವದ ತಂಡವು ಅಕ್ಟೋಬರ್ 17ರಂದು ಹೋಬರ್ಟ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ, ವೆಸ್ಟ್ ಇಂಡೀಸ್ ತನ್ನ ತಯಾರಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಲಿದೆ.

ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ವೆಸ್ಟ್ ಇಂಡೀಸ್ ತಂಡ

ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ವೆಸ್ಟ್ ಇಂಡೀಸ್ ತಂಡ

ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಶಮರ್ಹ್ ಬ್ರೂಕ್ಸ್, ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ರೇಮನ್ ರೀಫರ್ ಮತ್ತು ಓಡೆನ್ ಸ್ಮಿತ್

For Quick Alerts
ALLOW NOTIFICATIONS
For Daily Alerts
Story first published: Tuesday, October 4, 2022, 10:43 [IST]
Other articles published on Oct 4, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X