ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಈ ಯುವ ಬೌಲರ್ ಇರಲೇಬೇಕು; ದಿಲೀಪ್ ವೆಂಗ್‌ಸರ್ಕರ್

T20 World Cup 2022: This Young Bowler Must Be In Indias T20 World Cup Squad Says Dilip Vengsarkar

ಅಕ್ಟೋಬರ್- ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಯುವ ವೇಗಿ ಉಮ್ರಾನ್ ಮಲಿಕ್ ಭಾರತೀಯ ತಂಡದಲ್ಲಿರಲು ಅರ್ಹರು ಎಂದು ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಹೇಳಿದ್ದಾರೆ. ಫಾರ್ಮ್‌ನಲ್ಲಿರುವ ಮತ್ತು ಅರ್ಹತೆ ಇರುವ ವೇಗಿಗಳಿಗೆ ಅವಕಾಶ ನೀಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಉಮ್ರಾನ್ ಮಲಿಕ್‌ಗೆ ರಾಷ್ಟ್ರೀಯ ತಂಡಕ್ಕೆ ಮೊದಲ ಕರೆ ನೀಡಲಾಯಿತು. ಆದರೆ, ಜಮ್ಮು ಮತ್ತು ಕಾಶ್ಮೀರದ ವೇಗಿ 5 ಪಂದ್ಯಗಳಲ್ಲಿ ಒಂದೂ ಪಂದ್ಯದಲ್ಲಿ ಅವಕಾಶ ಸಿಗದೆ ಬೆಂಚ್ ಕಾಯಿಸಬೇಕಾಯಿತು.

IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆIND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ

ಜೂನ್ 26 ಮತ್ತು 28ರಂದು ಐರ್ಲೆಂಡ್‌ನಲ್ಲಿ 2 ಟಿ20 ಪಂದ್ಯಗಳನ್ನು ಆಡಲು ಸಿದ್ಧವಾಗಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತೀಯ ತಂಡದ ಭಾಗವಾಗಿರುವ ಉಮ್ರಾನ್ ಮಲಿಕ್, ಡಬ್ಲಿನ್‌ನಲ್ಲಿ ತನ್ನ ಚೊಚ್ಚಲ ಭಾರತ ಕ್ಯಾಪ್ ಧರಿಸುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಟಿ20 ವಿಶ್ವಕಪ್ ವರ್ಷದಲ್ಲಿ ಭಾರತವು ನೋಡುತ್ತಿರುವ ಯುವ ವೇಗಿಯ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸಬೇಕಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಸ್ಥಿರ ಪ್ರದರ್ಶನ

ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಸ್ಥಿರ ಪ್ರದರ್ಶನ

ಗಮನಾರ್ಹವಾದ ಅಂಶವೆಂದರೆ ಉಮ್ರಾನ್ ಮಲಿಕ್ ಅವರು IPL 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಸ್ಥಿರ ಪ್ರದರ್ಶನ ನೀಡಿ ಬಹುಮಾನ ಪಡೆದರು. ಅವರು ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಬರಿಸುವಂತೆ ಸತತವಾಗಿ 150kph ವೇಗದಲ್ಲಿ ಬೌಲಿಂಗ್ ಮಾಡಿದರು. ಐಪಿಎಲ್ 2021ಕ್ಕೆ ಹೋಲಿಸಿದರೆ ಉಮ್ರಾನ್ ಮಲಿಕ್ ತನ್ನ ವೇಗ ಮತ್ತು ನಿಯಂತ್ರಣವನ್ನು ಸುಧಾರಿಸಿದ್ದಾರೆ. ಏಕೆಂದರೆ ಈ ಯುವ ವೇಗಿ ಎಸ್‌ಆರ್‌ಎಚ್‌ ತಂಡಕ್ಕಾಗಿ 14 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದರು.

ಟಿ20 ಸ್ವರೂಪದಲ್ಲಿ ಅತ್ಯುತ್ತಮ ಬೌಲರ್‌

ಟಿ20 ಸ್ವರೂಪದಲ್ಲಿ ಅತ್ಯುತ್ತಮ ಬೌಲರ್‌

"ಉಮ್ರಾನ್ ಮಲಿಕ್ ಬಹಳ ರೋಮಾಂಚನಕಾರಿ ಪ್ರತಿಭೆ. ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಮತ್ತು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಬೌಲರ್‌ನಂತೆ ಕಾಣುವ ಮೂಲಕ ಅವರು ಅವಕಾಶಕ್ಕೆ ಅರ್ಹರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾನೆ ಮತ್ತು ಅವನು ಅದನ್ನು ಮಾಡುತ್ತಾನೆ ಎಂದು ನನಗೆ ಖಾತ್ರಿಯಿದೆ. ಟಿ20 ವಿಶ್ವಕಪ್‌ನಲ್ಲಿ ಅವಕಾಶ ನೀಡಿದರೆ ಒಳ್ಳೆಯದು," ಎಂದು ದಿಲೀಪ್ ವೆಂಗ್‌ಸರ್ಕರ್ ಮುಂಬೈನಲ್ಲಿ ಹೇಳಿದರು.

"ಉಮ್ರಾನ್ ಮಲಿಕ್ ಯುವ ವೇಗದ ಬೌಲರ್ ಆಗಿದ್ದು, ಭಾರತೀಯ ತಂಡದ ಪರವಾಗಿ ಆಡಲು ಇಷ್ಟಪಡುತ್ತಾನೆ. ನೀವು ಫಾರ್ಮ್‌ನಲ್ಲಿರುವ ಯಾರಿಗಾದರೂ ಅವಕಾಶವನ್ನು ನೀಡಬೇಕು. ಅವನು ಯುವಕ, ಆಡಲು ಉತ್ಸುಕನಾಗಿದ್ದಾನೆ ಮತ್ತು ಯಶಸ್ಸಿನ ಹಸಿವಿನಿಂದ ಕೂಡಿದ್ದಾನೆ," ಎಂದು ಮಾಜಿ ರಾಷ್ಟ್ರೀಯ ತಂಡದ ಆಯ್ಕೆಗಾರರ ಅಧ್ಯಕ್ಷರೂ ಆಗಿದ್ದ ದಿಲೀಪ್ ವೆಂಗ್‌ಸರ್ಕರ್ ಅಭಿಪ್ರಾಯಪಟ್ಟರು.

ಉಮ್ರಾನ್‌ಗೆ ಅವಕಾಶ ನೀಡಬೇಕು ಎಂದ ರೋಜರ್ ಬಿನ್ನಿ

ಉಮ್ರಾನ್‌ಗೆ ಅವಕಾಶ ನೀಡಬೇಕು ಎಂದ ರೋಜರ್ ಬಿನ್ನಿ

ಈ ಮಧ್ಯೆ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ವೇಗದ ಬೌಲರ್ ರೋಜರ್ ಬಿನ್ನಿ ಕೂಡ ಉಮ್ರಾನ್ ಮಲಿಕ್ ಅವರನ್ನು ಶೀಘ್ರದಲ್ಲೇ ಭಾರತ ತಂಡಕ್ಕಾಗಿ ಆಡಲು ಬೆಂಬಲಿಸಿದರು.

"ಇದೀಗ ಖಂಡಿತವಾಗಿಯೂ ವೇಗದ ಬೌಲರ್‌ಗಳ ದೊಡ್ಡ ಗುಂಪೇ ಬರಲಿದೆ ಮತ್ತು ಅವರಿಗೆ (ಉಮ್ರಾನ್) ತಕ್ಷಣವೇ ಅವಕಾಶ ನೀಡಬೇಕು. ಏಕೆಂದರೆ ಅವರು ತ್ವರಿತವಾಗಿ ತಮ್ಮನ್ನು ಸಾಬೀತುಪಡಿಸಿದ್ದಾರೆ ಮತ್ತು ಅವರು ಐಪಿಎಲ್‌ನಲ್ಲಿ ಕೆಲವು ಯಾರ್ಕರ್‌ಗಳನ್ನು ಬೌಲ್ ಮಾಡುವುದನ್ನು ನೀವು ನೋಡಿದರೆ ಗೊತ್ತಾಗುತ್ತದೆ. ಆದ್ದರಿಂದ ನೀವು ಈ ಯುವಕನನ್ನು ಹೆಚ್ಚು ಕಾಲ ಹೊರಗಿಡಲು ಸಾಧ್ಯವಿಲ್ಲ," ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರೂ ಆಗಿರುವ ರೋಜರ್ ಬಿನ್ನಿ ಹೇಳಿದರು.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಭಾರತವು ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಆಲ್-ಫಾರ್ಮ್ಯಾಟ್ ಬೌಲರ್ ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಗುಣಮಟ್ಟದ ವೇಗಿಗಳನ್ನು ಹೊಂದಿರುವುದರಿಂದ ಉಮ್ರಾನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ತಂಡದೊಂದಿಗೆ ಪ್ರಯಾಣಿಸುತ್ತಿರುವ ಯುವ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್, ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ದೀಪಕ್ ಚಹರ್ ಅವರೊಂದಿಗೆ ಪೈಪೋಟಿ ನಡೆಸಬೇಕಿದೆ.

Story first published: Sunday, June 26, 2022, 12:42 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X