ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನ್ ಮುನ್ನಡೆಸುವ ಬಗ್ಗೆ ಮೊಹಮ್ಮದ್ ನಬಿ ಪ್ರತಿಕ್ರಿಯೆ

T20 World Cup: Its a tough job, will try my best, says Mohammad Nabi on leading Afghans

ದುಬೈ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕತ್ವ ಮೊಹಮ್ಮದ್ ನಬಿ ಹೆಗಲ ಮೇಲೇರಿದೆ. ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡವನ್ನು ನಬಿ ಮುನ್ನಡೆಸಲಿದ್ದಾರೆ. ಟಿ20 ವಿಶ್ವಕಪ್‌ಗೆ ನಾಯಕತ್ವದ ಆಫರ್ ಅನ್ನು ಆಲ್ ರೌಂಡರ್ ರಶೀದ್ ಖಾನ್ ನಿರಾಕರಿಸಿರುವ ಕಾರಣ ನಬಿ ನೂತನ ನಾಯಕರಾಗಿ ಆರಿಸಲ್ಪಟ್ಟಿದ್ದಾರೆ.

ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲುವುದು ಹೇಗೆಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ ಮಿಯಾಂದಾದ್ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲುವುದು ಹೇಗೆಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ ಮಿಯಾಂದಾದ್

ಟಿ20 ವಿಶ್ವಕಪ್‌ನ ನಾಯಕರಾಗಿ ಆರಂಭದಲ್ಲಿ ರಶೀದ್ ಖಾನ್ ಹೆಸರಿಸಲ್ಪಟ್ಟಿದ್ದರು. ಆದರೆ ರಶೀದ್ ಖಾನ್ ವಿಶ್ವಕಪ್‌ನಲ್ಲಿ ತಂಡ ಮುನ್ನಡೆಸಲು ನಿರಾಕರಿಸಿದ್ದರು. ನಾನು ತಂಡದಲ್ಲಿ ಸಾಮಾನ್ಯ ಆಟಗಾರನಾಗಿದ್ದುಕೊಂಡು ತಂಡಕ್ಕೆ ಬೆಂಬಲಿಸುತ್ತೇನೆ ಹೊರತು, ನಾಯಕತ್ವದ ಹೊಣೆಗಾರಿಕೆ ಬೇಡ ಎಂದು ನಾಯಕತ್ವದ ಆಫರ್ ನಿರಾಕರಿಸಿದ್ದರು.

ಕ್ಯಾಪ್ಟನ್ಸಿ ಹೊರೆ ಹೊತ್ತುಕೊಳ್ಳಲು ರಶೀದ್ ನಿರಾಕರಿಸಿದ್ದರಿಂದ ಮತ್ತೊಬ್ಬ ಆಲ್ ರೌಂಡರ್, 36ರ ಹರೆಯದ ಮೊಹಮ್ಮದ್ ನಬಿ ಅವರನ್ನು ಅಕ್ಟೋಬರ್‌ 10ರಂದು ನಾಯಕರಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಹೆಸರಿಸಿದೆ. ನಬಿ ಇದೇ ಮೊದಲ ಬಾರಿ ಅಲ್ಲ, ಈ ಮೊದಲು 2013ರಿಂದ 2015ರ ವರೆಗೆ ಅಫ್ಘಾನ್ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಓವರ್‌ಗೆ 20 ರನ್ ಬೇಕು, ಎಂಎಸ್‌ಡಿ-ಎಬಿಡಿಯಲ್ಲಿ ನಿಮ್ಮ ಬೆಂಬಲ ಯಾರಿಗೆ?: ಡು ಪ್ಲೆಸಿಸ್ ಕೊಟ್ಟ ಉತ್ತರವಿದು!ಓವರ್‌ಗೆ 20 ರನ್ ಬೇಕು, ಎಂಎಸ್‌ಡಿ-ಎಬಿಡಿಯಲ್ಲಿ ನಿಮ್ಮ ಬೆಂಬಲ ಯಾರಿಗೆ?: ಡು ಪ್ಲೆಸಿಸ್ ಕೊಟ್ಟ ಉತ್ತರವಿದು!

"ಅಂತಿಮವಾಗಿ ಹೇಳಬೇಕಾದರೆ ನಾಯಕತ್ವ ಕಷ್ಟದ ಕೆಲಸ. ವಿಶ್ವಕಪ್‌ನಲ್ಲಿ ತಂಡ ಮುನ್ನಡೆಸಲು ನಾನು ಅತ್ಯುತ್ತಮ ಪ್ರಯತ್ನ ನೀಡುತ್ತೇನೆ. ಟೂರ್ನಿಯಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ವಿಶ್ವಕಪ್‌ನಲ್ಲಿ ಅಫ್ಘಾನ್‌ ನಾಯಕನಾಗಿ ಆಡಲು ನಾನು ಉತ್ಸುಕನಾಗಿದ್ದೇನೆ," ಎಂದು ನಬಿ ಹೇಳಿದ್ದಾರೆ. ಅಕ್ಟೊಬರ್ 25ರಂದು ಅಫ್ಘಾನಿಸ್ತಾನಕ್ಕೆ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ.

Story first published: Friday, October 15, 2021, 13:33 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X