ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಭಾರತದ ಈ ಆಟಗಾರನಿಗೆ ಆಡುವ ಅವಕಾಶ ನೀಡಬೇಕು ಎಂದ ವೆಟ್ಟೋರಿ

T20 World Cup: Former cricketer Daniel Vettori said R Ashwin to excel in Australian conditions

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಬಹುತೇಕ ತಂಡಗಳು ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳನ್ನು ಘೋಷಣೆ ಮಾಡಿದೆ. ಭಾರತದ ಸ್ಕ್ವಾಡ್ ಕೂಡ ಪ್ರಕಟಿಸಲಾಗಿದ್ದು ಏಷ್ಯಾ ಕಪ್‌ನಲ್ಲಿ ಕಣಕ್ಕಿಳಿದಿದ್ದ ಬಹುತೇಕ ಆಟಗಾರರು ವಿಶ್ವಕಪ್‌ಗೂ ಆಯ್ಕೆಯಾಗಿದ್ದು ಸಣ್ಣ ಬದಲಾವಣೆಯಾಗಿದೆ. ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಬಲ ಹೆಚ್ಚಿಸಿದೆ.

ಇನ್ನು ಈ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಭಾರತ ತಂಡದ ಓರ್ವ ಆಟಗಾರನ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಭಾರತದ ಓರ್ವ ಆಟಗಾರನಿಗೆ ಅವಕಾಶ ನೀಡಬೇಕು ಎಂದಿರುವ ಅವರು ಆ ಆಟಗಾರನಿಗೆ ಆಸಿಸ್ ನೆಲದಲ್ಲಿ ಹೇಗೆ ಪ್ರದರ್ಶನ ನೀಡಬೇಕು ಎಂಬುದು ತಿಳಿದಿದೆ ಎಂದಿದ್ದಾರೆ. ವೆಟ್ಟೋರಿ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್.

ನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶ

ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವ ನೆರವಾಗಲಿದೆ

ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವ ನೆರವಾಗಲಿದೆ

ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಬಾರಿ ಆಡಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಬೌಲಿಂಗ್‌ನಲ್ಲಿ ಭಾರತಕ್ಕೆ ಇದು ಅದ್ಭುತ ಲಾಭವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ವೆಟ್ಟೋರಿ. "ಆರ್ ಅಶ್ವಿನ್ ಟೆಸ್ಟ್‌ ಮಾದರಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿರುವುದು ನಮಗೆಲ್ಲರಿಗೂ ತಿಳಿದಿದೆ. ಅದ್ಭುತ ಸಂಗತಿಯೆಂದರೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಆತ್ಮವಿಶ್ವಾಸದಲ್ಲಿದ್ದಾರೆ. ತಮ್ಮ ಪ್ರದರ್ಶನದ ಕಾರಣದಿಂದಾಗಿ ಸಹಜವಾಗಿಯೇ ಅವರು ಭಾರತದ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಲ್ಲಾ ಪರಿಸ್ಥಿಗಳಲ್ಲಿ ಹೊಂದಿಕೊಂಡು ಅಗತ್ಯಕ್ಕೆ ತಕ್ಕನಾದ ಪ್ರದರ್ಶನ ನೀಡುವ ಸಾಮರ್ಥ್ಯ ಅಶ್ವಿನ್ ಅವರಲ್ಲಿದೆ. ಅವರನ್ನು ಆಡುವ ಬಳಗದಲ್ಲಿ ಆಯ್ಕೆ ಮಾಡಿದರೆ ಯಾವ ರೀತಿ ಪ್ರದರ್ಶನ ನೀಡಬೇಕು ಎಂಬುದು ಅವರಿಗೆ ತಿಳಿದಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಡೇನಿಯಲ್ ವೆಟ್ಟೋರಿ.

ಸ್ಪಿನ್ನರ್‌ಗಳ ದೊಡ್ಡ ಪಡೆಯೇ ಇದೆ

ಸ್ಪಿನ್ನರ್‌ಗಳ ದೊಡ್ಡ ಪಡೆಯೇ ಇದೆ

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ವೆಟ್ಟೋರಿ "ಭಾರತವು ಅನೇಕ ಸ್ಪಿನ್ ಬೌಲರ್‌ಗಳನ್ನು ಹೊಂದಿದೆ, ಆಯ್ಕೆ ಮಾಡಲು ಬಹಳಷ್ಟು ಅವಕಾಶಗಳು ಇದೆ. ಹೆಚ್ಚಿನ ಸ್ಪಿನ್ನರ್‌ಗಳು ಆಲ್‌ರೌಂಡರ್‌ಗಳಾಗಿರುವುದು ಅವರನ್ನು ಪ್ರತ್ಯೇಕಿಸುತ್ತದೆ ಮತ್ತು ಇದು ತಂಡಕ್ಕೆ ಉತ್ತಮ ಸಮತೋಲನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ." ಎಂದಿದ್ದಾರೆ. ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್ ಸ್ಪಿನ್ನರ್‌ಗಳಾಗಿ ಸ್ಕ್ವಾಡ್‌ನಲ್ಲಿದ್ದಾರೆ. ಅಲ್ಲದೆ ದೀಪಕ್ ಹೂಡಾ ಕೂಡ ಅರೆಕಾಲಿಕ ಸ್ಪಿನ್ ಬೌಲರ್ ಆಗಿ ಕಣಕ್ಕಿಳಿಯಲಿದ್ದಾರೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Thursday, September 15, 2022, 22:17 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X