ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಂದೂಡಲು ತಯಾರಿ

T20 World Cup in Australia all set to be postponed

ಸಿಡ್ನಿ, ಮೇ 22: ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಸಲು ಉದ್ದೇಶಿಸಲಾಗಿದ್ದ 2020ರ ಟಿ20 ವಿಶ್ವ ಟೂರ್ನಿ ರದ್ದುಗೊಳಿಸಲು ಎಲ್ಲಾ ಸಿದ್ಧತೆಗಳಾಗಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್-ನವೆಂಬರ್‌ನಲ್ಲಿ ಟೂರ್ನಿ ನಡೆಯುತ್ತಿಲ್ಲ. ಆದರೆ ಈ ಬಗ್ಗೆ ಮುಂದಿನ ವಾರ ಔಪಚಾರಿಕ, ಅಧಿಕೃತ ಘೋಷಣೆ ಬರಲಿದೆ ಎಂದು ತಿಳಿದುಬಂದಿದೆ.

ಗೊತ್ತಿರುವುದನ್ನೇ ಮಾತನಾಡಬೇಡ: ಬಾಬರ್ ವಿರುದ್ಧ ಗುಡುಗಿದ ಅಖ್ತರ್, ಲತೀಫ್ಗೊತ್ತಿರುವುದನ್ನೇ ಮಾತನಾಡಬೇಡ: ಬಾಬರ್ ವಿರುದ್ಧ ಗುಡುಗಿದ ಅಖ್ತರ್, ಲತೀಫ್

ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿ ಮುಂದೂಡಲು ಸಿದ್ಧತೆ ನಡೆಯುತ್ತಿದೆಯಾದರೂ, ಟೂರ್ನಿಗೆ ಬದಲಿ ದಿನಾಂಕವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಇನ್ನಷ್ಟೇ ನಿರ್ಧರಿಸಬೇಕಿದೆ. ಪ್ರತಿಷ್ಠಿತ ಟೂರ್ನಿ ನಡೆಸಲು ವೇಳಾಪಟ್ಟಿಯನ್ನು ಐಸಿಸಿ, ಸಿಎ ಚರ್ಚಿಸಿ ನಿರ್ಧರಿಸಲಿದೆ ಎನ್ನಲಾಗಿದೆ.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಸದ್ಯ ಈ ಕೆಳಗಿನ ಸಂಗತಿಗಳು ಚರ್ಚಿಸಬೇಕಾಗಿದೆ
A. ಮುಂದಿನ ವರ್ಷ ಫೆಬ್ರಬರಿ ಮತ್ತು ಮಾರ್ಚ್‌ನಲ್ಲಿ ಟಿ20 ವಿಶ್ವಕಪ್‌ ಅನ್ನು ನಿಗದಿಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತೊಂದರೆಯೇನಿಲ್ಲ, ಆದರೆ ಒಂದು ವೇಳೆ ಏಪ್ರಿಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದಾದರೆ ಟಿ20 ವಿಶ್ವಕಪ್‌ ಟೂರ್ನಿ ಕಳೆಗುಂದಲಿದೆ. ಈ ವಿಚಾರವನ್ನು ಪರಿಗಣಿಸಿ, ಸ್ಟಾರ್ ಸ್ಪೋರ್ಟ್ಸ್‌ನಂತ ಪ್ರಸಾರಕ ಕೂಡ ಇದಕ್ಕೆ ಒಪ್ಪಿಕೊಳ್ಳುವುದು ಕಷ್ಟವೆನಿಸಿದೆ.
B. 2022ರ ಆವೃತ್ತಿಗೆ ಬದಲಾಗಿ 2021ಕ್ಕೆ ಟಿ20 ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಒಪ್ಪಬಹುದು. ಆದರೂ ಈ ಉಪಾಯ ಸರಿಯಿಲ್ಲ. ಚರ್ಚಿಸಿ ನಿರ್ಧರಿಸಬೇಕಾಗುತ್ತದೆ.
C. ಎಲ್ಲಾ ಆಟಗಾರರು ಲಭ್ಯರಿದ್ದರೆ, ಐಸಿಸಿ ಬೇರೆ ಬೇರೆ ಟೂರ್ನಿಗಳ ವೇಳಾಪಟ್ಟಿ ಅಡ್ಡಿಪಡಿಸದಿದ್ದರೆ, ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ 2022ರಲ್ಲಿ ಟಿ20 ಟೂರ್ನಿ ನಡೆಸಲು ಅವಕಾಶವಿದೆ. ಆದರೆ ಇದಕ್ಕೆ ಸಂದರ್ಭಗಳು ಕೂಡಿಬರಬೇಕು.

Story first published: Friday, May 22, 2020, 14:49 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X