ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KL Rahul : ಟೀಂ ಇಂಡಿಯಾ ಉಪನಾಯಕ, ಕನ್ನಡಿಗ ರಾಹುಲ್ ಮೇಲಿದೆ ಅಪಾರ ನಿರೀಕ್ಷೆ

ಟೀಂ ಇಂಡಿಯಾ ಉಪನಾಯಕ ಬಲಗೈ ಬ್ಯಾಟರ್ ಕೆಎಲ್ ರಾಹುಲ್ ವಿಶ್ವಕಪ್ ಆರಂಭಕ್ಕೂ ಮುನ್ನ ಫಾರ್ಮ್‌ಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅವರು ಫಾರ್ಮ್‌ಗೆ ಮರಳಿರುವುದು ಟೀಂ ಇಂಡಿಯಾ ಪಾಳಯದಲ್ಲಿ ಕೊಂಚ ನಿರಾಳತೆ ತಂದಿದೆ.

ಅನುಭವಿ ಬ್ಯಾಟರ್ ಆಗಿರುವ ಕೆ.ಎಲ್ ರಾಹುಲ್ ಆರಂಭಿಕ ಆಟಗಾರನಾಗಿ ಟೀಂ ಇಂಡಿಯಾದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಟಿ20 ಮಾದರಿಯಲ್ಲಿ ಅವರ ಅಂಕಿ ಅಂಶಗಳು ಕೂಡ ಉತ್ತಮವಾಗಿವೆ. ವಿಕೆಟ್‌ ಕೀಪರ್ ಆಗಿಯೂ ಟೀಂ ಇಂಡಿಯಾದಲ್ಲಿ ಜವಾಬ್ದಾರಿ ನಿಭಾಯಿಸಿರುವ ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಲಿದ್ದಾರೆ.

T20 World Cup 2022: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ, ಅಂಕಿಅಂಶT20 World Cup 2022: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ, ಅಂಕಿಅಂಶ

2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದರ್ಪಾಣೆ ಮಾಡಿದ ಕೆ.ಎಲ್. ರಾಹುಲ್, 2016ರಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿದರು. ಜೂನ್ 18, 2016ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಟಿ20 ಕ್ರಿಕೆಟ್‌ನಲ್ಲಿ ಕೆ ಎಲ್ ರಾಹುಲ್ ಉತ್ತಮ ಬ್ಯಾಟರ್ ಎನಿಸಿಕೊಂಡಿದ್ದಾರೆ, ಮುಂಬರುವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ.

2021ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ

2021ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ

ಸೆಪ್ಟೆಂಬರ್ 2021 ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿ ಕೆ.ಎಲ್. ರಾಹುಲ್ ಸ್ಥಾನ ಪಡೆದಿದ್ದರು. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ರಾಹುಲ್.

ವಿಶ್ವಕಪ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿದ ಕೆ.ಎಲ್‌. ರಾಹುಲ್ 48.50 ಸರಾಸರಿ ಮತ್ತು 152.76 ಸ್ಟ್ರೈಕ್‌ರೇಟ್‌ನಲ್ಲಿ ಮೂರು ಸತತ ಅರ್ಧಶತಕಗಳನ್ನು ಒಳಗೊಂಡಂತೆ 194 ರನ್ ಗಳಿಸುವ ಮೂಲಕ ಭಾರತ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಸ್ಕಾಟ್ಲೆಂಡ್ ವಿರುದ್ಧ ಕೇವಲ 18 ಎಸೆತಗಳಲ್ಲಿ ಪಂದ್ಯಾವಳಿಯ ಜಂಟಿ ವೇಗದ ಅರ್ಧಶತಕವನ್ನು ಗಳಿಸಿದರು.

ಔಟ್‌ ಎಂದು ಗೊತ್ತಿದ್ರೂ ಕ್ರೀಸ್‌ನಲ್ಲೇ ನಿಂತಿದ್ದ ಸ್ಟೀವನ್ ಸ್ಮಿತ್: ರೋಹಿತ್ ಶರ್ಮಾ ಅಸಮಾಧಾನ

ಟಿ20 ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ರಾಹುಲ್

ಟಿ20 ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ರಾಹುಲ್

ಇದುವರೆಗೂ 62 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೆ ಎಲ್ ರಾಹುಲ್ 58 ಇನ್ನಿಂಗ್ಸ್‌ಗಳಲ್ಲಿ 39.57 ಸರಾಸರಿ ಮತ್ತು 141.32 ಸ್ಟ್ರೈಕ್‌ರೇಟ್‌ನಲ್ಲಿ 2018 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ.

ತೊಡೆಸಂದು ಗಾಯದಿಂದ ಐಪಿಎಲ್‌ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದಿದ್ದ ಕೆಎಲ್ ರಾಹುಲ್ ನಂತರ ಕೋವಿಡ್-19 ಪಾಸಿಟಿವ್ ಸೋಂಕಿನ ಕಾರಣ ಜಿಂಬಾಬ್ವೆ, ವೆಸ್ಟ್ ಇಂಡೀಸ್ ಸರಣಿ ತಪ್ಪಿಸಿಕೊಂಡಿದ್ದರು. ನಂತರ ಏಷ್ಯಾಕಪ್‌ನಲ್ಲಿ ಕಣಕ್ಕಿಳಿದ ರಾಹುಲ್ ಬ್ಯಾಟಿಂಗ್‌ನಲ್ಲಿ ನಿರಾಸ ಅನುಭವಿಸಿ ಟೀಕೆಗೆ ಗುರಿಯಾಗಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ದಾಖಲಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ರಾಹುಲ್ ಕ್ರಿಕೆಟ್ ಅನುಭವ

ಆಸ್ಟ್ರೇಲಿಯಾ ನೆಲದಲ್ಲಿ ರಾಹುಲ್ ಕ್ರಿಕೆಟ್ ಅನುಭವ

ಆಸ್ಟ್ರೇಲಿಯಾದಲ್ಲಿ ಆರು ಟಿ20 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 5 ಇನ್ನಿಂಗ್ಸ್‌ಗಳಲ್ಲಿ 21.06 ಸರಾಸರಿಯೊಂದಿಗೆ, 112.50 ಸ್ಟ್ರೈಕ್‌ರೇಟ್‌ನಲ್ಲಿ 108 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ 5 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳನ್ನು ಆಡಿದ ಅನುಭವ ರಾಹುಲ್‌ಗೆ ಇದೆ.

ಅಕ್ಟೋಬರ್ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಕೆ.ಎಲ್. ರಾಹುಲ್ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ತಂಡ ಉತ್ತಮ ಆರಂಭ ಪಡೆದರೆ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ, ಪರಿಸ್ಥಿತಿಗೆ ತಕ್ಕಂತೆ ನಿಧಾನವಾಗಿ ಬ್ಯಾಟ್ ಮಾಡುವ ರಾಹುಲ್‌ಗೆ ವೇಗವಾಗಿ ರನ್‌ ಗಳಿಸುವುದು ಕೂಡ ಗೊತ್ತಿದೆ.

ಉಪನಾಯಕನ ಬಲ ಮತ್ತು ದೌರ್ಬಲ್ಯ

ಉಪನಾಯಕನ ಬಲ ಮತ್ತು ದೌರ್ಬಲ್ಯ

ಕೆ.ಎಲ್‌. ರಾಹುಲ್ ಐಪಿಎಲ್‌ನಲ್ಲಿ ಸತತವಾಗಿ 5 ಐಪಿಎಲ್‌ ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿರುವ ಆಟಗಾರ. ಪ್ರತಿ ಪಂದ್ಯದಲ್ಲೂ ಅಗತ್ಯಕ್ಕೆ ತಕ್ಕಂತೆ ಆಟವಾಡುವ ಮೂಲಕ ರನ್ ಗಳಿಸುವುದು ಕೆ.ಎಲ್. ರಾಹುಲ್ ಬಲ. ಸ್ಪಿನ್ ಬೌಲಿಂಗ್ ಇರಲಿ ವೇಗದ ಬೌಲಿಂಗ್ ಇರಲಿ ಸಮರ್ಥವಾಗಿ ಎದುರಿಸುವ ರಾಹುಲ್ ಉತ್ತಮ ರನ್ ಗಳಿಸಿದ ಇತಿಹಾಸ ಹೊಂದಿದ್ದಾರೆ. ಪ್ರತಿ ಪಂದ್ಯದಲ್ಲಿ ರನ್ ಗಳಿಸುವ ಮೂಲಕ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುತ್ತಾರೆ.

ಉತ್ತಮ ವೇಗದಲ್ಲಿ ಶಾರ್ಟ್‌ ಬಾಲ್‌ ಎಸೆದರೆ ರಾಹುಲ್ ಆಡಲು ತಡವರಿಸುತ್ತಾರೆ, ಇದು ಅವರ ದೌರ್ಬಲ್ಯ ಅದರಲ್ಲೂ ಈ ಬಾರಿ ಆಸ್ಟ್ರೇಲಿಯಾದ ವೇಗದ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಶಾರ್ಟ್‌ ಬಾಲ್‌ಗಳನ್ನು ಹೇಗೆ ಉತ್ತರಿಸುತ್ತಾರೆ ನೋಡಬೇಕಿದೆ. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಬದಲಿಸುವಲ್ಲಿ ಎಡವುತ್ತಿರುವುದು, ಆಗಾಗ್ಗೆ ಗಾಯದ ಸಮಸ್ಯೆಗೆ ತುತ್ತಾಗುವುದು, ಕೆಲವೊಮ್ಮೆ ತೀರಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವುದು ರಾಹುಲ್ ದೌರ್ಬಲ್ಯ.

ರಾಹುಲ್‌ ಸದ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರ, ಅದರಲ್ಲೂ ಆರಂಭಿಕ ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಬೇಕೆಂದರೆ ಅದರಲ್ಲಿ ಕನ್ನಡಿಗ ರಾಹುಲ್ ಪಾತ್ರವೂ ಮುಖ್ಯವಾಗುತ್ತದೆ.

Story first published: Thursday, September 22, 2022, 10:27 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X