ಕೊಹ್ಲಿಗಿಂತ ಭಾರತದ ಈ ಆಟಗಾರನೇ ಪಾಕ್ ಜನರಿಗೆ ಹೆಚ್ಚು ಇಷ್ಟ: ಅಖ್ತರ್ ಬಾಯ್ಬಿಟ್ಟ ಕುತೂಹಲಕಾರಿ ಸಂಗತಿ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ಸಮರದ ಹಿನ್ನೆಲೆಯಲ್ಲಿ ಇತ್ತಂಡಗಳ ಆಟಗಾರರು ಹಾಗೂ ಅಭಿಮಾನಿಗಳು ಮಾತ್ರವೇ ಕುತೂಹಲದಿಂದ ಈ ಪಂದ್ಯವನ್ನು ಎದುರು ನೋಡುತ್ತಿಲ್ಲ. ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ವಿಶ್ಲೇಷಕರು ಕೂಡ ಈ ಪಂದ್ಯದ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಈ ಎರಡು ಬದ್ಧ ವೈರಿಗಳ ಕದನ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕುತೂಹಲಕಾರಿ ಸಂಗತಿಯೊಂದನ್ನು ವಿವರಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಹೆಚ್ಚಾಗಿ ಇಷ್ಟ ಪಡುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯಾರು ಎಂಬುದನ್ನು ಶೋಯೆಬ್ ಅಖ್ತರ್ ಹೇಳಿದ್ದಾರೆ. ವಿರಾಟ್ ಕೊಹ್ಲಿಗಿಂತಲೂ ಹೆಚ್ಚಾಗಿ ಈ ಆಟಗಾರನನ್ನು ಪಾಕ್ ಕ್ರಿಕೆಟ್ ಅಭಿಮಾನಿಗಳು ಇಷ್ಟ ಪಡುತ್ತಿದ್ದು ಆತನನ್ನು ಭಾರತದ ಇನ್ಜಮಾಮ್ ಉಲ್ ಹಕ್ ಎಂದು ಬಣ್ಣಿಸುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಕೂಡ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?

ಹಾಗಾದರೆ ಶೋಯೆಬ್ ಅಖ್ತರ್ ಹೇಳಿದಂತೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಇಷ್ಟ ಪಡುವ ಭಾರತದ ಆ ಆಟಗಾರ ಯಾರು? ಮುಂದೆ ಓದಿ..

ಹಿಟ್‌ಮ್ಯಾನ್ ಕಂಡರೆ ಪಾಕ್ ಅಭಿಮಾನಿಗಳಿಗೆ ಪ್ರೀತಿ

ಹಿಟ್‌ಮ್ಯಾನ್ ಕಂಡರೆ ಪಾಕ್ ಅಭಿಮಾನಿಗಳಿಗೆ ಪ್ರೀತಿ

ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಇಷ್ಟಪಡುವ ಭಾರತದ ಆಟಗಾರ ಬೇರೆ ಯಾರು ಅಲ್ಲ. ಅದು ರೋಹಿತ್ ಶರ್ಮಾ ಎಂಬುದನ್ನು ಶೋಯೆಬ್ ಅಖ್ತರ್ ವಿವರಿಸಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಗಿಂತಲೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ ಎಂಬ ಸಂಗತಿಯನ್ನು ಶೋಯೆಬ್ ಅಖ್ತರ್ ಬಿಚ್ಚಿದ್ದಾರೆ.

"ಭಾರತದ ಇನ್ಜಮಾಮ್ ರೋಹಿತ್"

ಪಾಕಿಸ್ತಾನ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಇನ್ಜಮಾಮ್ ಉಲ್ ಹಕ್ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಪರ ಹೆಚ್ಚಿನ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಇನ್ಜಮಾಮ್ ಉಲ್ ಹಕ್ ಅವರಿಗೆ ರೋಹಿತ್ ಶರ್ಮಾ ಅವರನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಹೋಲಿಕೆ ಮಾಡುತ್ತಾರೆ ಎಂದು ಶೋಯೆಬ್ ಅಖ್ತರ್ ವಿವರಿಸಿದ್ದಾರೆ. ಇದಕ್ಕೆ ಇಬ್ಬರು ಶ್ರೇಷ್ಠ ಆಟಗಾರರು ಬ್ಯಾಟಿಂಗ್‌ನಲ್ಲಿ ಹೊಂದಿರುವ ಸಣ್ಣ ಉದಾಸೀನತೆಯ ಸ್ಪರ್ಶವೂ ಕಾರಣ ಎಂಬುದು ಶೋಯೆಬ್ ಅಖ್ತರ್ ನೀಡಿರುವ ವಿವರಣೆ.

ಭಾರತ ಬಲಿಷ್ಠವಾಗಿಲ್ಲ ಎಂದು ಯಾರೂ ಹೇಳಲ್ಲ

ಭಾರತ ಬಲಿಷ್ಠವಾಗಿಲ್ಲ ಎಂದು ಯಾರೂ ಹೇಳಲ್ಲ

ಇನ್ನು ಈ ಸಂದರ್ಭದಲ್ಲಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಬಗ್ಗೆ ಹೊಂದಿರುವ ಭಾವನೆಯನ್ನು ಕ್ರಿಕೆಟ್ ಅಭಿಮಾನಿಗಳು ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದಾರೆ. "ಈಗ ಪಾಕಿಸ್ತಾನದ ಯಾವ ಕ್ರಿಕೆಟ್ ಅಭಿಮಾನಿ ಕೂಡ ಭಾರತ ಉತ್ತಮ ತಂಡವನ್ನು ಹೊಂದಿಲ್ಲ ಎಂಬುದನ್ನು ಹೇಳುವುದಿಲ್ಲ. ಅವರು ಬಹಿರಂಗವಾಗಿಯೇ ಪ್ರಶಂಸಿಸುತ್ತಾರೆ. ವಿರಾಟ್ ಕೊಹ್ಲಿಯನ್ನು ಅವರು ಉತ್ತಮ ಆಟಗಾರ ಎಂದು ಪರಿಗಣಿಸುತ್ತಾರೆ. ರೋಹಿತ್ ಶರ್ಮಾ ಅವರನ್ನು ಶ್ರೇಷ್ಠ ಆಟಗಾರ ಎಂದು ಬಣ್ಣಿಸುತ್ತಾರೆ, ರೋಹಿತ್ ಶರ್ಮಾ ಅವರನ್ನು ಭಾರತದ ಇನ್ಜಮಾಮ್ ಉಲ್ ಹಕ್ ಎಂದು ಮೆಚ್ಚಿಕೊಳ್ಳುತ್ತಾರೆ. ಆಸ್ಟ್ರೇಲಿಯಾದಲ್ಲಿ ಆಡಿದ ರೀತಿಗೆ ರಿಷಭ್ ಪಂತ್ ಅವರನ್ನು ಕೂಡ ಮೆಚ್ಚಿಕೊಳ್ಳುತ್ತಾರೆ. ಈಗ ಸೂರ್ಯ ಕುಮಾರ್ ಯಾದವ್ ಅವರನ್ನು ಕೂಡ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಇಷ್ಟಪಡುತ್ತಾರೆ. ಹಾಗಾಗಿ ಪಾಕಿಸ್ಥಾನ ಭಾರತ ತಂಡದ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು ಹೊಂದಿದೆ" ಎಂದು ಶೋಯೆಬ್ ಅಖ್ತರ್ ವಿವರಿಸಿದ್ದಾರೆ.

Virat Kohliಗೆ‌ ಒಂದು ಕಿವಿಮಾತು ಹೇಳಿದ Sunil Gavaskar | Oneindia Kannada
ಭಾರತದ ಅಭಿಮಾನಿಗಳನ್ನು ಹೊಂದಲು ಅದೃಷ್ಟ ಮಾಡಿದ್ದೇನೆ

ಭಾರತದ ಅಭಿಮಾನಿಗಳನ್ನು ಹೊಂದಲು ಅದೃಷ್ಟ ಮಾಡಿದ್ದೇನೆ

ಇನ್ನು ಇದೇ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಭಾರತದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಇಷ್ಟ ಪಡುವವರು ಇದ್ದಾರೆ ಎಂದು ಹೇಳಿದ್ದಾರೆ. ಭಾರತ ಅಭಿಮಾನಿಗಳ ಪ್ರೀತಿಯನ್ನು ಪಡೆಯಲು ತಾನು ಅದೃಷ್ಟ ಮಾಡಿದ್ದೇನೆ ಎಂದು ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಶೋಯೆಬ್ ಅಖ್ತರ್ ಝೀ ನ್ಯೂಸ್ ಜೊತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, October 22, 2021, 16:35 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X