ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 2 ಅಭ್ಯಾಸ ಪಂದ್ಯ: ದೊಡ್ಡ ತಂಡಗಳಿಂದ ಸವಾಲು!

T20 World Cup: BCCI confirms Team India will play two warm-up matches before T20 WC

ಮುಂಬೈ, ಸೆಪ್ಟೆಂಬರ್ 19: ಐಪಿಎಲ್ 14ನೇ ಆವೃತ್ತಿಯ ಅಂತ್ಯವಾದ ಬಳಿಕ ಕೆಲವೇ ದಿನಗಳ ಅಂತರದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಟಿ20 ವಿಶ್ವಕಪ್‌ಗೆ ಎಲ್ಲಾ ತಂಡಗಳು ಕೂಡ ತಮ್ಮದೇ ರೀತಿಯಾಗಿ ಸಿದ್ಧತೆಯನ್ನು ನಡೆಸುತ್ತಿದೆ. ಇನ್ನು ಈ ಟೀಮ್ ಇಂಡಿಯಾ ಕೂಡ ಈ ಬಾರಿಯ ವಿಶ್ವಕಪ್‌ನ ಆರಂಭಕ್ಕೆ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡುವ ಮೂಲಕ ಸಿದ್ಧತೆಯನ್ನು ನಡೆಸಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆದ ಮೂರು ದಿನಗಳ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ. ಮೊದಲ ಅಭ್ಯಾಸ ಪಂದ್ಯ ಅಕ್ಟೋಬರ್ 18ರಂದು ನಡೆದರೆ ಎರಡನೇ ಅಭ್ಯಾಸ ಪಂದ್ಯ ಅಕ್ಟೋಬರ್ 20ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ದೊರೆತಿದೆ.

ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

ಅಭ್ಯಾಸ ಪಂದ್ಯದಲ್ಲಿ ಎದುರಾಳಿ ಯಾರು?

ಅಭ್ಯಾಸ ಪಂದ್ಯದಲ್ಲಿ ಎದುರಾಳಿ ಯಾರು?

ಈ ಅಭ್ಯಾಸ ಪಂದ್ಯಗಳಲ್ಲಿ ಭಾರತಕ್ಕೆ ಯಾವ ತಂಡಗಳು ಎದುರಾಗಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸವಾಲೊಡ್ಡಲಿದೆ. ಈ ಮೂಲಕ ಬೃಹತ್ ಟೂರ್ನಿಗೆ ಭಾರತ ಕೊನೆಯ ಕಂತದ ಸಿದ್ಧತೆಯನ್ನು ನಡೆಸಲಿದೆ.

ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್

ಇನ್‌ಸೈಡ್ ಸ್ಪೋರ್ಟ್ ಈ ವಿಚಾರವಾಗಿ ಬಿಸಿಸಿಐ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. "ಹೌದು, ನಾವು ವಿಶ್ವಕಪ್‌ಗೆ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ. ಸದ್ಯಕ್ಕೆ ಎದುರಾಳಿ ತಂಡಗಳನ್ನು ನಾವು ಖಚಿತಪಡಿಸಲಿ ಸಾಧ್ಯವಿಲ್ಲ. ಆದರೆ ಅಕ್ಟೋಬರ್ 18 ಹಾಗೂ 20ರಂದು ಈ ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಈ ಪಂದ್ಯಗಳ ದಿನಾಂಕಗಳನ್ನು ನಾವು ಶೀಘ್ರದಲ್ಲಿಯೇ ಖಚಿತಪಡಿಸುತ್ತೇವೆ" ಎಂದು ಬಿಸಿಸಿಐ ಅಧಿಕಾರಿ ವಿವರಿಸಿದ್ದಾರೆ. ಬಿಸಿಸಿಐ ಅಧಿಕಾರಿ ಈ ಸಂದರ್ಭದಲ್ಲಿ ಭಾರತಕ್ಕೆ ಎದುರಾಳಿಯಾಗಲಿರುವ ತಂಡಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಮೂಲಗಳು ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿಯಾಗಿರಲಿದೆ ಎಂದಿದ್ದಾರೆ. ಹೀಗಾಗಿ ಇಯಾನ್ ಮೋರ್ಗನ್ ಬಳಗ ಭಾರತಕ್ಕೆ ಅಕ್ಟೋಬರ್ 20 ರಂದು ಹಾಗೂ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಅಕ್ಟೋಬರ್ 20ರಂದು ಮುಖಾಮುಖಿಯಾಗಲಿದೆ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಸಮಯ, ಸ್ಥಳ ಹಾಗೂ ನೇರಪ್ರಸಾರದ ಮಾಹಿತಿ

ಸಮಯ, ಸ್ಥಳ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ. ಇದು ಅಕ್ಟೋಬರ್ 18ರಂದು ಓ ಪಂದ್ಯ ನಡೆಯಲಿದ್ದು ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಎರಡನೇ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದ್ದು ಇದು ಕೂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಇದು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಈ ಎರಡು ಪಂದ್ಯಗಳು ಕೂಡ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದೆ.

ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?

ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದೆ. ಸೂಪರ್ 12 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದ್ದು ಅಕ್ಟೋಬರ್ 24ರಂದು ಈ ಮುಖಾಮುಖಿ ನಡೆಯಲಿದೆ. 'ಬಿ' ಗುಂಪಿನಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಇದ್ದು ಅರ್ಹತಾ ಸುತ್ತಿನಿಂದ ಎತಡು ತಂಡಗಳು ಸೇರ್ಪಡೆಯಾಗಲಿದೆ.

ಪ್ರಧಾನಿ ಮಾತಿಗೂ ಬೆಲೆ ಕೊಡದ ನ್ಯೂಜಿಲೆಂಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಜಮಾಮ್ ಆಗ್ರಹ

ಭಾರತ ವಿಶ್ವಕಪ್ ತಂಡ

ಭಾರತ ವಿಶ್ವಕಪ್ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್

Story first published: Sunday, September 19, 2021, 13:31 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X