ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಐರ್ಲೆಂಡ್

T20 World Cup, match 3, Ireland won by 7 wickets against Netherlands
Photo Credit: icc twitter

ಟಿ20 ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡ ನೆದರ್ಲ್ಯಾಂಡ್ ವಿರುದ್ಧ ಭರ್ಜರಿ ಜಯವನ್ನು ದಾಖಲಿಸಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಶುಭಾರಂಭವನ್ನು ಮಾಡಿದೆ. ಪಂದ್ಯದುದ್ದಕ್ಕೂ ಐರ್ಲೆಂಡ್ ಎದುರಾಳಿ ನೆದರ್ಲೆಂಡ್ಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುತ್ತಾ ಬಂದಿತ್ತು. ಅಂತಿಮವಾಗಿ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ನೆದರ್ಲ್ಯಾಂಡ್ಸ್ ತಂಡವನ್ನು 7 ವಿಕೆಟ್‌ಗಳಿಂದ ಐರ್ಲೆಂಡ್ ಮಣಿಸಿತು.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವುಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವು

ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಯಾವ ಹಂತದಲ್ಲಿಯೂ ತಂಡದ ಆಟಗಾರರು ಪ್ರದರ್ಶನ ನೀಡಲಿಲ್ಲ. ಆರಂಭಿಕ ಆಟಗಾರ ಮ್ಯಾಕ್ಸ್‌ಒ ಡೌಡ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕ ದಾಖಲಿಸಿದರು. ನೆದರ್ಲೆಂಡ್ಸ್ ತಮಡದ ಐವರು ನಾಲ್ವರು ಆಟಗಾರರು ಶೂನ್ಉಯಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 106 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು ನೆದರ್ಲೆಂಡ್ಸ್ ತಂಡ.

ಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆ

ನೆದರ್ಲ್ಯಾಂಡ್ಸ್ ತಂಡ ನೀಡಿದ 107 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಕೂಡ ಆರಂಭದಲ್ಲಿ ಆತಂಕವನ್ನು ಅನುಭವಿಸಿತ್ತು. 27 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ 36 ರನ್‌ಗೆ ಎರಡನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್‌ಗೆ ಜೊತೆಯಾದ ಗ್ಯಾರಟ್ ಡೆಲಾನಿ ಉತ್ತಮ ಜೊತೆಯಾಟ ನೀಡಿದರು. ಈ ಮೂಲಕ ನೆದರ್ಲ್ಯಾಂಡ್‌ಗೆ ಯಾವ ಅವಕಾಶಗಳು ಇಲ್ಲದಂತೆ ಮಾಡಿದರು. 29 ಎಸೆತ ಎದುರಿಸಿದ ಡೆಲಾನಿ 44 ನ್‌ಗಳಿಸಿದ್ದರು. ಆರಂಭಿಕ ಆಟಗಾರ ಸ್ಟಿರ್ಲಿನ್ ಅಜೇಯ 30 ರನ್‌ಗಳಿಸಿದ್ದಾರೆ. ಅಂತಿಮವಾಗಿ 15.1 ಓವರ್‌ಗಳಲ್ಲಿ ಐರ್ಲೆಂಡ್ 3 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

ಟಿ20 ವಿಶ್ವಕಪ್: ಧೋನಿ ಮೆಂಟರ್ ಆಗುತ್ತಿರುವ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದಿಷ್ಟು!ಟಿ20 ವಿಶ್ವಕಪ್: ಧೋನಿ ಮೆಂಟರ್ ಆಗುತ್ತಿರುವ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದಿಷ್ಟು!

ಐರ್ಲೆಂಡ್ ಸ್ಕ್ವಾಡ್: ಪಾಲ್ ಸ್ಟಿರ್ಲಿಂಗ್, ಕೆವಿನ್ ಒ ಬ್ರಿಯಾನ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಗರೆತ್ ಡೆಲಾನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಪರ್, ನೀಲ್ ರಾಕ್ (ವಿಕೆಟ್ ಕೀಪರ್), ಸಿಮಿ ಸಿಂಗ್, ಮಾರ್ಕ್ ಅಡೈರ್, ಬೆಂಜಮಿನ್ ವೈಟ್, ಜೋಶುವಾ ಲಿಟಲ್

ಬೆಂಚ್: ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಆಂಡಿ ಮೆಕ್‌ಬ್ರೈನ್, ಲೋರ್ಕನ್ ಟಕರ್

ಮೈದಾನದಲ್ಲಿ Rishab Pant ಅವರು Ashwinಗೆ ಹೇಳಿದ್ದೇನು | Oneindia Kannada

ನೆದರ್ಲ್ಯಾಂಡ್ಸ್ ಸ್ಕ್ವಾಡ್: ಮ್ಯಾಕ್ಸ್ ಒಡೌಡ್, ಬೆನ್ ಕೂಪರ್, ಬಾಸ್ ಡಿ ಲೀಡೆ, ಕಾಲಿನ್ ಅಕೆರ್ಮಾನ್, ರಯಾನ್ ಟೆನ್ ಡೋಸ್ಚೇಟ್, ಸ್ಕಾಟ್ ಎಡ್ವರ್ಡ್ಸ್ (ವಿಕೆಟ್ ಕೀಪರ್), ರೋಲೋಫ್ ವ್ಯಾನ್ ಡೆರ್ ಮರ್ವೆ, ಪೀಟರ್ ಸೀಲಾರ್ (ನಾಯಕ), ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್, ಬ್ರಾಂಡನ್ ಗ್ಲೋವರ್
ಬೆಂಚ್: ಸ್ಟೀಫನ್ ಮೈಬರ್ಗ್, ಫಿಲಿಪ್ ಬೋಯ್ಸೆವೈನ್, ಪಾಲ್ ವ್ಯಾನ್ ಮೀಕೆರೆನ್, ಟಿಮ್ ವ್ಯಾನ್ ಡೆರ್ ಗುಗ್ಟೆನ್

Story first published: Tuesday, October 19, 2021, 10:22 [IST]
Other articles published on Oct 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X