ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ಭಾರತದ ಸಂಪೂರ್ಣ ವೇಳಾಪಟ್ಟಿ: ಆರಂಭಿಕ ಪಂದ್ಯದಲ್ಲಿ ಪಾಕ್ ಎದುರಾಳಿ

T20 World Cup 2022: Team Indias full schedule: India face Pakistan in opener
ವಿಶ್ವಕಪ್ ನಲ್ಲಿ ಪಾಕ್ vs ಭಾರತ ಮುಖಾ ಮುಖಿ !! | Oneindia Kannada

ಮತ್ತೊಂದು ಟಿ20 ವಿಶ್ವಕಪ್‌ನ ಸೆಣೆಸಾಟಕ್ಕೆ ಮುಹೂರ್ತ ನಿಗದಿಯಾಗಿದೆ. 2022ರ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಅಕ್ಟೋಬರ್ ಮಧ್ಯಂತರದಿಂದ ಆರಂಭವಾಗುವ ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನ ಈ ಮುಖಾಮುಖಿಗೆ ಸಾಕ್ಷಿಯಾಗಲಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಅಂತ್ಯವಾದ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ತಂಡವನ್ನು ಪಾಕ್ ಪಡೆ 10 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಮಣಿಸಿತ್ತು. ಇದು ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್ ವೇದಿಕೆಯಲ್ಲಿ ಗೆದ್ದ ಪ್ರಪ್ರಥಮ ಪಂದ್ಯವಾಗಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಭಾರತದ ಅಜೇಯ ಸಾಧನೆ ಅಂತ್ಯವಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನದ ಯುವ ವೇಗಿ ಶಾಹೀನ್ ಶಾ ಅಫ್ರಿದಿ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಭಾರತೀಯ ದಾಂಡಿಗರಿಗೆ ಕಂಟಕವಾದರೆ ಬಳಿಕ ಬ್ಯಾಟಿಂಗ್‌ನಲ್ಲಿ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅದ್ಭುತ ಪ್ರದರ್ಶನ ನೀಡಿ ಭಾರತದ ವಿರುದ್ಧದ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದರು.

ಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನಟಿ20 ವಿಶ್ವಕಪ್ 2022 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಎಂಸಿಜಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಇದೇ ಮೈದಾನದಲ್ಲಿ ಮತ್ತೊಂದು ಬದ್ಧ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕೂಡ ಮುಖಾಮುಖಿಯಾಗಲಿದ್ದು ಅಕ್ಟೋಬರ್ 28ರಂದು ಈ ಪಂದ್ಯ ನಡೆಯಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ ಒಟ್ಟು ಏಳು ತಾಣಗಳಲ್ಲಿ ನಡೆಯಲಿದೆ. ಅಡಿಲೇಡ್ ಓವಲ್, ಗಾಬಾ, ಕಾರ್ಡಿನಿಯಾ ಪಾರ್ಕ್ ಸ್ಟೇಡಿಯಂ, ಬೆಲ್ಲೆರಿವ್ ಓವಲ್, ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್, ಪರ್ತ್ ಸ್ಟೇಡಿಯಂ ಮತ್ತು ಸಿಡ್ನಿ ಕ್ರಿಕೆಟ್ ಮೈದಾನಗಳಲ್ಲಿ ಈ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್‌ನಲ್ಲಿ ಆಯೋಜನೆಯಾಗಲಿದೆ. ನವೆಂಬರ್ 9 ಹಾಗೂ 10ರಂದು ಈ ಮುಖಾಮುಖಿ ನಡೆಯಲಿದೆ.

ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಯೋಜನೆಯಾಗಲಿದೆ. ಆಸ್ಟ್ರೇಲಿಯಾ ತಂಡ ಹಾಲಿ ಚಾಂಪಿಯನ್ ಆಗಿದ್ದು ಬಿಸಿಸಿಐ ಆಯೋಜಿಸಿದ್ದ 2021ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಬರ್ಜರಿಯಾಗಿ ಗೆದ್ದ ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.

ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!

ಇನ್ನು ಭಾರತ ಈ ಬಾರಿ ಟಿ20 ವಿಶ್ವಕಪ್‌ನ ಮೇಲೆ ತನ್ನ ಚಿತ್ತ ನೆಟ್ಟಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನ ಬಳಿಕ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗುತ್ತಲೇ ಬಂದಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಅಂತ್ಯವಾದ ಟಿ20 ವಿಶ್ವಕಪ್‌ನ ಬಳಿಕ ಟಿ20 ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ನಂತರ ಏಕದಿನ ತಂಡದ ನಾಯಕತ್ವ ಕೂಡ ಸ್ವೀಕರಿಸಿದ್ದಾರೆ.

ಟಿ20 ವಿಶ್ವಕಪ್‌ 2022 ಭಾರತದ ವೇಳಾಪಟ್ಟಿ
ಅಕ್ಟೋಬರ್ 23: ಭಾರತ vs ಪಾಕಿಸ್ತಾನ, ಮಧ್ಯಾಹ್ನ 1.30, ಮೆಲ್ಬರ್ನ್
ಅಕ್ಟೋಬರ್ 27: ಭಾರತ vs ಕ್ವಾಲಿಫೈಯರ್ ಎ2, 12.30 PM, ಸಿಡ್ನಿ
ಅಕ್ಟೋಬರ್ 30: ಭಾರತ vs ದಕ್ಷಿಣ ಆಫ್ರಿಕಾ, ಸಂಜೆ 4.30, ಪರ್ತ್
ನವೆಂಬರ್ 2: ಭಾರತ vs ಬಾಂಗ್ಲಾದೇಶ, ಮಧ್ಯಾಹ್ನ 1.30, ಅಡಿಲೇಡ್
ನವೆಂಬರ್ 6: ಭಾರತ vs ಕ್ವಾಲಿಫೈಯರ್ ಬಿ1, ಮಧ್ಯಾಹ್ನ 1.30, ಮೆಲ್ಬರ್ನ್

Story first published: Friday, January 21, 2022, 13:48 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X