ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಹವಾಮಾನ ಹೇಗಿದೆ? ಮಳೆ ಅಡ್ಡಿಯಾಗುತ್ತಾ?

T20 world cup, India vs Pakistan, Dubai weather forecast and Pitch report

ಟಿ20 ವಿಶ್ವಕಪ್‌ನ್ಲಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕುತೂಹಲಕಾರಿ ಕದನಕ್ಕೆ ಕೊಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ ವೇದಿಕೆಯಲ್ಲಿ ಸಾಧಿಸಿರುವ ಅಜೇಯ ಸಾಧನೆಯನ್ನು ಮುಂದುವರಿಸಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದರೆ ಪಾಕಿಸ್ತಾನ ಈ ಬಾರಿ ಮುರಿಯಲಿದೆ ಎಂದು ಪಾಕ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ರೋಚಕ ಪಂದ್ಯಕ್ಕೂ ಮುನ್ನ ಭಾರತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ಈ ಎರಡ ಪಂದ್ಯದಲ್ಲಿಯೂ ಭಾರತ ಅಮೋಘ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಎಲ್ಲಾ ಆಟಗಾರರು ಕೂಡ ಉತ್ತಮ ಫಾರ್ಮ್‌ನಲ್ಲಿರುವುದು ಈ ಅಭ್ಯಾಸ ಪಂದ್ಯದಿಂದ ಸಾಬೀತಾಗಿದೆ. ಮತ್ತೊಂದೆಡೆ ಪಾಕಿಸ್ತಾನ ಎರಡು ಅಭ್ಯಾಸ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಪಂದ್ಯದಲ್ಲಿ ಸೋಲು ಕಂಡಿತ್ತು.

ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ

ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯಕ್ಕೆ ವಾತಾವರಣ ಯಾವ ರೀತಿಯಾಗಿ ಪೂರಕವಾಗಿದೆ? ಮಳೆ ಅಡ್ಡಿಯಾಗಲಿದೆಯಾ? ಈ ವರದಿಯಲ್ಲಿ ನೋಡೋಣ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ದುಬೈನಲ್ಲಿರುವ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿಕೊಳ್ಳುತ್ತಿದೆ. ಇನ್ನು ಈ ಪಂದ್ಯ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಈ ಪಂದ್ಯದ ವೀಕ್ಷಕ ವಿವರಣೆ ಲಭ್ಯವಿದೆ. ಇನ್ನು ಹಾಟ್‌ಸ್ಟಾರ್‌ ಚಂದಾದಾರರು ಕೂಡ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ದುಬೈ ಹವಾಮಾನ ವರದಿ

ದುಬೈ ಹವಾಮಾನ ವರದಿ

ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ದಿನವಿಡೀ ಶುಭ್ರ ವಾತಾವರಣದಿಂದ ಕೂಡಿದ್ದು ತಾಪಮಾನ 28-33 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ. ಇನ್ನು ಪಂದ್ಯದ ಆರಂಭದ ಬಳಿಕ ಗಾಳಿಯ ವೇಗದ ಪ್ರಮಾಣ ಕೂಡ ಕಡಿಮೆಯಾಗಲಿದೆ. ಆದರೆ ಪಂದ್ಯದ ಎರಡನೇ ಇನ್ನಿಂಗ್ಸ್‌ನ ಸಂದರ್ಭದಲ್ಲಿ ಇಬ್ಬನಿ ಹೆಚ್ಚಾಗಿರಲಿದ್ದು ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

ಪಾಕಿಸ್ತಾನ ಗೆದ್ದ ನಂತರ ಬಾಬರ್ ಅವರ ತಂದೆಯ ವಿಡಿಯೋ ವೈರಲ್ | Oneindia Kannada
ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಇತ್ತೀಚೆಗೆ ಅಂತ್ಯವಾದ ಐಪಿಎಲ್‌ನ ಆತಿಥ್ಯವನ್ನು ಕೂಡ ವಹಿಸಿಕೊಂಡಿತ್ತು. ಟೂರ್ನಿಯುದ್ದಕ್ಕೂ ಇದು ನಿಧಾನಗತಿಯ ಪಿಚ್ ಎಂಬುದನ್ನು ಸಾಬೀತುಪಡಿಸಿದೆ. ನಿಧಾನಗತಿಯ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸುತ್ತಾರೆ. ಸ್ಪಿನ್ನರ್‌ಗಳ ದಾಳಿಯ ಮುಂದೆ ಬ್ಯಾಟರ್‌ಗಳು ಪರದಾಡುವುದು ಖಚಿತ. ಇನ್ನು ಈ ಹಿಂದಿನ ಪಂದ್ಯ ವೆಸ್ಟ್ ಇಮಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಸ್ಪಿನ್ನರ್‌ಗಳು ಅದ್ಭುತವಾದ ಯಶಸ್ಸು ಸಾಧಿಸಿದ್ದಾರೆ. ಅದರಲ್ಲೂ ಇಂಗ್ಲೆಮಡ್‌ನ ಅನುಭವಿ ಸ್ಪಿನ್ನರ್ ಆದಿಲ್ ರಶೀದ್ ಕೇವಲ 2 ರನ್‌ ನೀಡಿ 4 ವಿಕೆಟ್ ಪಡೆದಿರುವುದು ಗಮನಾರ್ಹ ಸಂಗತಿಯಾಗಿದೆ.

Story first published: Sunday, October 24, 2021, 11:35 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X