ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಅನ್ನು ದೂಷಿಸಬೇಡಿ: ಟೀಮ್ ಇಂಡಿಯಾ ಕಳಪೆ ಆಟಕ್ಕೆ ಕಾರಣ ಹೇಳಿದ ಗೌತಮ್ ಗಂಭೀರ್

T20 World Cup: Its wrong to blame the IPL for Indias poor performance said Gautam Gambhir
ರಾಹುಲ್ ಟೀಂ ಇಂಡಿಯಾದ ಪರ್ಮನೆಂಟ್ ಕ್ಯಾಪ್ಟನ್ ಆಗೋದು ಡೌಟ್!!ಯಾಕೆ? | Oneindia Kannada

ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ನೀಡುತ್ತಿರುವ ಕಳಪೆ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮೊದಲ ಎರಡು ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನಿಡುವ ಮೂಲಕ ಎದುರಾಳಿ ವಿರುದ್ಧ ಯಾವ ಹಂತದಲ್ಲಿಯೂ ಪ್ರತಿಸ್ಪರ್ಧೆ ನೀಡಲು ವಿಫಲವಾಗಿತ್ತು. ಅದರ ಪರಿಣಾಮವಾಗಿ ಮೊದಲಿಗೆ ಪಾಕಿಸ್ತಾನದ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋಲು ಕಂಡಿದ್ದರೆ ನಂತರ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ಅಂತರದ ಸೋಲು ಕಂಡಿದೆ. ಈ ಎರಡು ದೊಡ್ಡ ಸೋಲುಗಳ ನಂತರ ಟೀಮ್ ಇಂಡಿಯಾ ಆಟಗಾರರ ಈ ಕಳಪೆ ಪ್ರದರ್ಶನಕ್ಕೆ ಕಾರಣ ಏನು ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಇದರಲ್ಲಿ ಪ್ರಮುಖವಾದದ್ದು ಐಪಿಎಲ್. ಐಪಿಎಲ್‌ಗೆ ನೀಡುತ್ತಿರುವ ಅತಿಯಾದ ಪ್ರಾಮುಖ್ಯತೆಯೇ ವಿಶ್ವಕಪ್‌ನಂತಾ ಈ ವೇದಿಕೆಯಲ್ಲಿ ಆಟಗಾರರ ಕಳಪೆ ಪ್ರದರ್ಶನಕ್ಕೆ ಕಶಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಐಪಿಎಲ್‌ಅನ್ನು ದೂಷಿಸುವುದು ತಪ್ಪು ಎಂದಿದ್ದಾರೆ ಗೌತಮ್ ಗಂಭೀರ್.

ದೊಡ್ಡ ಹೆಸರಿದೆ ಎಂದು ಕೆಟ್ಟ ಆಟವಾಡುವ ಈ ಸ್ಟಾರ್ ಆಟಗಾರರಿಗೆ ಅವಕಾಶ ಕೊಡಬೇಡಿ: ಕಪಿಲ್ ದೇವ್ದೊಡ್ಡ ಹೆಸರಿದೆ ಎಂದು ಕೆಟ್ಟ ಆಟವಾಡುವ ಈ ಸ್ಟಾರ್ ಆಟಗಾರರಿಗೆ ಅವಕಾಶ ಕೊಡಬೇಡಿ: ಕಪಿಲ್ ದೇವ್

ಪಂದ್ಯ ಗೆಲ್ಲುವ ಬಗ್ಗೆ ಚಿಂತಿಸಲಿ: ಟಿ20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಟೀಮ್ ಇಂಡಿಯಾ ನೀಡಿದ ಕಳಪೆ ಪ್ರದರ್ಶನಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ದೂಷಿಸುವುದು ತಪ್ಪಾಗುತ್ತದೆ. ಆಟಗಾರರು ನೆಟ್ ರನ್‌ರೇಟ್ ಬಗ್ಗೆ ಚಿಂತಿಸುವ ಬದಲಿಗೆ ತಂಡ ಗೆಲ್ಲುವ ಬಗ್ಗೆ ಚಿಂತಿಸಬೇಕಿದೆ ಎಂದು ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಗೌತಮ್ ಗಂಭೀರ್ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯವನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.

ಎಲ್ಲದಕ್ಕೂ ಐಪಿಎಲ್ ಹೊಣೆ ಮಾಡುವುದು ಸರಿಯಲ್ಲ: ನೀವು ಐಪಿಎಲ್‌ಅನ್ನು ದೂಷಿಸುವುದು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಏನಾದರೂ ತಪ್ಪುಗಳಾದಾಗ ಆಗ ನೇರವಾಗಿ ಐಪಿಎಲ್‌ಅನ್ನು ದೂಷಿಸಲಾಗುತ್ತದೆ. ಅದು ಬಹಳ ತಪ್ಪು. ಕೆಲ ಬಾರಿ 2-3 ತಂಡಗಳು ನಿಮಗಿಂತ ಉತ್ತಮ ಆಟವನ್ನು ಆಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅದನ್ನು ನೀವು ಮೊದಲೇ ಅರ್ಥ ಮಾಡಿಕೊಂಡರೆ ಅದು ನಿಮಗೇ ಒಳ್ಳೆಯದು" ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ

ಪಂದ್ಯದ ಸೋಲಿಗೆ ಕಾರಣ ಧೈರ್ಯ ಸಾಕಾಗಲಿಲ್ಲ: ನ್ಯೂಜಿಲೆಂಡ್ ವಿರುದ್ಧಧ ಪಂದ್ಯದಲ್ಲಿ ನಮ್ಮ ತಂಡದ ಧೈರ್ಯ ಸಾಕಾಗಲಿಲ್ಲ. ಪಂದ್ಯಕ್ಕೂ ಮುನ್ನವೇ ನಾವು ಗಾಬರಿಯಾಗಿದ್ದೆವು. ಅದಕ್ಕೂ ಐಪಿಎಲ್‌ಗೂ ಏನು ಸಂಬಂಧವಿದೆ. ಇದು 2019ರ ಸೆಮಿಫೈನಲ್ ಪಂದ್ಯದಂತೆಯೇ ಇತ್ತು. ಆಗಲೂ ಕೂಡ ನಾವು ವಿಶ್ವಕಪ್‌ಗೆ ಮುನ್ನ ಐಪಿಎಲ್ ಟೂರ್ನಿ ಮುಗಿಸಿ ಬಂದಿದ್ದೆವು ಎಂದಿದ್ದಾರೆ.

ಅಫ್ಘಾನಿಸ್ತಾನದ ಈ ಇಬ್ಬರು ಭಾರತಕ್ಕೆ ಸೋಲು ತರಬಹುದು ಹುಷಾರ್; ಕೊಹ್ಲಿ ಪಡೆಗೆ ಎಚ್ಚರಿಸಿದ ಮಾಜಿ ಕ್ರಿಕೆಟಿಗ!ಅಫ್ಘಾನಿಸ್ತಾನದ ಈ ಇಬ್ಬರು ಭಾರತಕ್ಕೆ ಸೋಲು ತರಬಹುದು ಹುಷಾರ್; ಕೊಹ್ಲಿ ಪಡೆಗೆ ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಅಫ್ಘಾನಿಸ್ತಾನವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ: "ಅಫ್ಘಾನಿಸ್ತಾನ ತಂಡವನ್ನು ನಾವು ಸುಲಭವಾಗಿ ಪರಿಗಣಿಸುವಂತಿಲ್ಲ. ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಿಗಿಂತ ಅವರ ಬೌಲಿಂಗ್ ಸಾಮರ್ಥ್ಯ ತುಂಬಾ ಉತ್ತಮವಾಗಿದೆ ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಟೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇಂತಾ ಸಂದಿಗ್ಧ ಸಂದರ್ಭದಲ್ಲಿ ಬ್ಯಾಟರ್‌ಗಳು ಮತ್ತಷ್ಟು ಹೆಚ್ಚಿನ ಹುಮ್ಮಸ್ಸಿನಿಂದ ಆಡುತ್ತಾರೆ. ಇದು ಹೆಚ್ಚಿನ ಬಲ ನೀಡುತ್ತದೆ. ನಿಮ್ಮ ಮೊದಲ ಗುರಿ ಸ್ಕೋರ್‌ಬೋರ್ಡ್‌ನಲ್ಲಿ ರನ್ ಹೆಚ್ಚಿಸುವುದಾಗಿರಲಿ. ಮೊದಲಿಗೆ ಗೆಲ್ಲುವತ್ತ ಗಮನಹರಿಸಿ ಆಟ ಒಮ್ಮೆ ನಿಮ್ಮ ಹಿಡಿತಕ್ಕೆ ಬಂದರೆ ಪರಿಸ್ಥಿತಿಗೆ ತಕ್ಕದಾಗಿ ಆಡಲು ಸಾಧ್ಯವಾಗುತ್ತದೆ" ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Wednesday, November 3, 2021, 15:49 [IST]
Other articles published on Nov 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X