ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಐದು ಅತ್ಯಂತ ಕುತೂಹಲಕಾರಿ ಸಂಗತಿಗಳು

T20 World Cup, India vs Pakistan: 5 interesting statistic from the game

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಅಂತರದಿಂದ ಸೋಲು ಕಾಣುವ ಮೂಲಕ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸತತ ಗೆಲುವಿನ ಸರಪಳಿಗೆ ಬ್ರೇಕ್ ಬಿದ್ದಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ವಿಶ್ವಕಪ್‌ನಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತೀಯ ಆಟಗಾರರಿಂದ ನಿರೀಕ್ಷೆಯ ಪ್ರದರ್ಶನ ಬಾರದಿರುವುದು ಅಭಿಮಾನಿಗಳ ನಿರಾಸೆಯನ್ನು ಹೆಚ್ಚುಗೊಳಿಸಿದೆ.

ಭಾರತದ ವಿರುದ್ಧದ ಈ ಪಂದ್ಯಕ್ಕೆ ಪಾಕಿಸ್ತಾನ ಅದ್ಭುತವಾದ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದು ಅತ್ಯಂತ ಸ್ಪಷ್ಟವಾಗಿದೆ. ಈ ರಣತಂತ್ರಗಳನ್ನು ಆರಂಭದಲ್ಲಿ ಬೌಲಿಂಗ್ ದಾಳಿಯ ಮೂಲಕ ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದ ಪಾಕಿಸ್ತಾನ ನಂತರ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಅದ್ಭುತವಾಗಿ ಯಶಸ್ಸು ಸಾಧಿಸಿತ್ತು. ಈ ಮೂಲಕ ಭಾರತದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಈ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದ 5 ಕುತೂಹಲಕಾರಿ ಸಂಗತಿಗಳು ನಿಮ್ಮ ಮುಂದಿದೆ.

ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳಿಗೂ ಪ್ರಥಮ ಸೋಲು, ಗೆಲುವು

ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳಿಗೂ ಪ್ರಥಮ ಸೋಲು, ಗೆಲುವು

ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳೂ ವಿಶ್ವಕಪ್‌ನ ವೇದಿಕೆಯಲ್ಲಿ 1992ರ ಮಾರ್ಚ್‌ ತಿಂಗಳಿನಲ್ಲಿ ಸಿಡ್ನಿಯಿಂದ ಆರಂಭವಾದ ಭಾರತದ ಗೆಲುವಿನ ದಾಖಲೆ ಭಾನುವಾರದವರೆಗೂ ಮುಂದುವರಿದಿತ್ತು. ಪಾಕಿಸ್ತಾನ ಈ ಅವಧಿಯಲ್ಲಿ ವಿಶ್ವಕಪ್ ವೇದಿಕೆಯಲ್ಲಿ ಕನಿಷ್ಠ ಒಂದು ಪಂದ್ಯವನ್ನು ಕೂಡ ಗೆಲ್ಲಲು ಸಾಧ್ತವಾಗಿರಲಿಲ್ಲ. ಆದರೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ದಾಖಲೆ ಮುರಿದು ಬಿದ್ದಿದೆ. ಪಾಕಿಸ್ತಾನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಮೊದಲ ಗೆಲುವು ಸಾಧಿಸಿದ್ದರೆ ಭಾರತ ಪಾಕಿಸ್ತಾನದ ವಿರುದ್ಧ ಮೊದಲ ಸೋಲು ಅನುಭವಿಸಿದೆ.

ಮೊದಲ ಬಾರಿಗೆ ಪಾಕ್ ವಿರುದ್ಧ ವಿಕೆಟ್ ಕಳೆದುಕೊಂಡ ವಿರಾಟ್ ಕೊಹ್ಲಿ

ಮೊದಲ ಬಾರಿಗೆ ಪಾಕ್ ವಿರುದ್ಧ ವಿಕೆಟ್ ಕಳೆದುಕೊಂಡ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಸೋಲು ಔಟ್ ಆಗಿರಲಿಲ್ಲ. ಈ ಹಿಂದೆ ಆಡಿದ್ದ ಮೂರು ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಔಟಾಗದೆಯೇ ಉಳಿದುಕೊಂಡಿದ್ದರು. 78*, 36*, 55* ಇದು ಈ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದ ಸ್ಕೋರ್. ಭಾನುವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಹಂತದವರೆಗೂ ಹೋರಾಡಿ 57 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪಾಕಿಸ್ತಾನ ವಿರಾಟ್ ಕೊಹ್ಲಿಯ ವಿಕೆಟ್‌ಅನ್ನು ಟಿ20 ವಿಶ್ವಕಪ್‌ನಲ್ಲಿ ಪಡೆದುಕೊಂಡಿದೆ.

ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಜೋಡಿಯ ದಾಖಲೆ

ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಜೋಡಿಯ ದಾಖಲೆ

ಇನ್ನು ಭಾರತದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಕಿಸ್ತಾನದ ಆರಂಬಿಕರಾದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಟಿ20ಐನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ನಾಲ್ಕನೇ ಶತಕದ ಜೊತೆಯಾಟವನ್ನು ನೀಡಿದ್ದಾರೆ. ಈ ಮೂಲಕ ಭಾರತದ ಆರಂಭಿಕ ಜೋಡಿಯಾದ ಶಿಖರ್ ಧವನ್- ರೋಹಿತ್ ಶರ್ಮಾ(52 ಇನ್ನಿಂಗ್ಸ್) ಮಾರ್ಟಿನ್ ಗಪ್ಟಿಲ್- ಕೇನ್ ವಿಲಿಯಮ್ಸನ್(27 ಇನ್ನಿಂಗ್ಸ್) ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಜೋಡಿ ನೀಡಿದ 152 ರನ್‌ಗಳ ಜೊತೆಯಾಟ ಪಾಕಿಸ್ತಾನದ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ 3ನೇ 150+ ರನ್‌ ಜೊತೆಯಾಟವಾಗಿದೆ.

ಯುಎಇನಲ್ಲಿ ಮುಂದುವರಿದ ಪಾಕಿಸ್ತಾನದ ಗೆಲುವಿನ ಓಟ

ಯುಎಇನಲ್ಲಿ ಮುಂದುವರಿದ ಪಾಕಿಸ್ತಾನದ ಗೆಲುವಿನ ಓಟ

ತವರಿನಲ್ಲಿ ಕ್ರಿಕೆಟ್ ಆಡಲು ಬಹುತೇಕ ರಾಷ್ಟ್ರಗಳು ಒಪ್ಪದ ಕಾರಣದಿಂದಾಗಿ ಪಾಕಿಸ್ತಾನ ಯುಎಇನಲ್ಲಿಯೇ ತವರಿನ ಸರಣಿಯನ್ನು ಆಯೋಜಿಸಿಕೊಂಡು ಬಂದಿದೆ. ಹೀಗಾಗಿ ಯುಎಇ ಪಿಚ್‌ನ ಅರಿವು ಪಾಕಿಸ್ತಾನಕ್ಕೆ ಸಂಪೂರ್ಣವಾಗಿದೆ. ಭಾರತದ ವಿರುದ್ಧವೂ ಇದರ ಲಾಭವನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡಿದೆ. ಭಾರತವ ವಿರುದ್ಧದ ಗೆಲುವಿನ ಮೂಲಕ ಪಾಕಿಸ್ತಾನ ಯುಎಇನಲ್ಲಿ ಸತತ 12 ಪಂದ್ಯಗಳಲ್ಲಿ ಗೆಲುವುಸ ಆಧಿಸಿದಂತಾಗಿದೆ. ಅದರಲ್ಲಿ ಏಳು ಗೆಲುವು ಭಾರತದ ವಿರುದ್ಧವೇ ಬಂದಿದೆ. 2015ರ ನವೆಂಬರ್‌ನಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಇಲ್ಲಿ ಸೋಲು ಕಂಡಿತ್ತು.

ಪಾಕ್ ಗೆದ್ದ ತಕ್ಷಣ ವಿರಾಟ್ ಮಾಡಿದ ಕೆಲಸಕ್ಕೆ ಭೇಷ್ ಅನ್ಲೇಬೇಕು | Oneindia Kannada
ರೋಹಿತ್ ಶರ್ಮಾ ಶೂನ್ಯ ಸಾಧನೆ

ರೋಹಿತ್ ಶರ್ಮಾ ಶೂನ್ಯ ಸಾಧನೆ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಮೂಲಕ ರೋಹಿತ್ ಶರ್ಮಾ ಈವರೆಗೆ ನಡೆದ ಎಲ್ಲಾ 7 ಟಿ20 ವಿಶ್ವಕಪ್‌ನಲ್ಲಿಯೂ ಆಡಿದ ಏಕೈಕ ಭಾರತೀಯ ಆಟಗಾರ ಎನಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 3ನೇ ಗೋಲ್ಡನ್ ಡಕ್ ಆಗಿ ವಿಕೆಟ್ ಕಳೆದುಕೊಂಡಿದ್ದಾರೆ.

ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದ ಭಾರತೀಯ ಆಟಗಾರರ ಪೈಕಿ 2ನೇ ಸ್ಥಾನಕ್ಕೇರಿದ್ದಾರೆ. 20 ಬಾರಿ ರೋಹಿತ್ ಶೂನ್ಯ ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾ 21 ಬಾರಿ ಶೂನ್ಯಕ್ಕೆ ಔಟಾಗಿ ಮೊದಲ ಸ್ಥಾನದಲ್ಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅಜಿಂಕ್ಯಾ ರಹಾನೆ, ಯೂಸುಫ್ ಪಠಾಣ್ ಮತ್ತು ದಿನೇಶ್ ಕಾರ್ತಿಕ್ ಅವರೊಂದಿಗೆ ಸ್ಥಾನವನ್ನು ಹಂಚಿಕೊಂಡಿದ್ದರು.

Story first published: Monday, October 25, 2021, 15:46 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X