ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಲು ಭಾರತದ ಆಡುವ ಬಳಗವನ್ನು ಹೆಸರಿಸಿದ ಗಂಭೀರ್

T20 world cup: Gautam Gambhir selects team India’s best playing XI for match against Pakistan

ಈ ಬಾರಿ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಎದುರು ನೋಡುತ್ತಿರುವ ಪಂದ್ಯವೆಂದರೆ ಅದು ಭಾರತ ಹಾಗೂ ಪಾಕಿಸ್ತಾನ ಮ್ಯಾಚ್. ಕ್ರಿಕೆಟ್ ಲೋಕದಲ್ಲಿ ಬದ್ಧ ಎದುರಾಳಿಗಳಾಗಿರುವ ಈ ಎರಡು ತಂಡಗಳ ನಡುವಿನ ಹಣಾಹಣಿ ಯಾವತ್ತಿಗೂ ರೋಮಾಂಚನಕಾರಿ. ಅದರಲ್ಲೂ ನಾನಾ ಕಾರಣಗಳಿಂದಾಗಿ ಈ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಸ್ಥಗಿತಗೊಂಡು ದಶಕಗಳೆ ಕಳೆದಿದ್ದು ಸದ್ಯ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧೆಗೆ ಇಳಿಯುತ್ತಿರುವುದು ಎರಡು ತಂಡಗಳ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಇನ್ನು ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ನಿರಂತರವಾಗಿ ಮೇಲುಗೈ ಸಾಧಿಸುತ್ತಲೇ ಬಂದಿದೆ. ಮಹತ್ವದ ಮೇದಿಕೆಯಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಒಂದೇ ಒಂದು ಬಾರಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಎರಡು ತಂಡಗಳು ಮುಖಾಮುಖಿಯಾಗುತ್ತಿರುವ ಕಾರಣ ಈ ಬಾರಿಯೂ ಭಾರತ ಗೆಲುವು ಸಾಧಿಸಿವುದನ್ನು ನೋಡಲು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಈ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಕಣಕ್ಕಿಳಿಯುತ್ತಿರುವುದರಿಮದಾಗಿ ಭಾರತದ ಆಡುವ ಬಳಗದ ಬಗ್ಗೆಯೂ ಅಭಿಮಾನಿಗಳಿಗೆ ಕುತೂಹಲ ಮೂಡಿದೆ.

ಭಾರತ ತಂಡವನ್ನು ಹೆಸರಿಸಿದ ಗಂಭೀರ್

ಭಾರತ ತಂಡವನ್ನು ಹೆಸರಿಸಿದ ಗಂಭೀರ್

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ದುಬೈನ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಯಾವ ರೀತಿಯ ಆಡುವ ಬಳಗದೊಂದಿಗೆ ಕಣಕ್ಕಿಳಿಯಬೇಕು ಎಂಬುದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರವನ್ನು ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಬಲಿಷ್ಠ ಆಡುವ ಬಳಗ ಹೇಗಿರಬೇಕು ಎಂದು ಗಂಭೀರ್ ಹೆಸರಿಸಿದ್ದಾರೆ.

ಗಂಭೀರ್ ಹೆಸರಿಸಿದ ತಂಡ

ಗಂಭೀರ್ ಹೆಸರಿಸಿದ ತಂಡ

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರಿಸಿದ ಭಾರತೀಯ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿಯ ಬದಲಾವಣೆಗಳು ಇಲ್ಲ. ಆರಂಭಿಕರಾಗಿ ಭಾರತದ ಖಾಯಂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್‌ ಅವರನ್ನು ಗಂಭೀರ್ ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನು ಸೂಚಿಸಿದರೆ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಐದನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಸೂಚಿಸಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.

ಗಂಭೀರ್ ತಂಡದಲ್ಲಿ ಅಶ್ವಿನ್‌ಗಿಲ್ಲ ಸ್ಥಾನ

ಗಂಭೀರ್ ತಂಡದಲ್ಲಿ ಅಶ್ವಿನ್‌ಗಿಲ್ಲ ಸ್ಥಾನ

ಕುತೂಹಲಕಾರಿ ಸಂಗತಿಯೆಂದರೆ ಗೌತಮ್ ಗಂಭೀರ್ ಹೆಸರಿಸಿದ ಈ ತಂಡದಲ್ಲಿ ಅನುಭವು ಆರ್ ಅಶ್ವಿನ್‌ಗೆ ಸ್ಥಾನವನ್ನು ನೀಡಿಲ್ಲ. ಇವರ ಬದಲಿಗೆ ವರುಣ್ ಚಕ್ರವರ್ತಿಯನ್ನು ಸ್ಪಿನ್ನರ್ ಆಗಿ ಹೆಸರಿಸಿದ್ದಾರೆ. ರವೀಂದ್ರ ಜಡೇಜಾರನ್ನು ಕೂಡ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಹೆಸರಿಸಲಾಗಿದೆ. ಇನ್ನು ಈ ಆಡುವ ಬಳಗದಲ್ಲಿ ಮೂವರು ವೇಗಿಗಳನ್ನು ಸೇರಿಸಿಕೊಂಡಿದ್ದು ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬೂಮ್ರಾ ವೇಗದ ಬೌಲಿಂಗ್ ಜವಾಬ್ಧಾರಿ ನೀಡಲಾಗಿದೆ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada
ಗಂಭೀರ್ ಹೆಸರಿಸಿದ ಸಂಪೂರ್ಣ ತಂಡ ಹೀಗಿದೆ

ಗಂಭೀರ್ ಹೆಸರಿಸಿದ ಸಂಪೂರ್ಣ ತಂಡ ಹೀಗಿದೆ

ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

Story first published: Wednesday, September 15, 2021, 15:15 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X