ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದ ನಮೀಬಿಯಾ

ಟಿ20 ವಿಶ್ವಕಪ್‌ನಲ್ಲಿ ನಡೆದ 21ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ನಮೀಬಿಯಾ ವಿಜಯ ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದಿದೆ. ಈ ಮೂಲಕ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳಿಗೂ ಮುನ್ನವೇ ಅಂಕಪಟ್ಟಿಯಲ್ಲಿ ಖಾತೆ ತೆರೆದಿದ್ದು ಎರಡು ಅಂಕಗಳನ್ನು ಸಂಪಾದಿಸಿದೆ.

ಇನ್ನು ಈ ಪಂದ್ಯದಲ್ಲಿ ನಮೀಬಿಯಾ ತಂಡ ಟಾಸ್ ಗೆದ್ದು ಮೊದಲಿಗೆ ಸ್ಕಾಟ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅತ್ಯಂತ ಕಳಪೆ ಆರಂಭವನ್ನು ಪಡೆದ ಸ್ಕಾಟ್ಲೆಂಡ್ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯನ್ನು ಎದುರಿಸಿತ್ತು. ತಂಡದ ಮೊತ್ತ 2 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು ಸ್ಕಾಟ್ಲೆಂಡ್. ಈ ಎರಡು ರನ್‌ಗಳು ಕೂಡ ಇತರ ರೂಪದಲ್ಲಿ ಬಂದಿತ್ತು. ಆದರೆ ನಂತರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್ ಹಾಗೂ ಮಿಚೆಲ್ ಲೀಸ್ಕ್ ಎಚ್ಚರಿಕೆಯ ಆಟವಾಡುತ್ತಾ ಉತ್ತಮ ಜೊತೆಯಾಟವನ್ನು ನೀಡಿದರು.

ಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿ

ಮಿಚೆಲ್ ಲೀಸ್ಕ್ ಸ್ಕಾಟ್ಲೆಂಡ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದರು. 27 ಎಸೆತಗಳ್ನನು ಎದುರಿಸಿದ ಅವರು 44 ರನ್‌ಗಳನ್ನು ಸಿಡಿಸಿದರು. ಈ ಮೂಲಕ ತಂಡದ ಮೊತ್ತ ನೂರರ ಗಡಿ ದಾಟಲು ಕಾರಣರಾದರು. ಅಂತಿಮವಾಗಿ ಸ್ಲಾಟ್ಲೆಂಟ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 109 ರನ್‌ಗಳನ್ನು ಗಳಿಸಿತು. ನಮೀಬಿಯಾ ಪರವಾಗಿ ರೂಬನ್ ಟ್ರಂಪ್ಲ್‌ಮನ್ 3 ವಿಕೆಟ್ ಕಬಳಿಸಿದರೆ ಝಾನ್ ಫ್ರಾಂಕ್ಲಿನ್ 2 ಹಾಗೂ ಸ್ಮಿತ್ ಹಾಗೂ ವೈಸ್ ತಲಾ ಒಂದು ವಿಕೆಟ್ ತಮ್ಮದಾಗಿಸಿದರು.

ಇನ್ನು ಸ್ಕಾಟ್ಲೆಂಡ್ ತಂಡ ನೀಡಿದ 110 ರನ್‌ಗಳ ಗುರಿಯನ್ನುಯ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಆದರೆ ಮಧ್ಯಮ ಕ್ರಮಾಂಕ ನಮೀಬಿಯಾಗೆ ಆಘಾತ ನೀಡಿತು.50 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ನಮೀಬಿಯಾ ನಂತರ 67 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಸಂಕಷ್ಟದ ಸಮಯವನ್ನು ಎದುರಿಸಿತು. ಆದರೆ ಜೆಜೆ ಸ್ಮಿತ್ ನಮೀಬಿಯಾ ಪಾಲಿಗೆ ಆಸರೆಯಾದರು. ಅಂತಿಮವಾಗಿ ನಮೀಬಿಯಾ 19.1 ಓವರ್‌ಗಳಲ್ಲಿ ಸ್ಲಾಟ್ಲೆಂಡ್ ನಿಡಿದ ಗುರಿಯನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಯಿತು.

ಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭ

ಸ್ಲಾಟ್ಲೆಂಡ್ ತಂಡದ ಪರವಾಗಿ ಮೈಕಲ್ ಲೀಸ್ಕ್ ಬೌಲಿಂಗ್‌ನಲ್ಲಿಯೂ ಮಿಂಚಿದ್ದು 2 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಬ್ರಾಡ್ಲಿ ವೀಲ್, ಸಫಿಯಾನ್ ಶರೀಫ್, ಕ್ರಿಸ್ ಗ್ರೀವ್ಸ್ ಹಾಗೂ ಮಾರ್ಕ್ ವ್ಯಾಟ್ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.

ಇನ್ನು ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ನಮೀಬಿಯಾ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಮಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡ ಪರಿಣಾಮವಾಗಿ ನಮೀಬಿಯಾ ತಂಡದ ನಂತರದ ಸ್ಥಾನದಲ್ಲಿದೆ. ಗ್ರೂಪ್ 2ರಲ್ಲಿ ಪಾಕಿಸ್ತಾನ ಅಗ್ರ ಸ್ಥಾನದಲ್ಲಿದ್ದು ಅಫ್ಘಾನಿಸ್ತಾನ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸಿ, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಕ್ಯಾಲಮ್ ಮ್ಯಾಕ್ಲಿಯೋಡ್, ರಿಚಿ ಬೆರಿಂಗ್ಟನ್ (ನಾಯಕ), ಕ್ರೇಗ್ ವ್ಯಾಲೇಸ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್
ಬೆಂಚ್: ಅಲಾಸ್ಡೇರ್ ಇವಾನ್ಸ್, ಕೈಲ್ ಕೋಟ್ಜರ್, ಡೈಲನ್ ಬಡ್ಜ್, ಹಮ್ಜಾ ತಾಹಿರ್

ನಮೀಬಿಯಾ ಆಡುವ ಬಳಗ: ಕ್ರೇಗ್ ವಿಲಿಯಮ್ಸ್, ಝೇನ್ ಗ್ರೀನ್ (ವಿಕೆಟ್ ಕೀಪರ್), ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೈಸ್, ಮೈಕೆಲ್ ವ್ಯಾನ್ ಲಿಂಗೆನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್
ಬೆಂಚ್: ಸ್ಟೀಫನ್ ಬಾರ್ಡ್, ಮಿಚೌ ಡು ಪ್ರೀಜ್, ಕಾರ್ಲ್ ಬಿರ್ಕೆನ್‌ಸ್ಟಾಕ್, ಬೆನ್ ಶಿಕೊಂಗೊ

Pakistan ಸಚಿವರೊಬ್ಬರು ಕ್ರಿಕೆಟ್ ಪಂದ್ಯದ ಬಗ್ಗೆ ಹೀಗೇಕೆ ಹೇಳಿದರು | Oneindia Kannada

For Quick Alerts
ALLOW NOTIFICATIONS
For Daily Alerts
Story first published: Wednesday, October 27, 2021, 23:16 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X