ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರ ರೀತಿಯ ಆಟಗಾರರು ತಂಡದಲ್ಲಿಲ್ಲ; ಭಾರತ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ಜೇಸನ್ ರಾಯ್

T20 World Cup 2021: Jason Roy revealed the reason behind Englands loss against India in warm up match

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು. ಹೌದು, ಸುಮಾರು 5 ವರ್ಷಗಳ ಬಳಿಕ ಮರಳಿ ಬಂದಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಸದ್ಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಭಾನುವಾರದಿಂದ ಆರಂಭವಾಗಿರುವ ಅರ್ಹತಾ ಸುತ್ತಿನ ಮೂಲಕ ಚಾಲನೆ ಪಡೆದುಕೊಂಡಿರುವ ಟೂರ್ನಿಯಲ್ಲಿ ಈಗಾಗಲೇ ಕೆಲ ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿವೆ.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬಹುದಾದ ತಂಡಗಳ ಪೈಕಿ ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ಸ್ ಆಗಿರುವ ಇಂಗ್ಲೆಂಡ್ ಕೂಡ ಮುಂಚೂಣಿಯಲ್ಲಿದೆ. ಹೀಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಲ್ಲ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುವ ಮುನ್ನ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಿದೆ.

ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!

ಹೀಗೆ ಮೊದಲು ಭಾರತ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ ಇಂಗ್ಲೆಂಡ್ 188 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿ ಕಠಿಣ ಗುರಿಯನ್ನು ಭಾರತ ತಂಡಕ್ಕೆ ನೀಡಿದರೂ ಸಹ ಸೋಲನುಭವಿಸಿತ್ತು. ನಂತರ ನ್ಯೂಜಿಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ 13 ರನ್‌ಗಳ ಗೆಲುವನ್ನು ಸಾಧಿಸಿದೆ. ಹೀಗೆ ನ್ಯೂಜಿಲೆಂಡ್ ವಿರುದ್ಧದ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲೇನೋ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದೆ. ಆದರೆ ಭಾರತ ತಂಡದ ವಿರುದ್ಧ ಸೋತದ್ದು ತಂಡಕ್ಕೆ ತಲೆನೋವಾಗಿ ಪರಿಣಮಿಸಿರುವುದು ಮಾತ್ರ ಸುಳ್ಳಲ್ಲ. ಬೃಹತ್ ಮೊತ್ತವನ್ನು ಕಲೆಹಾಕಿದ ಹೊರತಾಗಿಯೂ ಆ ಗುರಿಯನ್ನು ಭಾರತ ಇನ್ನೂ 1 ಓವರ್ ಬಾಕಿ ಇರುವಾಗಲೇ ಬಾರಿಸಿದ್ದು ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ ಉಂಟಾಗುವಂತೆ ಮಾಡಿದೆ. ಹೀಗಾಗಿ ಭಾರತ ವಿರುದ್ಧ ತಮ್ಮ ತಂಡದ ಸೋಲಿನ ಕುರಿತಾಗಿ ವಿಶೇಷವಾಗಿ ಮಾತನಾಡಿರುವ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಸೋಲಿಗೆ ಕಾರಣವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ನಮ್ಮ ತಂಡದ ಕೆಲ ಆಟಗಾರರು ತುಂಬಾ ದಿನಗಳಿಂದ ಕ್ರಿಕೆಟ್ ಆಡಿರಲಿಲ್ಲ

ನಮ್ಮ ತಂಡದ ಕೆಲ ಆಟಗಾರರು ತುಂಬಾ ದಿನಗಳಿಂದ ಕ್ರಿಕೆಟ್ ಆಡಿರಲಿಲ್ಲ

"ನನ್ನ ಪ್ರಕಾರ ಇದು ನಮ್ಮ ಮೊದಲನೇ ಪಂದ್ಯವಾಗಿದ್ದ ಕಾರಣ ನಾವು ಉತ್ತಮ ಪ್ರದರ್ಶನವನ್ನೇ ನೀಡಿದೆವು ಎಂದು ಹೇಳಬಲ್ಲೆ. ಅದರಲ್ಲಿಯೂ ನಮ್ಮ ತಂಡದ ಹಲವಾರು ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸದ ಕಾರಣ ಕ್ರಿಕೆಟ್ ಆಡಿ ತುಂಬಾ ದಿನಗಳೇ ಆಗಿರುವುದರಿಂದ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಎಡವಿದರು. ಹಾಗೂ ಈ ತಪ್ಪನ್ನು ನಾವು ಆದಷ್ಟು ಬೇಗ ತಿದ್ದಿಕೊಳ್ಳಬೇಕಾದ ಅನಿವಾರ್ಯತೆ ಇದೆ" ಎಂದು ಭಾರತ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲಲು ಕಾರಣವೇನೆಂಬುದನ್ನು ಜೇಸನ್ ರಾಯ್ ತಿಳಿಸಿದ್ದಾರೆ.

ಆ ಇಬ್ಬರೂ ತಂಡದಲ್ಲಿ ಇಲ್ಲದಿರುವುದು ಹಿನ್ನಡೆಯುಂಟಾಗಿದೆ

ಆ ಇಬ್ಬರೂ ತಂಡದಲ್ಲಿ ಇಲ್ಲದಿರುವುದು ಹಿನ್ನಡೆಯುಂಟಾಗಿದೆ


"ದುರಾದೃಷ್ಟವಶಾತ್ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಪ್ರಮುಖ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಸ್ಥಾನವನ್ನು ಪಡೆದುಕೊಂಡಿಲ್ಲ. ಅವರಿಬ್ಬರ ಅನುಪಸ್ಥಿತಿ ತಂಡಕ್ಕೆ ಕಾಡಿದೆ. ಆದರೆ ಟೂರ್ನಿಗೆ ಪ್ರಕಟವಾಗಿರುವ ನಮ್ಮ ತಂಡದಲ್ಲಿರುವ ಆಟಗಾರರು ಆದಷ್ಟು ಬೇಗ ಪುಟಿದೇಳಲಿದ್ದು ಉತ್ತಮ ಪ್ರದರ್ಶನವನ್ನು ನೀಡಬಲ್ಲಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಜೇಸನ್ ರಾಯ್ ತಿಳಿಸಿದ್ದಾರೆ.

ಅಂತೂ ಟೀಂ ಇಂಡಿಯಾದ ಹೊಸ ನಾಯಕ ಯಾರು ಅಂತಾ ಕನ್ಫರ್ಮ್ ಮಾಡ್ತು BCCI | Oneindia Kannada
ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಮೊದಲ ಪಂದ್ಯ ಯಾವಾಗ?

ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಮೊದಲ ಪಂದ್ಯ ಯಾವಾಗ?

ಸದ್ಯ ಇಂಗ್ಲೆಂಡ್ ತಂಡ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಿದ್ದು ಟೂರ್ನಿಯ ಸೂಪರ್ 12 ಹಂತದಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯವು ಅಕ್ಟೋಬರ್ 23ರ ಶನಿವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.

Story first published: Thursday, October 21, 2021, 19:13 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X