ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಆತನ ಸೇರ್ಪಡೆಯೇ ಭಾರತಕ್ಕೆ ಹಿನ್ನಡೆಯಾಯ್ತು; ಕೊಹ್ಲಿಯ ಆಯ್ಕೆಯನ್ನು ಪ್ರಶ್ನಿಸಿದ ಇನ್ಜಮಾಮ್

T20 World Cup: Inzamam ul Haq explain the reason for India defeat against Pakistan

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಕಂಡ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದೆ. ಈ ಪಂದ್ಯದ ಸೋಲಿನ ಬಗ್ಗೆಯೂ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದೆ. ಸೋಲಿಗೆ ಕಾರಣಗಳು ಏನು ಎಂಬ ಬಗ್ಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಮಾಝಿ ಆಟಗಾರರು ಕೂಡ ಭಾರತ ಎಡವಿದ್ದೆಲ್ಲಿ ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಕೂಡ ಪಾಕಿಸ್ತಾನ ತಂಡದ ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದ ಆಯ್ಕೆಯ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಓರ್ವ ಆಟಗಾರನನ್ನು ಸೇರಿಸಿಕೊಂಡಿರುವುದು ಪಾಕ್ ವಿರುದ್ಧ ಭಾರತದ ಹಿನ್ನಡೆಗೆ ಕಾರಣವಾಯಿತು ಎಂದಿದ್ದಾರೆ.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್

ಭಾರತ ಆಡುವ ಬಳಗದ ಆಯ್ಕೆಯಲ್ಲಿ ಎಡವಿತು

ಭಾರತ ಆಡುವ ಬಳಗದ ಆಯ್ಕೆಯಲ್ಲಿ ಎಡವಿತು

ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಭಾರತ ತಂಡದ ಆಯ್ಕೆಯಲ್ಲಿ ಎಡವಿತು ಎಂದು ಇನ್ಜಮಾಮ್ ಉಲ್ ಹಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಾಬರ್ ಅಜಂಗೆ ತನ್ನ ಆಡುವ ಬಳಗದಲ್ಲಿ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿದಿತ್ತು. ಆದರೆ ಭಾರತಕ್ಕೆ ಇಲ್ಲಿ ಎಡವಿತ್ತು ಎಂದು ಇನ್ಜಮಾಮ್ ಉಲ್ ಹಕ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಂದ್ಯದ ಬಗ್ಗೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದು ಹಿನ್ನಡೆ

ಹಾರ್ದಿಕ್ ಪಾಂಡ್ಯಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದು ಹಿನ್ನಡೆ

ಇನ್ನು ಮುಂದುವರಿದು ಮಾತನಾಡಿರುವ ಇನ್ಜಮಾಮ್ ಉಲ್ ಹಕ್ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯಗೆ ಆಡುವ ಬಳಗದಲ್ಲಿ ಸ್ಥಾನವನ್ನು ನೀಡಿದ್ದು ತಂಡಕ್ಕೆ ಹಿನ್ನಡೆಯಾಯ್ತು ಎಂದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 8 ಎಸೆತಗಳನ್ನು ಎದುರಿಸಿ 11 ರನ್‌ಗಳಿಸಿದ್ದರು. ಭಾರತದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಪಾಂಡ್ಯ ಶಾಹೀನ್ ಅಫ್ರಿದಿ ಎಸೆತದಲ್ಲಿ ಪುಲ್ ಶಾಟ್ ಬಾರಿಸಲು ಹೋಡಿ ಭುಜಕ್ಕೆ ಏಟು ಮಾಡಿಕೊಂಡರು. ಅದಾದ ನಂತರ ಸ್ಕ್ಯಾನ್‌ಗೆ ಒಳಗಾದ ಪಾಂಡ್ಯ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ.

ಆರನೇ ಬೌಲರ್‌ನ ಕೊರತೆ ನಾಯಕನಿಗೆ ಕಾಡಿತು

ಆರನೇ ಬೌಲರ್‌ನ ಕೊರತೆ ನಾಯಕನಿಗೆ ಕಾಡಿತು

ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆರನೇ ಬೌಲರ್‌ನ ಕೊರತೆ ನಾಯಕ ವಿರಾಟ್ ಕೊಹ್ಲಿಗೆ ಕಾಡಿತು ಎಂದಿದ್ದಾರೆ ಇನ್ಜಮಾಮ್. ಇದು ವಿರಾಟ್ ಕೊಹ್ಲಿಯನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು. ಆದರೆ ಪಾಕಿಸ್ತಾನದ ನಾಯಕ ಬಾಬರ್ ಅಜಂ ತನಗಿದ್ದ ಬೌಲಿಂಗ್ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಅನುಭವಿ ಮೊಹಮ್ಮದ್ ಹಫಿಸ್ ಅವರನ್ನು ಕೂಡ ಬಳಸಿಕೊಳ್ಳಲು ಬಾಬರ್ ಅಜಂಗೆ ಅವಕಾಶ ದೊರೆಯಿತು ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್. "ಭಾರತ ತಮಡ ಆರನೇ ಬೌಲರ್‌ನೊಂದಿಗೆ ಆಡಿದ್ದರೆ ತಂಡಕ್ಕೆ ಅನುಕೂಲವಾಗುತ್ತಿತ್ತು. ಪಾಕಿಸ್ತಾನ ನಾಯಕ ಬಾಬರ್ ಅಜಂ ಮಹಮ್ಮದ್ ಹಫೀಜ್ ಅವರನ್ನು ಎಷ್ಟು ಉತ್ತಮವಾಗಿ ಬಳಸಿಕೊಂಡರು ಎಂಬುದನ್ನು ಗಮನಿಸಿ. ಪಾಕಿಸ್ತಾನದ ಬಳಿ ಶೋಯೆನ್ ಮಲಿಕ್ ಕೂಡ ಆಯ್ಕೆಯಾಗಿದ್ದರು" ಎಂದು ಇನ್ಜಮಾಮ್ ಹೇಳಿದ್ದಾರೆ.

ಚೆನ್ನಾಗಾಡ್ತಿಲ್ಲ,ಫಿಟ್ನೆಸ್ ಸಮಸ್ಯೆ,ಇಷ್ಟಾದ್ರೂ ಯಾಕ್ ಗುರೂ ಇವ್ನುನ್ ಬಿಡ್ತಾಯಿಲ್ಲ | Oneindia
ಭಾರತದ ವಿರುದ್ಧ ಗೆಲುವಿಗೆ 30 ವರ್ಷ ಕಾದಿದ್ದೇನೆ

ಭಾರತದ ವಿರುದ್ಧ ಗೆಲುವಿಗೆ 30 ವರ್ಷ ಕಾದಿದ್ದೇನೆ

ಇನ್ನು ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿರುವ ಬಗ್ಗೆಯೂ ಇನ್ಜಮಾಮ್ ಹರ್ಷ ವ್ಯಕ್ತಪಡಿಸಿದ್ದಾರೆ. "ನಾನು ಭಾರತದ ವಿರುದ್ಧ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಬೇಕೆಂದು 30 ವರ್ಷಗಳ ಕಾಲ ಕಾದಿದ್ದೇನೆ. ಪಾಕಿಸ್ತಾನ ಭಾರತ ತಂಡದ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿತು. ಪಂದ್ಯದ ಮೊದಲ ಎಸೆತದಿಂದ ಅಂತಿಮ ಎಸೆತದವರೆಗೂ ಪಾಕಿಸ್ತಾನ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. ಎಲ್ಲವೂ ಪಾಕಿಸ್ತಾನದ ಪರವಾಗಿಯೇ ನಡೆದಿತ್ತು. ಶಹೀನ್ ಅಫ್ರಿದಿ, ಶದಬ್ ಖಾನ್, ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಸನ್ ಅಲಿ ರನ್ ನೀಡಿದರೈ ಅವರ ಆಕ್ರಮಣ ಅದ್ಭುತವಾಗಿತ್ತು. ರಿಜ್ವಾನ್ ಹಾಗೂ ಬಾಬರ್ ಅಜೇಯ ಜೊತೆಯಾಟ ಅದ್ಭುತವಾಗಿತ್ತು" ಎಂದು ಇನ್ಜಮಾಮ್ ಉಲ್ ಹಕ್ ಭಾರತದ ವಿರುದ್ಧದ ಗೆಲುವನ್ನು ಪ್ರಶಂಸಿಸಿದ್ದಾರೆ.

Story first published: Tuesday, October 26, 2021, 13:27 [IST]
Other articles published on Oct 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X