ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಆರಂಭಿಕ ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್ ಆಡುವುದು ಅನುಮಾನ ಎಂದ ಕಿವೀಸ್ ಕೋಚ್

T20 world cup: Kane Williamson may miss a few games, said New Zealand coach Gary Stead

ಟಿ20 ವಿಶ್ವಕಪ್‌ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡ ಈ ಬಾರಿಯ ವಿಶ್ವಕಪ್‌ಗೂ ಮುನ್ನ ನೀರಾಸೆ ಅನುಭವಿಸಿದೆ. ಈ ಮಧ್ಯೆ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಿವೀಸ್ ಪಡೆಯ ನಾಯಕ ಕೇನ್ ವಿಲಿಯಮ್ಸನ್ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಈ ವಿಚಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಸ್ಟೀಡ್ ಸ್ಪಷ್ಟಪಡಿಸಿದ್ದಾರೆ. ಕೇನ್ ವಿಲಿಯಮ್ಸನ್ ಮೊಣ ಕೈ ಗಾಯಕ್ಕೆ ತುತ್ತಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ಕೋಚ್.

ಕೇನ್ ವಿಲಿಯಮ್ಸನ್ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿಯೂ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಅದಾದ ನಂತರ ವಿಶ್ವಕಪ್‌ನ ಅಭ್ಯಾಸ ಪಂದ್ಯದಿಂದಲೂ ಹೊರಗುಳಿದಿದ್ದರು. ಇದೀಗ ಮುಂಬರುವ ಸೂಪರ್ 12 ಹಂತದ ಪಂದ್ಯದ ಆರಂಭಿಕ ಒಂದೆರಡು ಪಂದ್ಯಗಳಿಂದ ಕೇನ್ ವಿಲಿಯಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ.

ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್

ತಂಡದ ಮ್ಯಾನೇಜ್‌ಮೆಂಟ್ ಕೇನ್ ವಿಲಿಯಮ್ಸನ್ ಅವರ ಮೊಣಕೈ ಗಾಯದ ಬಗ್ಗೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೋಚ್ ವಿವರಿಸಿದ್ದಾರೆ. ಟಿ20 ವಿಶ್ವಕಪ್‌ನ ಸಂದರ್ಭದಲ್ಲಿ ಒತ್ತಡವಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ತಂಡ ಸಿದ್ಧವಾಗಿದೆ ಎಂದು ಕೂಡ ಕೋಚ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

"ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಿಂದ ಕೇನ್ ವಿಲಿಯಮ್ಸನ್ ಹೊರಗುಳಿದಿರುವುದು ಮುನ್ನೆಚ್ಚರಿಕಾ ಕ್ರಮವಾಗಿದೆ. ಆತನಿಗೆ ಸೂಕ್ತ ರೀತಿಯಲ್ಲಿ ವಿಶ್ರಾಂತಿ ದೊರೆತರೆ ಆತ ಶೀಘ್ರದಲ್ಲಿಯೇ ಸ್ಥಾನ ಪಡೆಯಲಿದ್ದಾರೆ. ಆದರೆ ಆರಂಭಿಕ ಕೆಲ ಪಂದ್ಯಗಳಲ್ಲಿ ಆತ ಕೆಲ ಪಂದ್ಯಗಳಲ್ಲಿ ಆತ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ" ಎಂದಿದ್ದಾರೆ.

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?

ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿಯೂ ಮುನ್ನಡೆಸುವ ಕೇನ್ ವಿಲಿಯಮ್ಸನ್ ಯಶಸ್ವಿ ನಾಯಕನೂ ಹೌದು. ಕಳೆದ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್ ವರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ಕೇನ್ ಬಳಿಕ ಈ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದು ಚಾಂಪಿಯನ್ ಎನಿಸಿಕೊಂಡಿತ್ತು. ಇದೀಗ ಟಿ20 ವಿಶ್ವಕಪ್‌ನಲ್ಲಿಯೂ ಅಂಥಾದ್ಧೇ ಸಾಧನೆ ಮಾಡಲು ನ್ಯೂಜಿಲೆಂಡ್ ತಂಡ ಎದುರು ನೋಡುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿಯೂ ನ್ಯೂಜಿಲೆಂಡ್ ತಂಡಕ್ಕೆ ಪ್ರಧಾನ ಅಸ್ತ್ರವಾಗಿದ್ದಾರೆ ಕೇನ್ ವಿಲಿಯಮ್ಸನ್.

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಕಿವೀಸ್ ಕೋಚ್ ಗ್ಯಾರಿ ಸ್ಟೀಡ್ ಮಾಹಿತಿ ಹಂಚಿಕೊಂಡಿದ್ದಾರೆ. ಯುಎಇ ಹಾಗೂ ಒಮಾನ್‌ನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದಿದ್ದಾರೆ.

ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!

ಸೂಪರ್ 12 ಹಂತದಲ್ಲಿ ನ್ಯೂಜಲೆಂಡ್ ತಂಡ 2ನೇ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಕೂಡ ಇದೆ. ಇನ್ನು ಅರ್ಹತಾ ಸುತ್ತಿನಿಂದ ತೇರ್ಗಡೆಯಾದ ಎರಡು ತಂಡಗಳು ಈ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದೆ. ಸೂಪರ್ 12 ಹಂತದಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯುವ ಸಂಭಾವ್ಯ ತಂಡ ಎನಿಸಿಕೊಂಡಿದೆ ನ್ಯೂಜಿಲೆಂಡ್ ತಂಡ. ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿರುವ ನ್ಯೂಜಿಲೆಂಡ್ ತಂಡ ಅಕ್ಟೋಬರ್ 31ರಂದು ಭಾರತದ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ.

ಕೊಹ್ಲಿ ನಂತರ ಭಾರತ ಟಿ20 ತಂಡದ ನಾಯಕನಾಗಲು ಈತನನ್ನು ಬಿಟ್ಟರೆ ಇನ್ಯಾರಿಗೆ ಸಾಧ್ಯ!: ಬಿಸಿಸಿಐ ಅಧಿಕಾರಿಕೊಹ್ಲಿ ನಂತರ ಭಾರತ ಟಿ20 ತಂಡದ ನಾಯಕನಾಗಲು ಈತನನ್ನು ಬಿಟ್ಟರೆ ಇನ್ಯಾರಿಗೆ ಸಾಧ್ಯ!: ಬಿಸಿಸಿಐ ಅಧಿಕಾರಿ

ನ್ಯೂಜಿಲೆಂಡ್‌ನ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್).
ಮೀಸಲು ಆಟಗಾರ: ಆ್ಯಡಮ್ ಮಿಲ್ನೆ.
ನ್ಯೂಜಿಲೆಂಡ್ ತಂಡದ ವೇಳಾಪಟ್ಟಿ ಹೀಗಿದೆ: 26 ಅಕ್ಟೋಬರ್‌ ಪಾಕಿಸ್ತಾನ, 31 ಅಕ್ಟೋಬರ್‌ vs ಭಾರತ, ನವೆಂಬರ್‌ 3 vs ಬಿ1, ನವೆಂಬರ್‌ 5 vs ಎ2, 7 ನವೆಂಬರ್‌ vs ಅಫ್ಘಾನಿಸ್ತಾನ

Rohit Sharma ನಾಯಕನಾಗಿ Kohliಯನ್ನು ಬಳಸಿಕೊಂಡಿದ್ದು ಹೀಗೆ | Oneindia Kannada

Story first published: Thursday, October 21, 2021, 17:40 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X