ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಐದನೇ ಕ್ರಮಾಂಕಕ್ಕೆ ಪಂತ್, ಇಶಾನ್ ಮಧ್ಯೆ ಯಾರು ಬೆಸ್ಟ್ ಎಂದ ದಿನೇಶ್ ಕಾರ್ತಿಕ್

T20 world cup: Dinesh Karthik believes Rishabh Pant is a better batsman than Ishan Kishan at No. 5

ಟಿ20 ವಿಶ್ವಕಪ್‌ನ ಆರಂಭಕ್ಕೆ ಮುನ್ನ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಎರಡು ಅಭ್ಯಾಸ ಪಂದ್ಯದಲ್ಲಿಯೂ ಭಾರತದ ಆಟಗಾರರು ನೀಡಿದ ಪ್ರದರ್ಶನ ಸೂಪರ್ 12 ಹಂತದಲ್ಲಿ ಆಡುವ ಮುನ್ನ ಭಾರತೀಯ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಈ ಮೂಲಕ ಪಾಕಿಸ್ತಾನ ವಿರುದ್ಧದ ರೋಚಕ ಸೆಣೆಸಾಟಕ್ಕೆ ಭಾರತ ತಂಡ ಸಜ್ಜಾಗಿದೆ. ಆದರೆ ಟೀಮ್ ಇಂಡಿಯಾದ ಕೆಲ ಸ್ಥಾನಕ್ಕೆ ಒಬ್ಬರಿಗಿಂತ ಹೆಚ್ಚು ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಆಟಗಾರರು ಇರುವ ಅದ್ಭುತ ಫಾರ್ಮ್‌ನ ಕಾರಣದಿಂದಾಗಿ ಯಾರನ್ನು ಆಡುವ ಬಳಗದಿಂದ ಹೊರಗಿಡುವುದು ಕೂಡ ಕಷ್ಟವಾಗಲಿದೆ. ಇದೇ ರೀತಿಯ ಸಂಕಷ್ಟಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಅನ್ನು ಸಿಲುಕಿಸಿದ್ದು ಇಶಾನ್ ಕಿಶನ್ ಹಾಗೂ ರಿಷಭ್ ಪಂತ್.

ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ

ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಪರವಾಗಿ ಎಲ್ಲಾ ಮಾದರಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರ. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಂತ್‌ಗೆ ಮತ್ತೋರ್ವ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಇಶಾನ್ ಕಿಶನ್ ನೀಡಿದ ಪ್ರದರ್ಶನ ಆಡುವ ಬಳಗದಲ್ಲಿ ಇರಲು ಅತ್ಯಂತ ಅರ್ಹ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಪಂತ್ ಬದಲಿಗೆ ಇಶಾನ್ ಕಿಶನ್ ಆಡಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಧ್ಯಮ ಕ್ರಮಾಂಕಕ್ಕೆ ಇಶಾನ್ ಸೂಕ್ತವಲ್ಲ: ಆದರೆ ಈ ಅಭಿಪ್ರಾಯಕ್ಕೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಸಮ್ಮತಿ ಸೂಚಿಸಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಇಶಾನ್ ಕಿಶನ್ ಸೂಕ್ತವಾಗಲಾರರು. ಐದನೇ ಕ್ರಮಾಂಕದಲ್ಲಿ ಇಶಾನ್ ಕಿಶನ್‌ಗಿಂತ ರಿಷಭ್ ಪಂತ್ ಅತ್ಯಂತ ಸೂಕ್ತ ಆಟಗಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ದಿನೇಶ್ ಕಾರ್ತಿಕ್. ಆದರೆ ಇಶಾನ್ ಕಿಶನ್ ಆರಂಭಿಕನಾಗಿ ಅತ್ಯುತ್ತಮ ಕೊಡುಗೆಯನ್ನು ತಂಡಕ್ಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಇದ್ದರೆ ಆಗ ಅದನ್ನು ಇಶಾನ್ ಕಿಶನ್‌ಗೆ ಖಂಡಿತವಾಗಿಯೂ ನೀಡಬಹುದು ಎಂಬ ಅಭಿಪ್ರಾಯಟ್ಟಿದ್ದಾರೆ ಕಾರ್ತಿಕ್.

ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ಆರಂಭಿಕನಾಗಿಯೇ ಕಣಕ್ಕಿಳಿಯಬೇಕು: "ಇಶಾನ್ ಕಿಶನ್ ಆಡುವುದಾದರೆ ಆತ ಆರಂಭಿಕನಾಗಿಯೇ ಕಣಕ್ಕಿಳಿಯಬೇಕು. ಈ ಬ್ಯಾಟಿಂಗ್ ವಿಭಾಗದಲ್ಲಿ ಆತನಿಗೆ ಬೇರೆ ಕ್ರಮಾಂಕ ಸೂಕ್ರವಾಗಲಾರದು. ಆತ ಮುಂಬೈ ಇಂಡಿಯನ್ಸ್ ತಂಡದಲ್ಲಿಯೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರಣದಿಂದಾಗಿಯೇ ತಂಡದಿಂದ ಹೊರಗುಳಿಯಬೇಕಾಯಿತು. ಆತ ಆರಂಭಿಕನಾಗಿ ಸಲೀಸಾಗಿ ಹಾಗೂ ಅದ್ಭುತವಾಗಿ ಆಡುವಷ್ಟು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾನೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸ್ಪಷ್ಟ ಮೇಲುಗೈ: ಇನ್ನು ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಅದ್ಭುತವಾದ ಪ್ರದರ್ಶನ ನೀಡಲಿದೆ ಎಂದು ನನಗೆ ಖಾತ್ರಿಯಿದೆ. ಭಾರತ ತುಂಬಾ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ. ಅಲ್ಲದೆ ಯುಎಇನಲ್ಲಿ ಸುದೀರ್ಘ ಕಾಲದಿಂದ ಕ್ರಿಕೆಟ್ ಆಡುತ್ತಿದೆ. ಭಾರತ ಸಂಪೂರ್ಣ ಮೇಲುಗೈ ಹೊಂದಿದ್ದು ತುಂಬಾ ಅದ್ಭುತವಾದ ತಂಡವನ್ನು ಹೊಂದಿದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಪಂದ್ಯವನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳುತ್ತಾರೆ. ಇಲ್ಲದಿದ್ದರೂ ಭಾರತವೇ ಗೆಲುವು ಸಾಧಿಸಲಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!

ಸತತ ಗೆಲುವಿನ ದಾಖಲೆ: ಭಾರತ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ 5 ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿದೆ. ಇದರಲ್ಲಿ ಐದು ಬಾರಿಯೂ ಭಾರತ ಗೆಲುವು ಸಾಧಿಸಿದ್ದು ಅಜೇಯ ದಾಖಲೆಯನ್ನು ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಪಾಕಿಸ್ತಾನ ತಂಡದ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.

ಭಾರತ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ; ಮಾರ್ಗದರ್ಶಕ: ಎಂಎಸ್ ಧೋನಿ

ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್

ಪಾಕಿಸ್ತಾನ ಸ್ಕ್ವಾಡ್ ಹೀಗಿದೆ : ಬಾಬರ್ ಅಜಂ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಶೋಯೆಬ್ ಮಲಿಕ್

ಪಾಕ್ ಗೆದ್ದ ತಕ್ಷಣ ವಿರಾಟ್ ಮಾಡಿದ ಕೆಲಸಕ್ಕೆ ಭೇಷ್ ಅನ್ಲೇಬೇಕು | Oneindia Kannada

Story first published: Sunday, October 24, 2021, 16:27 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X