ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್ 2022: ಕೊಹ್ಲಿ ಆಯ್ಕೆ ಮಾಡೋದು, ಬಿಡೋದು ಆಯ್ಕೆಗಾರರಿಗೆ ಬಿಟ್ಟಿದ್ದು ಎಂದ BCCI

Virat kohli

ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡಿ ತಿಂಗಳುಗಳೇ ಉರುಳಿ ಹೋಗಿವೆ. ನಾಯಕತ್ವದ ಜೊತೆಗೆ ಆಟಗಾರನಾಗಿಯೂ ಕೊಹ್ಲಿ ಕಳೆಗುಂದಿದ್ದಾರೆ. ರನ್‌ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮೂರು ವರ್ಷಗಳೇ ಹತ್ತಿರವಾಗುತ್ತಿದೆ.

70 ಅಂತರಾಷ್ಟ್ರೀಯ ಶತಕಗಳ ಒಡೆಯ ವಿರಾಟ್ ಕೊಹ್ಲಿ 2019ರ ಬಳಿಕ ಯಾವೊಂದು ಶತಕ ದಾಖಲಿಸಿಲ್ಲ ಎಂಬುದನ್ನ ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಮೂರು ಫಾರ್ಮೆಟ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿರುವ ವಿರಾಟ್ ಸದ್ಯ ಸತತ ವಿಶ್ರಾಂತಿ ಮೊರೆ ಹೋಗಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್‌, ವೆಸ್ಟ್‌ ಇಂಡೀಸ್ ಪ್ರವಾಸದ ಜೊತೆಗೆ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿದಿದ್ದು ಆಶ್ಚರ್ಯಕ್ಕೆ ಎಡೆಮಾಡಿತು. ಏಷ್ಯಾಕಪ್‌ಗೂ ಮುನ್ನ ಇದ್ದ ಈ ಎರಡೂ ಸರಣಿಗಳಲ್ಲಿ ಕೊಹ್ಲಿ ಭಾಗಿಯಾಗದೇ ಇರುವುದು ಟೀಕೆಗೆ ಕಾರಣವಾಗಿತ್ತು. ಮೊದಲೇ ರನ್ ಬರ ಎದುರಿಸುತ್ತಿರುವ ವಿರಾಟ್‌ ಹೀಗೆ ಪದೇ ಪದೇ ವಿಶ್ರಾಂತಿ ಪಡೆದ್ರೆ ಫಾರ್ಮ್ ಕಂಡುಕೊಳ್ಳುವುದು ಹೇಗೆ ಎಂಬುದೇ ಪ್ರಶ್ನೆಯಾಗಿದೆ.

ಕಳಪೆ ಫಾರ್ಮ್‌ ಇದ್ದರೂ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಸೆಲೆಕ್ಷನ್ ಹೇಗೆ?

ಕಳಪೆ ಫಾರ್ಮ್‌ ಇದ್ದರೂ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಸೆಲೆಕ್ಷನ್ ಹೇಗೆ?

ವಿರಾಟ್ ಕೊಹ್ಲಿ ಇಷ್ಟು ದೊಡ್ಡ ಮಟ್ಟಿನ ಕಳಪೆ ಫಾರ್ಮ್‌ ಎದುರಿಸುತ್ತಿದ್ದರೂ ಸಹ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬೇಕು ಎಂಬುದನ್ನ ಅನೇಕ ಮಾಜಿ ಕ್ರಿಕೆಟಿಗರು ಬೆಂಬಲಿಸಿದ್ದಾರೆ. ವಿರಾಟ್ ಕೊಹ್ಲಿ ಐಸಿಸಿ ಟೂರ್ನಮೆಂಟ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟರ್ ಆಗಲಿದ್ದಾರೆ ಎಂಬ ನಂಬಿಕೆಯಿದೆ. ಆದ್ರೂ ಸದ್ಯದ ಫಾರ್ಮ್ ಮಾತ್ರ ಎಲ್ಲರನ್ನೂ ಚಿಂತೆಗೀಡುಮಾಡಿರುವುದು ಸುಳ್ಳಲ್ಲ.

ಏಷ್ಯಾ ಕಪ್ 2022: ಈ ಬಾರಿಯು ಗೆದ್ದೇ ಗೆಲ್ಲುತ್ತೇವೆ ಎಂದ ರೋಹಿತ್ ಶರ್ಮಾ, ವೀಡಿಯೋ

ಕೊಹ್ಲಿ ಆಯ್ಕೆ ಕುರಿತು ಬಿಸಿಸಿಐ ಏನು ಹೇಳುತ್ತದೆ?

ಕೊಹ್ಲಿ ಆಯ್ಕೆ ಕುರಿತು ಬಿಸಿಸಿಐ ಏನು ಹೇಳುತ್ತದೆ?

ವಿರಾಟ್ ಕೊಹ್ಲಿ ಟೀಂ ಇಂಡಿಯಾ ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಇರ್ತಾರ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಬಿಸಿಸಿಐ ಬಳಿ ಉತ್ತರ ಇಲ್ಲದಂತೆ ಕಾಣುತ್ತಿದೆ. ಹೀಗಾಗಿಯೇ ಕೊಹ್ಲಿ ಆಯ್ಕೆ ಮಾಡೋದು ಬಿಡೋದು ಆಯ್ಕೆಗಾರರಿಗೆ ಬಿಟ್ಟ ವಿಚಾರ ಎಂದು ಪರೋಕ್ಷವಾಗಿ ಬಿಸಿಸಿಐ ಖಜಾಂಚಿ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಭಿನ್ನವಾಗುವುದು ಆ ಒಬ್ಬ ಆಟಗಾರನಿಂದ ಎಂದ ಮಾಜಿ ಕ್ರಿಕೆಟಿಗ

ವಿರಾಟ್ ಕೊಹ್ಲಿ ಕುರಿತು ಬಿಸಿಸಿಐ ಖಜಾಂಚಿ ಹೇಳೋದೇನು?

ವಿರಾಟ್ ಕೊಹ್ಲಿ ಕುರಿತು ಬಿಸಿಸಿಐ ಖಜಾಂಚಿ ಹೇಳೋದೇನು?

ಕೊಹ್ಲಿ ಹಾಗೂ ಬಿಸಿಸಿಐ ನಡುವಿನ ಸಮಸ್ಯೆಗಳು ತುಂಬಾ ತೀವ್ರವಾಗಿದೆಯೇ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಬಿಸಿಸಿಐ ಖಜಾಂಜಿ ಉತ್ತರಿಸಿದ್ದಾರೆ. ಕೊಹ್ಲಿ ಮತ್ತು ಬಿಸಿಸಿಐ ತಿಕ್ಕಾಟವು ಕೊಹ್ಲಿಯ ಮಾನಸಿಕ ಅಸಮತೋಲನಕ್ಕೆ ಕಾರಣವಾಗಿ, ಅವರ ಬ್ಯಾಟಿಂಗ್ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂಬ ಮಾತನ್ನು ಧುಮಾಲ್ ತಳ್ಳಿಹಾಕಿದ್ದಾರೆ.

"ನೀವು ನೋಡುವಂತೆ, ವಿರಾಟ್ ಸರಳ ಆಟಗಾರನಲ್ಲ. ಅವರು ಒಬ್ಬ ಲೆಜೆಂಡ್‌, ಮತ್ತು ಅವರು ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ, ಈ ಚರ್ಚೆಗಳು (ಬೋರ್ಡ್ ಕೊಹ್ಲಿಯನ್ನು ಬದಿಗಿಡಲು ಪ್ರಯತ್ನಿಸುತ್ತಿದೆ) ನಮ್ಮ ಮೇಲೆ ಯಾವುದೇ ಪರಿಣಾಮ ಬೀರದೆ ಮಾಧ್ಯಮಗಳಲ್ಲಿ ಮುಂದುವರಿಯುತ್ತದೆ.

ತಂಡದ ಆಯ್ಕೆಯ ವಿಷಯದಲ್ಲಿ, ನಾವು ಅದನ್ನು ಆಯ್ಕೆದಾರರಿಗೆ ಬಿಡುತ್ತೇವೆ ಆದರೆ ಅವರು ಶೀಘ್ರದಲ್ಲೇ ಫಾರ್ಮ್‌ಗೆ ಮರಳುತ್ತಾರೆ ಎಂದು ಭಾವಿಸುತ್ತೇವೆ. ಅವರು ಅದನ್ನು ಹೇಗೆ ಸಂಪರ್ಕಿಸಲು ಬಯಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು "ಎಂದು ಅನುಭವಿ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಧುಮಲ್ ಅವರು ತಿಳಿಸಿದ್ದಾರೆ.

ಈ ಕ್ರಿಕೆಟಿಗರ ಪಾಲಿಗೆ ವಿಲನ್ ಆದ್ರಾ ವಿರಾಟ್?: ಕನ್ನಡಿಗನೂ ಸೇರಿ 5 ಆಟಗಾರರ ಭವಿಷ್ಯಕ್ಕೆ ಕೊಹ್ಲಿ ಅಡ್ಡಿಯಾಗಿದ್ದು ಹೀಗೆ!

ವಿರಾಟ್ ಕೊಹ್ಲಿ ಶತಕ ಸಿಡಿಸಿ 1000ಕ್ಕೂ ಅಧಿಕ ದಿನಗಳಾಗಿವೆ!

ವಿರಾಟ್ ಕೊಹ್ಲಿ ಶತಕ ಸಿಡಿಸಿ 1000ಕ್ಕೂ ಅಧಿಕ ದಿನಗಳಾಗಿವೆ!

ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಪ್ರದರ್ಶನ ಕಳಪೆಯಾಗಿದೆ. ಶತಕ ಪೂರೈಸಿ 1000ಕ್ಕೂ ಹೆಚ್ಚು ದಿನಗಳಾಗಿವೆ. ಕಳೆದ ಒಂದು ತಿಂಗಳಿನಲ್ಲಿ ಕೊಹ್ಲಿಯ ಪ್ರದರ್ಶನವನ್ನು ಹೆಚ್ಚು ಮೌಲ್ಯಮಾಪನ ಮಾಡುತ್ತಿರುವುದರಿಂದ ಕೊಹ್ಲಿಯ ವಿಶ್ವಕಪ್ ಭವಿಷ್ಯವನ್ನು ಸಹ ಪ್ರಶ್ನಿಸಲಾಗುತ್ತಿದೆ.

ನಾಯಕ ರೋಹಿತ್ ಶರ್ಮಾ ಕೊಹ್ಲಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ದೀಪಕ್ ಹೂಡಾ ಅವರಂತಹ ಆಟಗಾರನ ಅಬ್ಬರದಿಂದಾಗಿ ಕೊಹ್ಲಿ ಸ್ಥಾನವು ಇನ್ನೂ ಅನುಮಾನದಲ್ಲಿದೆ. ಕೊಹ್ಲಿಯಂತಹ ಲೆಜೆಂಡ್‌ ಅನ್ನು ಬದಲಾಯಿಸುವುದು ಸುಲಭವಲ್ಲ, ಆದರೆ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Story first published: Friday, August 5, 2022, 10:07 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X