ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನ ಸುಳಿಯಿಂದ ಹೊರಬಂದು ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಗಲು ಕಾರಣವಾಗಿದ್ದು 4 ಅಂಶಗಳು!

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್‌ನ ನೂತನ ಚಾಂಪಿಯನ್ ಎನಿಸಿಕೊಂಡಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಅಮೋಘ 8 ವಿಕೆಟ್‌ಗಳ ಜಯ ದಾಖಲಿಸುವ ಮೂಲಕ ಈ ಸಾಧನೆ ಮಾಡಿದೆ ಆರೋನ್ ಫಿಂಚ್ ಬಳಗ. ಆದರೆ ಆರೋನ್ ಫಿಂಚ್ ಈ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಟಿ20 ಮಾದರಿಯಲ್ಲಿ ಸೋಲಿನ ಮೇಲೆ ಸೋಲು ಕಂಡಿತ್ತು. ಹಾಗಿದ್ದರೂ ಅಮೋಗ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದು ಬೀಗಿದೆ.

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

ಟಿ20 ವಿಶ್ವಕಪ್‌ಗೂ ಹಿಂದಿನ ಟಿ20 ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡ ಸತತ ಸೋಲು ಕಂಡಿದ್ದರೂ ಆಸ್ಟ್ರೇಲಿಯಾ ತಂಡದ ಆತ್ಮವಿಶ್ವಾಸ ಕುಂದಿರಲಿಲ್ಲ. ಟೂರ್ನಿಗೆ ಅದ್ಭುತವಾದ ಸಿದ್ಧತೆಯನ್ನು ಮಾಡಿಕೊಂಡ ಆಸ್ಟ್ರೇಲಿಯಾ ಫೈನಲ್‌ವರೆಗೂ ಸಾಗಿ ಈಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿ

ಹಾಗಾದರೆ ಈ ಬಾರಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ಕಾರಣವಾದ ನಾಲ್ಕು ಸಂಗತಿಗಳು ಯಾವುದು? ಮುಂದೆ ಓದಿ..

ಆಸಿಸ್ ಆಟಗಾರರ ಒಗ್ಗಟ್ಟಿನ ಪ್ರದರ್ಶನ

ಆಸಿಸ್ ಆಟಗಾರರ ಒಗ್ಗಟ್ಟಿನ ಪ್ರದರ್ಶನ

ಈ ಬಾರಿಯ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡದ ಕೆಲ ಪ್ರಮುಖ ಆಟಗಾರರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆಸ್ಟ್ರೇಲಿಯಾ ತಂಡವನ್ನು ಇತರ ತಂಡಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದಂತೆಯೇ ಆಸಿಸ್ ಆಟಗಾರರು ಒಗ್ಗಟ್ಟಿನ ಪ್ರದರ್ಶನ ನೀಡಲು ಆರಂಭಿಸಿದ್ದರು. ಇದು ಆಸ್ಟ್ರೇಲಿಯಾ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಕಠಿಣ ಸಂದರ್ಭಗಳಲ್ಲಿಯೂ ಯಾರಾದರೂ ಆಟಗಾರರು ತಂಡದ ಕೈಕೆಳಗಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ

ಮಿಂಚಿದ ಡೇವಿಡ್ ವಾರ್ನರ್

ಮಿಂಚಿದ ಡೇವಿಡ್ ವಾರ್ನರ್

ಇನ್ನು ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಲು ಡೇವಿಡ್ ವಾರ್ನರ್ ಫಾರ್ಮ್ ಕಂಡುಕೊಂಡಿದ್ದು ಕೂಡ ಪ್ರಮುಖ ಕಾರಣವಾಗಿದೆ. ವಿಶ್ವಕೊ್ ಆರಂಭಕ್ಕೂ ಮುನ್ನ ವಾರ್ನರ್ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದರು. ಐಪಿಎಲ್‌ನಲ್ಲಿ ಫಾರ್ಮ್ ಕೊರತೆಯ ಕಾರಣಕ್ಕೆ ಆಡುವ ಬಳಗದಿಂದ ಹೊರಬಿದ್ದಿದ್ದ ವಾರ್ನರ್ ನಂತರ ಅಂತಿಮ 15ರ ತಂಡದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಈ ಸ್ಪೋಟಕ ಆಟಗಾರ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಸೆಮಿಫಯನಲ್ ಹಾಗೂ ಫೈನಲ್‌ನಲ್ಲಿ ವಾರ್ನರ್ ನೀಡಿದ ಪ್ರದರ್ಶನ ತಂಡದ ಗೆಲುವಿನಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದೆ.

ಫಲ ನೀಡಿದ ಮಿಶೆಲ್ ಮಾರ್ಶ್ ಪ್ರಯೋಗ

ಫಲ ನೀಡಿದ ಮಿಶೆಲ್ ಮಾರ್ಶ್ ಪ್ರಯೋಗ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಮಹತ್ವದ ಬದಲಾವಣೆಯೊಂದನ್ನು ಮಾಡಿತ್ತು. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಶಾನ್ ಮಾರ್ಶ್‌ಗೆ ಅಗ್ರ ಕ್ರಮಾಂಕಕ್ಕೆ ಭಡ್ತಿ ನೀಡಲು ನಿರ್ಧರಿಸಲಾಗಿತ್ತು. ಆಸ್ಟ್ರೇಲಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಶಾನ್ ಮಾರ್ಶ್ ಪ್ರದರ್ಶನ ನೀಡಿದರು. ಸಿಕ್ಕ ಅವಕಾಶವನ್ನು ಮಿಶೆಲ್ ಮಾರ್ಶ್ ಎರಡೂ ಕೈಗಳಿಮದ ಬಾಚಿಕೊಂಡರು. ಫೈನಲ್ ಪಂದ್ಯದಲ್ಲಿಯೂ ಮಾರ್ಶ್ ಆಸ್ಟ್ರೇಲಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಆಡಂ ಜಂಪಾ ಕೈ ಚಳಕ

ಆಡಂ ಜಂಪಾ ಕೈ ಚಳಕ

ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತೊಂದು ಪ್ರಮುಖ ಕಾರಣ ಆಸಿಸ್ ಸ್ಪಿನ್ನರ್ ಆಡಂ ಜಂಪಾ. ಯುಎಇನ ನಿಧಾನಗತಿಯ ಪಿಚ್‌ಅನ್ನು ಜಂಪಾ ಅತ್ಯುತ್ತಮವಾಗಿ ಬಳಖಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಎದುರಾಳಿ ತಂಡ ಮೇಲುಗೈ ಸಾಧಿಸದಂತೆ ನೊಡಿಕೊಳ್ಳುವಲ್ಲಿ ಆಸಿಸ್ ಪಡೆ ಯಶಸ್ವಿಯಾಯಿಯತು. ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಜಂಪಾ ಬೌಲಿಂಗ್ ದಾಳಿಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತಂಡದ ಗೆಲುವಿಗೆ ಕಾರಣವಾದರು. ಟೂರ್ನಿಯಲ್ಲಿ ಆಡಂ ಜಂಪಾ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಜೊತೆಗೆ ಚಾಂಪಿಯನ್ ಪಟ್ಟಕ್ಕೇರಿದೆ.

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್
ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್

ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್

Story first published: Monday, November 15, 2021, 19:36 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X