ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವನ್ನು ಬೊಟ್ಟು ಮಾಡಿದ ಆಸಿಸ್ ಸ್ಟಾರ್!

t20 world cup: Australian Former cricketer Mitchell Johnson said India took a risk by picking only four pacers

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಕಳೆದ ಏಷ್ಯಾ ಕಪ್‌ನಲ್ಲಿ ಮಾಡಿದ ಎಡವಟ್ಟುಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಬದಲಾವಣೆಗಳು ತಂಡದಲ್ಲಿ ಆಗಿದ್ದು ಈ ಮೂಲಕ ವಿಶ್ವಕಪ್‌ಗ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಏಷ್ಯಾ ಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ವಿಶ್ವಕಪ್‌ಗೆ ಟೂರ್ನಿ ಗೆಲ್ಲುವ ನೆಚ್ಚಿನ ತಂಡವಾಗಿಯೇ ಭಾರತ ಕಣಕ್ಕಿಳಿಯುತ್ತಿದೆ.

ಆದರೆ ಟೀಮ್ ಇಂಡಿಯಾದ ಈ ಬಳಗಕ್ಕೆ ಒಂದು ವಿಚಾರ ದೊಡ್ಡ ಹಿನ್ನಡೆಯಾಗಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟಾರ್ ವೇಗಿ ಮಿಚೆಲ್ ಜಾನ್ಸನ್ ಹೇಳಿದ್ದಾರೆ. ಟೀಮ್ ಇಂಡಿಯಾದ ಆಯ್ಕೆ ವಿಚಾರವಾಗಿ ಆಯ್ಕೆ ಸಮಿತಿ ಮಾಡಿದ ಎಡವಟ್ಟು ವಿಶ್ವಕಪ್‌ನಲ್ಲಿ ಆಘಾತ ನೀಡಲೂ ಬಹುದು ಎಂದಿದ್ದಾರೆ ಜಾನ್ಸನ್. ಹಾಗಾದರೆ ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದರೂ ಮಿಚೆಲ್ ಜಾನ್ಸನ್ ಹೇಳಿದ ಭಾರತೀಯ ತಂಡದಲ್ಲಿನ ಆ ದೊಡ್ಡ ಲೋಪವೇನು? ಮಿಚೆಲ್ ಜಾನ್ಸನ್ ಹೇಳಿದ್ದೇನು? ಮುಂದೆ ಓದಿ..

ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್

ನಾಲ್ವರು ವೇಗಿಗಳ ವಿಭಾಗ

ನಾಲ್ವರು ವೇಗಿಗಳ ವಿಭಾಗ

ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದ 15 ಆಟಗಾರರನ್ನು ಒಳಗೊಂಡಿದೆ. ಇದರಲ್ಲಿ ಬೌಲಿಂಗ್ ವಿಭಾಗದಲ್ಲಿ, ಅದರಲ್ಲೂ ವೇಗದ ಬೌಲಿಂಗ್ ವಿಭಾಗದಲ್ಲಿ ಕೇವಲ ನಾಲ್ವರು ಸ್ಪೆಶಲಿಸ್ಟ್ ವೇಗಿಗಳು ಮಾತ್ರವೇ ಇದ್ದಾರೆ. ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಈ ಪಡೆಗೆ ಸಾಥ್ ನೀಡಲಿದ್ದಾರೆ. ಅನುಭವಿ ಮೊಹಮ್ಮದ್ ಶಮಿ ಮೀಸಲು ಆಟಗಾರನಾಗಿ ಉಳಿದುಕೊಂಡಿದ್ದಾರೆ.

ಈ ನಿರ್ಧಾರವೇ ಅಪಾಯಕಾರಿ

ಈ ನಿರ್ಧಾರವೇ ಅಪಾಯಕಾರಿ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಭಾರತದ ತಂಡದಲ್ಲಿ ಕೇವಲ ನಾಲ್ವರು ವೇಗಿಗಳೂ ಮಾತ್ರವೇ ಇದ್ದಾರೆ. ಇಂಥಾ ಮಹತ್ವದ ಟೂರ್ನಿಗೆ ನಾಲ್ವರು ಸ್ಪೆಶಲಿಸ್ಟ್ ವೇಗಿಗಳನ್ನು ಮಾತ್ರವೇ ಆಯ್ಕೆ ಮಾಡಿರುವುದು ನಿಜಕ್ಕೂ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದಿದ್ದಾರೆ ಮಿಚೆಲ್ ಜಾನ್ಸನ್. "ನಿಮ್ಮ ತಂಡದಲ್ಲಿ ಓರ್ವ ವೇಗದ ಬೌಲಿಂಗ್ ಆಲ್ರೌಂಡರ್ ಇಬ್ಬರು ಸ್ಪಿನ್ನರ್‌ಗಳು, ಹಾಗೂ ನಾಲ್ವರು ವೇಗಿಗಳು ಮಾತ್ರ ಇದ್ದರೆ ಅದು ತಂಡಕ್ಕೆ ಯಾವಾಗಲೂ ಅಪಾಯಕಾರಿ. ಆದರೆ ಭಾರತ ತಂಡ ಇಬ್ಬರು ವೇಗಿಗಳು ಓ್ವ ಆಲ್‌ರೌಂಡರ್(ಹಾರ್ದಿಕ್ ಪಾಂಡ್ಯ) ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ" ಎಂದಿದ್ದಾರೆ ಮಿಚೆಲ್ ಜಾನ್ಸನ್.

ಆಸ್ಟ್ರೇಲಿಯಾದಲ್ಲಿ ಕನಿಷ್ಠ ಮೂವರು ವೇಗಿಗಳೊಂದಿಗೆ ಆಡಬೇಕು

ಆಸ್ಟ್ರೇಲಿಯಾದಲ್ಲಿ ಕನಿಷ್ಠ ಮೂವರು ವೇಗಿಗಳೊಂದಿಗೆ ಆಡಬೇಕು

ಮುಂದುವರಿದು ಮಾತನಾಡಿದ ಮಿಚೆಲ್ ಜಾನ್ಸನ್ "ಆಸ್ಟ್ರೇಲಿಯಾದಲ್ಲಿ ನೀವು ಖಂಡಿತವಾಗಿಯೂ ಮೂವರು ವೇಗಿಗಳೊಂದಿಗೆ ಆಡಬೇಕಾಗುತ್ತದೆ. ಪರ್ತ್‌ನಂತಾ ಪರಿಸ್ಥಿತಿಯಲ್ಲಿ ಆಡುವಾಗ ನಾಲ್ವರು ವೇಗಿಗಳು ನಿಮ್ಮಲ್ಲಿರಬೇಕಾಗುತ್ತದೆ. ಭಾರತ ತಂಡದಲ್ಲಿ ಖಂಡಿತವಾಗಿಯೂ ಯೋಜನೆಗಳಿರುತ್ತವೆ. ಆದರೆ ಕೇವಲ ನಾ್ವರು ವೇಗಿಗಳನ್ನು ಮಾತ್ರವೇ ಆಐ್ಕೆ ಮಾಡುವುದು ನನ್ನ ಪ್ರಕಾರ ಅಪಾಯಕಾರಿ" ಎಂದಿದ್ದಾರೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಐಯ್ಯರ್, ದೀಪಕ್ ಚಾಹರ್, ರವಿ ಬಿಷ್ಣೋಯ್

Story first published: Saturday, September 17, 2022, 10:56 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X