ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!

T20 World Cup: Australia set to welcome limited crowds at stadiums

ಸಿಡ್ನಿ, ಜೂನ್ 13: ಕೊರೊನಾವೈರಸ್‌ನಿಂದಾಗಿ ಈ ವರ್ಷದ ಕ್ರೀಡಾಸ್ಪರ್ಧೆಗಳು ಅಸ್ತವ್ಯಸ್ತವಾಯಿತು ಅಂತ ಕ್ರೀಡಾಪ್ರೇಮಿಗಳು ಗೊಣಗಿಕೊಳ್ಳುತ್ತಿರುವಾಗಲೇ ವಿಶ್ವದಲ್ಲಿ ಲಾಕ್‌ಡೌನ್ ಸಡಲಿಕೆಗೊಳ್ಳುತ್ತಿರುವುದರಿಂದ ಕ್ರೀಡಾಚಟುವಟಿಕೆಗಳೂ ಮೆಲ್ಲಗೆ ಪುನರಾರಂಭದತ್ತ ಮುಖಮಾಡುತ್ತಿವೆ. ಇದು ಕ್ರೀಡಾ ಪ್ರೇಮಿಗಳಿಗೆ ಕೊಂಚ ಸಮಾಧಾನ ತರುತ್ತಿದೆ.

ಜೂನ್‌ನಲ್ಲಿ ಆರಂಭಗೊಳ್ಳಲಿದ್ದ ಭಾರತದ ಶ್ರೀಲಂಕಾ ಪ್ರವಾಸ ಮುಂದೂಡಿಕೆಜೂನ್‌ನಲ್ಲಿ ಆರಂಭಗೊಳ್ಳಲಿದ್ದ ಭಾರತದ ಶ್ರೀಲಂಕಾ ಪ್ರವಾಸ ಮುಂದೂಡಿಕೆ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕೂಡ ಆತಂಕದಲ್ಲಿತ್ತು. ವಿದೇಶಿ ಪ್ರಯಾಣಗಳಿಗೆ ನಿರ್ಬಂಧವಿರುವುದರಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಕ್ರಿಕೆಟ್ ಸ್ಪರ್ಧೆಗಳ ಮರು ಆಯೋಜನೆಯತ್ತ ಕಾರ್ಯ ನಿರ್ವಹಿಸುತ್ತಿದೆ. ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ಮುಂದಿನ ತಿಂಗಳಿಗೆ ಮುಂದೂಡಲ್ಪಟ್ಟಿದ್ದರೂ ವಿಶ್ವಕಪ್‌ ಬಗೆಗಿನ ಆಶಾಭಾವನೆಯ ಮಿಣುಕು ಹುಳ ಮಿನುಗತೊಡಗಿದೆ.

ನಿಸ್ವಾರ್ಥ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿಯನ್ನು ಹೊಗಳಿದ ಡೇವಿಡ್ ವಾರ್ನರ್ನಿಸ್ವಾರ್ಥ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿಯನ್ನು ಹೊಗಳಿದ ಡೇವಿಡ್ ವಾರ್ನರ್

ಜುಲೈ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರೀಡಾಸ್ಪರ್ಧೆಗಳಿಗೆ 10,000ದ ವರೆಗೆ ವೀಕ್ಷಕರಿಗೆ ಅನುಮತಿ ನೀಡುವತ್ತ ಯೋಚಿಸಿರುವುದಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಸುಳಿವು ನೀಡಿದ್ದಾರೆ. ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಕ್ರೀಡಾಸ್ಪರ್ಧೆಗಳು ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯುತ್ತಿವೆ.

ಕೋಚ್‌ಗಳು ನನ್ನ ಮೇಲೆ ವರ್ಣಭೇದದ ಕಾಮೆಂಟ್ಸ್ ಮಾಡಿದ್ದರು: ಕಾರ್ಬೆರಿಕೋಚ್‌ಗಳು ನನ್ನ ಮೇಲೆ ವರ್ಣಭೇದದ ಕಾಮೆಂಟ್ಸ್ ಮಾಡಿದ್ದರು: ಕಾರ್ಬೆರಿ

ಐಸಿಸಿ ಮುಂದಿನ ತಿಂಗಳು ಟಿ20 ವಿಶ್ವಕಪ್‌ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಬಹು ನಿರೀಕ್ಷಿತ ಟಿ20 ವಿಶ್ವಕಪ್ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ. ಕೊರೊನಾವೈರಸ್ ಕಾರಣ 16 ತಂಡಗಳು ಪಾಲಗೊಳ್ಳುವ ಈ ವಿಶ್ವಕಪ್ ಟೂರ್ನಿ ನಡೆಯೋದೆ ಅನುಮಾನವೆಂಬಂತಿದೆ. ಈ ಮಧ್ಯೆ ಮಾರಿಸನ್ ಆಶಾಭಾವನೆಯ ಹೇಳಿಕೆ ನೀಡಿದ್ದಾರೆ.

ODI ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ದಾಖಲೆ: ಟಾಪ್-5ರಲ್ಲಿ ಭಾರತೀಯರದ್ದೇ ಸಿಂಹಪಾಲು!ODI ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ದಾಖಲೆ: ಟಾಪ್-5ರಲ್ಲಿ ಭಾರತೀಯರದ್ದೇ ಸಿಂಹಪಾಲು!

'ಜುಲೈ ವೇಳೆಗೆ 40,000 ಸಾಮರ್ಥ್ಯದ ಸ್ಟೇಡಿಯಂಗಳಲ್ಲಿ 10,000 ವೀಕ್ಷಕರಿಗೆ ಅನುಮತಿ ನೀಡಲು ನಿಯಮದಲ್ಲಿ ಬದಲಾವಣೆ ತರಲು ಅವಕಾಶವಿದೆ. ಇವು ಪ್ರಾಯೋಗಿಕ, ಕಾಮನ್‌ಸೆನ್ಸ್ ವಿಚಾರಗಳು, ಮುಂದಿನ ಕೆಲವು ವಾರಗಳಲ್ಲಿ ವೈದ್ಯಕೀಯ ತಜ್ಞರ ಸಮಿತಿ ಈ ಬಗ್ಗೆ ಕಾರ್ಯ ನಿರ್ವಹಿಸಲಿದೆ ಮತ್ತು ಉತ್ತಮ ಸೂಚನೆಯನ್ನು ನೀಡುತ್ತವೆ ಎಂದು ನಾನು ಭಾವಿಸುತ್ತೇನೆ,' ಎಂದು ಮಾರಿಸನ್ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಹೇಳಿದ್ದಾರೆ.

Story first published: Saturday, June 13, 2020, 15:56 [IST]
Other articles published on Jun 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X