ಟಿ20 ವಿಶ್ವಕಪ್‌ 2022: ರಸೆಲ್, ನರೈನ್‌ಗೆ ಇಲ್ಲ ಸ್ಥಾನ, ವೆಸ್ಟ್ ಇಂಡೀಸ್‌ ತಂಡ ಹೇಗಿದೆ ನೋಡಿ

ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಗಾಗಿ ವೆಸ್ಟ್ ಇಂಡೀಸ್ ತಮ್ಮ 15 ಸದಸ್ಯರ ತಂಡವನ್ನು ಪ್ರಕಟಿಸಿದೆ, ನಿಕೋಲಸ್ ಪೂರನ್ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ, ಇತ್ತೀಚಿಗೆ ಭಾರತ ಮತ್ತು ಬಾಂಗ್ಲಾದೇಶದಂತಹ ತಂಡಗಳ ವಿರುದ್ಧದ ಸರಣಿಯಲ್ಲಿ ವಿಂಡೀಸ್ ತಂಡದ ಭಾಗವಾಗಿದ್ದ ಹೆಚ್ಚಿನ ಆಟಗಾರರು ಸ್ಥಾನ ಪಡೆದಿದ್ದಾರೆ.

ಎವಿನ್ ಲೆವಿಸ್ ಯುಎಇನಲ್ಲಿ 2021 ರ ವಿಶ್ವಕಪ್‌ ನಂತರ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ. ಯಾನಿಕ್ ಕ್ಯಾರಿಯಾ ಮತ್ತು ರೇಮನ್ ರೈಫರ್‌ನಲ್ಲಿ ಇಬ್ಬರು ಹೊಸ ಆಟಗಾರರು ಕೂಡ ಪ್ರತಿಷ್ಠಿತ ಟೂರ್ನಿಗೆ ಆಯ್ಕೆಯಾಗಿದ್ದಾರೆ.

"ನಾವು ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಲು ಯುವಕರು ಮತ್ತು ಅನುಭವದ ಮಿಶ್ರಣವನ್ನು ಆಯ್ಕೆ ಮಾಡಿದ್ದೇವೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ ಮುಖ್ಯ ಆಯ್ಕೆದಾರ ಡೆಸ್ಮಂಡ್ ಹೇನ್ಸ್ ಹೇಳಿದರು.

ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!

"ನನ್ನ ಅಧಿಕಾರಾವಧಿಯ ಆರಂಭದಲ್ಲಿ ನಾನು ಆಟಗಾರರಿಗೆ ಅವಕಾಶವನ್ನು ನೀಡಲು ಆಸಕ್ತಿ ಹೊಂದಿದ್ದೇನೆ ಮತ್ತು ಅದನ್ನು ಮಾಡುವುದರಲ್ಲಿ ನಾನು ನಿರತನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದು ನಾವು ಆಯ್ಕೆ ಮಾಡಿದ ಉತ್ತಮ ತಂಡ ಎಂದು ನಾನು ನಂಬುತ್ತೇನೆ. ನಾವು 1 ನೇ ಸುತ್ತಿನಿಂದ ಸೂಪರ್ 12 ಗೆ ಅರ್ಹತೆ ಪಡೆಯಬೇಕು." ಎಂದು ಹೇಳಿದರು.

ಸಿಪಿಎಲ್‌ನಲ್ಲಿ ಪ್ರದರ್ಶನ ನೀಡಿದವರಿಗೆ ಮಣೆ

ಸಿಪಿಎಲ್‌ನಲ್ಲಿ ಪ್ರದರ್ಶನ ನೀಡಿದವರಿಗೆ ಮಣೆ

"ಆಯ್ಕೆ ಪ್ರಕ್ರಿಯೆಯಲ್ಲಿ, ನಾವು ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಗುರುತಿಸಿದ್ದೇವೆ, ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಲು ಇದು ನಮಗೆ ಸಹಕಾರಿಯಾಗಿದೆ" ಎಂದು ಹೇಳಿದ್ದಾರೆ.

ಸದ್ಯ ಸಿಪಿಎಲ್‌ ಇನ್ನೂ ನಡೆಯುತ್ತಿದ್ದು, ಆಟಗಾರರಿಗೆ ತಮ್ಮ ಪ್ರದರ್ಶನ ಉತ್ತಮಪಡಿಸಿಕೊಳ್ಳಲು ಸಾಕಷ್ಟು ಅವಕಾಶ ಸಿಕ್ಕಂತಾಗಿದೆ.

ಟಿ20 ಶ್ರೇಯಾಂಕ: ಭರ್ಜರಿ ಶತಕದ ಬಳಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಭಾರೀ ಏರಿಕೆ

ರಸೆಲ್, ನರೈನ್‌ಗೆ ಇಲ್ಲ ಅವಕಾಶ

ರಸೆಲ್, ನರೈನ್‌ಗೆ ಇಲ್ಲ ಅವಕಾಶ

ಅಚ್ಚರಿ ಎಂಬಂತೆ ದೊಡ್ಡ ಟೂರ್ನಿಗಾಗಿ ವೆಸ್ಟ್ ಇಂಡೀಸ್‌ ತಂಡದಿಂದ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಮತ್ತು ಸ್ಪಿನ್ನರ್ ಸುನಿಲ್ ನರೈನ್‌ರನ್ನು ಕೈ ಬಿಡಲಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಜೊತೆ ಈ ಇಬ್ಬರು ಆಟಗಾರರ ಬಾಂಧವ್ಯ ಉತ್ತಮವಾಗಿಲ್ಲದ ಕಾರಣ ಇಬ್ಬರನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.

ಆದರೆ ಈಗಲೂ ಇಬ್ಬರು ಆಟಗಾರರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಬ್ಬರನ್ನೂ ತಂಡದಿಂದ ಹೊರಗಿಟ್ಟಿರುವುದು ನಿಜಕ್ಕೂ ಆಶ್ಚರ್ಯಕರ ನಡೆಯಾಗಿದೆ.

 ಬಿ ಗುಂಪಿನಲ್ಲಿ ಆಡಲಿದೆ ವೆಸ್ಟ್ ಇಂಡೀಸ್

ಬಿ ಗುಂಪಿನಲ್ಲಿ ಆಡಲಿದೆ ವೆಸ್ಟ್ ಇಂಡೀಸ್

"ತಂಡದಲ್ಲಿ ಆಯ್ಕೆಯಾಗದ ಆಟಗಾರರು, ತಮ್ಮ ಕಠಿಣ ಪರಿಶ್ರಮವನ್ನು ಮುಂದುವರೆಸಲಿದ್ದಾರೆ. ಸಿಪಿಎಲ್ ಮತ್ತು ಸಿಜಿ ಯುನೈಟೆಡ್ ಸೂಪರ್ 50 ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ; ಏಕೆಂದರೆ ಗಾಯಗಳು ಅಥವಾ ಇತರ ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ನಾವು ಆಟಗಾರರನ್ನು ಬದಲಿಯಾಗಿ ಕರೆಯಬೇಕಾದಾಗ ಏನಾಗಬಹುದು ಎಂದು ನಿಮಗೆ ತಿಳಿದಿಲ್ಲ." ಎಂದು ಹೇಳಿದರು.

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಮೊದಲ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ತನ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 19 ರಂದು ಜಿಂಬಾಬ್ವೆಯನ್ನು ಎದುರಿಸುತ್ತದೆ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ವೆಸ್ಟ್ ಇಂಡೀಸ್ ಗುಂಪಿನ ಇತರ ತಂಡಗಳು ಬಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿವೆ.

ವೆಸ್ಟ್‌ ಇಂಡೀಸ್ ಆಟಗಾರರ ಪಟ್ಟಿ

ವೆಸ್ಟ್‌ ಇಂಡೀಸ್ ಆಟಗಾರರ ಪಟ್ಟಿ

ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ರೇಮೊನ್ ಓಡನ್ ಸ್ಮಿತ್

ಟಿ20 ವಿಶ್ವಕಪ್‌ಗೆ ಮುನ್ನ ವೆಸ್ಟ್ ಇಂಡೀಸ್ ಅಕ್ಟೋಬರ್ 5 ಮತ್ತು ಅಕ್ಟೋಬರ್ 7 ರಂದು ಎರಡು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 15, 2022, 10:54 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X