ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಪಂದ್ಯ 2, ಬಾಂಗ್ಲಾದೇಶ vs ಸ್ಕಾಟ್ಲೆಂಡ್, ಪಂದ್ಯದ ಸಂಪೂರ್ಣ ಮಾಹಿತಿ

T20 world cup: Bangladesh vs Scotland: Match details, weather forecast and pitch report

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗಿದೆ. ಈ ಸುತ್ತಿನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಸ್ಲಾಟ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಈ ಮೂಲಕ ಪ್ರಧಾನ ಸುತ್ತಿಗೇರಲು ಈ ಎರಡು ತಂಡಗಳ ಮಧ್ಯೆ ಪೈಪೋಟಿ ನಡೆಯಲಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಒಮಾನ್ ಹಾಗೂ ಪಪುವಾ ನ್ಯೂಗಿನಿ ತಮಡಗಳು ಮುಖಾಮುಖಿಯಾಗಿವೆ.

ಟಿ20 ವಿಶ್ವಕಪ್‌ಗೆ ಮುನ್ನ ತವರಿನಲ್ಲಿ ನಡೆದ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಂತಾ ತಂಡಗಳ ವಿರುದ್ಧ ಐತಿಹಾಸಿಕ ಸರಣಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬಂದಿದ್ದ ಬಾಂಗ್ಲಾದೇಶ ವಿಶ್ವಕಪ್‌ನ ಅರ್ಹತಾ ಸುತ್ತಿಗೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಸತತ ಎರಡು ಸೋಲು ಕಂಡಿದೆ. ಶ್ರೀಲಂಕಾ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 147-7 ವಿಕೆಟ್ ಕಳೆದುಕೊಮಡಿತ್ತು, ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಇನ್ನೂ ಏಳು ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಇನ್ನು ಐರ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್‌ಗಳನ್ನು ಗಳಿಸಿತ್ತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 144 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ಬಾಂಗ್ಲಾದೇಶ ಸೋಲು ಕಂಡಿದೆ. ಮತ್ತೊಂದೆಡೆ ಸ್ಕಾಟ್ಲೆಂಡ್ ತಂಡ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ನದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ vs ಸ್ಕಾಟ್ಲೆಂಟ್ ಪಮದ್ಯದ ಮಾಹಿತಿ:
ಪಂದ್ಯ: ಬಾಂಗ್ಲಾದೇಶ vs ಸ್ಕಾಟ್ಲೆಂಡ್
ದಿನಾಂಕ ಹಾಗೂ ಸಮಯ: 17 ಅಕ್ಟೋಬರ್ 2021, ಸಮಯ; 7:30
ಸ್ಥಳ: ಅಲ್ ಅಮೆರತ್ ಕ್ರಿಕೆಟ್ ಮೈದಾನ ಒಮಾನ್

ಹವಾಮಾನ: ಒಮಾನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಯಾವುದೇ ಸಾಧ್ಯತೆಯಿಲ್ಲ. ಸಂಪೂರ್ಣ 40 ಓವರ್‌ಗಳ ಆಟ ನಿರಾತಂಕವಾಗಿ ನಡೆಯಲಿದೆ.

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

ಪಿಚ್ ರಿಪೋರ್ಟ್: ಒಮಾನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ಟಾಸ್ ಪರಿಣಾಮ ಬೀರುವ ಸಾಧ್ಯತೆ ಬಹಳ ಕಡಿಮೆಯಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಸಮಾನವಾದ ಅವಕಾಶಗಳಿದೆ. ಈ ಕ್ರೀಡಾಂಗಣದಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ರನ್. ಇನ್ನು ಈ ಮೈದಾನದ ಇತಿಹಾಸದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಹಾಗೂ ರನ್ ಬೆನ್ನಟ್ಟಿದ ತಂಡಗಳು ಸಮಾನ ಯಶಸ್ಸು ಸಾಧಿಸಿದ ದಾಖಲೆಯಿದೆ.

ಬಾಂಗ್ಲಾದೇಶದ ಸಂಪೂರ್ಣ ಸ್ಕ್ವಾಡ್: ಮಹ್ಮದ್ ಉಲ್ಲಾ (ನಾಯಕ), ನೈಮ್ ಶೇಖ್, ಸೌಮ್ಯ ಸರ್ಕಾರ್, ಲಿಟನ್ ಕುಮಾರ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹಿದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಾಮ್ ಉದ್ದಿಂ ಹೊಸೇನ್ ಮೀಸಲು ಆಟಗಾರರು: ರುಬೆಲ್ ಹುಸೇನ್, ಅಮೀನುಲ್ ಇಸ್ಲಾಂ ಬಿಪ್ಲಬ್

ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಇಂಡೋ-ಪಾಕ್ ಬದ್ಧವೈರಿಗಳ ಮಹಾಸಮರಕ್ಕೆ ಭಾರತೀಯರಿಂದ ವಿರೋಧ | Oneindia Kannada

ಸ್ಕಾಟ್ಲೆಂಡ್ ಸಂಪೂರ್ಣ ಸ್ಕ್ವಾಡ್: ಕೈಲ್ ಕೋಟ್ಜರ್ (ನಾಯಕ), ರಿಚರ್ಡ್ ಬೆರಿಂಗ್ಟನ್ (ವಿಕೆಟ್ ಕೀಪರ್), ಡೈಲನ್ ಬಡ್ಜ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಜೋಶ್ ಡೇವಿ, ಅಲಾಸ್ಡೇರ್ ಇವಾನ್ಸ್, ಕ್ರಿಸ್ ಗ್ರೀವ್ಸ್, ಓಲಿ ಹೇರ್ಸ್, ಮೈಕೆಲ್ ಲೆಸ್ಕ್, ಕ್ಯಾಲಮ್ ಮ್ಯಾಕ್ಲಿಯೋಡ್, ಜಾರ್ಜ್ ಮುನ್ಸೆ, ಸಫ್ಯಾನ್ ಷರೀಫ್, ಕ್ರಿಸ್ ಸೋಲ್, ಹಮ್ಜಾ ತಾಹಿರ್ , ಕ್ರೇಗ್ ವ್ಯಾಲೇಸ್ (ವಿಕೆಟ್ ಕೀಪರ್), ಮಾರ್ಕ್ ವ್ಯಾಟ್, ಬ್ರಾಡ್ ವೀಲ್

Story first published: Sunday, October 17, 2021, 15:34 [IST]
Other articles published on Oct 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X