ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿಯೇ ಕೊನೆಯಾಯ್ತು ಈ 7 ಭಾರತೀಯ ಕ್ರಿಕೆಟಿಗರ ಟಿ20I ವೃತ್ತಿಜೀವನ!

T20 world cup: 7 Indian cricketers who played their last T20I match for India in T20 World Cup

ಟಿ20 ವಿಶ್ವಕಪ್ ಆಟಗಾರರರಿಗೆ ತಮ್ಮ ಸಾಮರ್ಥ್ಯ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಪಡಿಸಲು ಇರುವ ಅತಿ ದೊಡ್ಡ ವೇದಿಕೆಯಾಗಿದೆ. 2007ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಚುಟುಕು ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿಕೊಂಡು ಬಂದಿದೆ. ಬಾರತ ಮೊದಲ ಆವೃತ್ತಿಯ ವಿಶ್ವಕಪ್‌ನ ಚಾಂಪಿಯನ್ ತಂಡವಾಗಿದ್ದರೆ ನಂತರ ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಮಡಗಳು ಚಾಂಪಿಯನ್ ಪಟ್ಟಕ್ಕೇರಿದೆ. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ.

ಭಾರತ ಟಿ20 ವಿಶ್ವಕಪ್‌ನಲ್ಲಿ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರೆ ಮತ್ತೊಂದು ಬಾರಿ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಒಂದು ಬಾರಿ ಸೆಮಿಫೈನಲ್‌ನಲ್ಲಿ ಸೋಲು ಕಂಡಿದೆ. 2009, 2010 ಹಾಗೂ 2012ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸೂಪರ್ 8 ಘಟ್ಟಕ್ಕಿಂತ ಮೇಲೇರಲು ವಿಫಲವಾಗಿತ್ತು. ಈ ಬಾರಿಯ ಆವೃತ್ತಿಯಲ್ಲಿಯೂ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿದ್ದ ಎಂಎಸ್ ಧೋನಿ ಈ ಹಿಂದಿನ ಎಲ್ಲಾ ಆವೃತ್ತಿಯ ವಿಶ್ವಕಪ್‌ನಲ್ಲಿಯೂ ಟೀಮ್ ಇಂಡಿಯಾದ ನಾಯಕನಾಗಿದ್ದರು.

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್

ಈ ವಿಶ್ವಕಪ್‌ ವೇದಿಕೆಯಲ್ಲಿ ಆಡುವುದು ಎಲ್ಲಾ ಆಟಗಾರರಿಗೂ ಪ್ರತಿಷ್ಠೆ ಹಾಗೂ ಗೌರವದ ಸಂದರ್ಭ. ಹೀಗಾಗಿ ಇಂತಾ ಅವಕಾಶವನ್ನು ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಆದರೆ ಕೆಲ ಕ್ರಿಕೆಟಿಗರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಜೀವನವನ್ನು ವಿಶ್ವಕಪ್ ವೇದಿಕೆಯಲ್ಲಿಯೇ ಕೊನೆಗೊಳಿಸಿದ್ದಾರೆ. ಕೆಲವರದ್ದು ನಿರೀಕ್ಷಿತವಾಗಿದ್ದರೆ ಕೆಲವರು ವಿಶ್ವಕಪ್‌ನ ಬಳಿಕ ನಿವೃತ್ತಿ ಘೋಷಿಸಿದ್ದಾರೆ. ಹಾಗಾದರೆ ವಿಶ್ವಕಪ್ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಅಂತಿಮ ಪಂದ್ಯವನ್ನಾಡಿದ ಏಳು ಭಾರತೀಯ ಆಟಗಾರರ ಪಟ್ಟಿ ಇಲ್ಲಿದೆ.

ವೀರೇಂದ್ರ ಸೆಹ್ವಾಗ್, 2012ರ ವಿಶ್ವಕಪ್

ವೀರೇಂದ್ರ ಸೆಹ್ವಾಗ್, 2012ರ ವಿಶ್ವಕಪ್

ಭಾರತ ಅಂತಾರಾಷ್ಟ್ರೀಯ ಟಿ20 ತಂಡದ ಮೊದಲ ನಾಯಕ ವೀರೇಂದ್ರ ಸೆಹ್ವಾಗ್. ಇವರು ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯವನ್ನು 2012ರ ಟಿ20 ವಿಶ್ವಕಪ್‌ನಲ್ಲಿ ಕೊನೆಗೊಳಿಸಿದರು. ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ ಅಂತಿಮ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ 14 ಎಸೆತ ಎದುರಿಸಿದ್ದ ವೀರೇಂದ್ರ ಸೆಹ್ವಾಗ್ 17 ರನ್‌ಗಳಿಸಿದ್ದರು. ನಂತರ ರಾಬಿನ್ ಪೀಟರ್ಸನ್‌ಗೆ ಸೆಹ್ವಾಗ್ ವಿಕೆಟ್ ಒಪ್ಪಿಸಿದ್ದರು.

ಜೋಗಿಂದರ್ ಶರ್ಮಾ, 2007ರ ವಿಶ್ವಕಪ್

ಜೋಗಿಂದರ್ ಶರ್ಮಾ, 2007ರ ವಿಶ್ವಕಪ್

2007ರ ಚೊಚ್ಚಲ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತ ಗೆದ್ದು ಬೀಗಿದ ಕ್ಷಣವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಆ ಪಂದ್ಯದ ಅಂತಿಮ ಓವರ್ ಎಸೆದಿದ್ದ ಜೋಗಿಂದರ್ ಶರ್ಮಾ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವನ್ನು ಸಾರಿದ್ದರು. ಆದರೆ ಭಾರತೀಯ ಕ್ರಿಕೆಟ್‌ನ ಬಹುತೇಕ ಅಭಿಮಾನಿಗಳಿಗೆ ತಿಳಿಯದ ಸಂಗತಿಯೆಂದರೆ ಆ ಪಂದ್ಯದ ಬಳಿಕ ಜೋಗಿಂದರ್ ಶರ್ಮಾ ಭಾರತದ ಪರವಾಗಿ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಈ ನಾಲ್ಕು ಪಂದ್ಯಗಳು ಕೂಡ 2007ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಪಂದ್ಯಗಳಾಗಿದೆ. ಹೀಗಾಗಿ 2007ರ ವಿಶ್ವಕಪ್‌ನ ಫೈನಲ್ ಪಂದ್ಯವೇ ಜೋಗಿಂದರ್ ಶರ್ಮಾ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಆರ್‌ಪಿ ಸಿಂಗ್, 2009ರ ವಿಶ್ವಕಪ್

ಆರ್‌ಪಿ ಸಿಂಗ್, 2009ರ ವಿಶ್ವಕಪ್

2007ರ ಟಿ20 ವಿಶ್ವಕಪ್‌ ಗೆದ್ದ ಭಾರತೀಯ ತಂಡದ ಮತ್ತೋರ್ವ ಸದಸ್ಯ ರುದ್ರ ಪ್ರತಾಪ್ ಸಿಂಗ್. ಆದರೆ ಆರ್‌ಪಿ ಸಿಂಗ್ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಅಂತ್ಯವಾಗಿದ್ದು 2009ರ ವಿಶ್ವಕಪ್‌ನಲ್ಲಿ. ನಾಟಿಂಗ್‌ಹ್ಯಾಮ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರ್‌ಪಿ ಸಿಂಗ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದರು.

ಅಜಿತ್ ಅಗರ್ಕರ್, 2007ರ ವಿಶ್ವಕಪ್

ಅಜಿತ್ ಅಗರ್ಕರ್, 2007ರ ವಿಶ್ವಕಪ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ 2007ರ ವಿಶ್ವಕಪ್‌ನಲ್ಲಿ ತಮ್ಮ ಅಂತಿಮ ಅಂತಾರಾಷ್ಟ್ರೀಯ ಚುಟಕು ಪಂದ್ಯವನ್ನಾಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯ ಸೂಪರ್ 8ರ ಘಟ್ಟದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಗರ್ಕರ್ ಕೊನೆಯ ಪಂದ್ಯವನ್ನು ಆಡಿದರು. ಈ ಟೂರ್ನಿಯಲ್ಲಿ ಭಾರತ ಸೋಲು ಕಂಡ ಏಕೈಕ ಪಂದ್ಯ ಇದಾಗಿತ್ತು ಎಂಬುದು ಗಮನಾರ್ಹ.

ಲಕ್ಷ್ಮೀಪತಿ ಬಾಲಾಜಿ, 2012ರ ವಿಶ್ವಕಪ್

ಲಕ್ಷ್ಮೀಪತಿ ಬಾಲಾಜಿ, 2012ರ ವಿಶ್ವಕಪ್

ಟಿ20 ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಜೀವನ ಅಂತ್ಯಗೊಳಿಸಿದ ಮತ್ತೋರ್ವ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ. 2012ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಪಂದ್ಯದ ನಂತರ ಬಾಲಾಜಿ ಭಾರತದ ಪರವಾಗಿ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಆಡುವ ಅವಕಾಶ ದೊರೆಯಲಿಲ್ಲ. ಅಂತಿಮ ಪಂದ್ಯದಲ್ಲಿ ಬಾಲಾಜಿ 3.5 ಓವರ್ ಎಸೆದಿದ್ದು 37 ರನ್‌ ನೀಡಿ 3 ವಿಕೆಟ್ ಪಡೆದಿದ್ದರು.

ಜಹೀರ್ ಖಾನ್, 2012ರ ವಿಶ್ವಕಪ್

ಜಹೀರ್ ಖಾನ್, 2012ರ ವಿಶ್ವಕಪ್

ಅಚ್ಚರಿಯೆಂಬಂತೆ ಭಾರತ ಕಂಡ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜಹೀರ್ ಖಾನ್ ಕೂಡ 2012ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ. ಲಕ್ಷ್ಮೀಪತಿ ಬಾಲಾಜಿ ರೀತೊಯಲ್ಲಿಯೇ ಜಹೀರ್ ಖಾನ್ ಕೂಡ ಈ ಪಂದ್ಯದ ನಂತರ ಒಂದೇ ಒಂದು ಅವಕಾಶವನ್ನು ಪಡೆದುಕೊಂಡಿಲ್ಲ. ಈ ಪಂದ್ಯದಲ್ಲಿ ಜಹೀರ್ ಖಾನ್ ನಾಲ್ಕು ಓವರ್‌ಗಳಲ್ಲಿ 22 ರನ್‌ ನೀಡಿ 3 ವಿಕೆಟ್ ಪಡೆದುಕೊಂಡಿದ್ದರು.

ಇರ್ಫಾನ್ ಪಠಾಣ್, 2012ರ ವಿಶ್ವಕಪ್

ಇರ್ಫಾನ್ ಪಠಾಣ್, 2012ರ ವಿಶ್ವಕಪ್

2007ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಇರ್ಫಾನ್ ಪಠಾಣ್ 2012ರ ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೇ ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕೂಡ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯವನ್ನು ಭಾರತ 1 ರನ್‌ಗಳ ಅಂತರದಿಂದ ಗೆದ್ದುಕೊಂಡಿದ್ದರು ಕೂಡ ಟೂರ್ನಿಯಿಂದ ಹೊರಬಿದ್ದಿತ್ತು. ಈ ಪಂದ್ಯದ ನಂತರ ಇರ್ಫಾನ್ ಪಠಾಣ್, ಝಹೀರ್ ಖಾನ್, ಲಕ್ಷ್ಮೀಪತಿ ಬಾಲಾಜಿ ಹಾಗೂ ವೀರೇಂದ್ರ ಸೆಹ್ವಾಗ್ ಈ ನಾಲ್ವರು ಕ್ರಿಕೆಟಿಗರು ಕೂಡ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕೂಡ ಆಡುವ ಅವಕಾಶ ದೊರೆಯಲಿಲ್ಲ. ಇರ್ಫಾನ್ ಪಠಾಣ್ ಈ ಪಂದದ್ಯದಲ್ಲಿ 3 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದರು.

Story first published: Thursday, November 11, 2021, 10:49 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X