ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತ ಹೇಗೆ ನೆಚ್ಚಿನ ತಂಡವಾಗುತ್ತೆ?: ಮತ್ತೆ ಕುಟುಕಿದ ಮೈಕಲ್ ವಾನ್

T20 world cup: Michael Vaughan said Don’t know how India get the favourites tag in T20 format

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟೀಮ್ ಇಂಡಿಯಾ ವಿರುದ್ಧ ಆಗಾಗ ಹೇಳಿಕೆಯನ್ನು ನೀಡಿ ಸುದ್ದಿಯಾಗುವುದು ಹೊಸ ವಿಚಾರವಲ್ಲ. ಟಿ20 ವಿಶ್ವಕಪ್ ವಿಚಾರವಾಗಿಯೂ ಮೈಕಲ್ ವಾನ್ ಭಾರತ ಕ್ರಿಕೆಟ್ ತಂಡವನ್ನು ಕೆಣಕುವಂತಾ ಹೇಳಿಕೆ ನೀಡಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭದಲ್ಲಿ ಭಾರತವನ್ನು ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಇದಕ್ಕೆ ಮೈಕಲ್ ವಾನ್ ಭಾರತ ಹೇಗೆ ಫೆವರೀಟ್ ತಂಡವಾಗುತ್ತದೆ ಎಂದು ಕುಟುಕಿದ್ದಾರೆ. ಅಲ್ಲದೆ ಈ ಬಾರಿ ಇಂಗ್ಲೆಂಡ್ ತಂಡವೇ ವಿಶ್ವಕಪ್ ಗೆಲ್ಲುವ ತಂಡ ಎಂದಿದ್ದಾರೆ.

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಸಾಮಾಜಿಕ ಜಾಲತಾಣದಿಂದ ಸಾನಿಯಾ ಮಿರ್ಜಾ ಹೊರಕ್ಕೆಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಸಾಮಾಜಿಕ ಜಾಲತಾಣದಿಂದ ಸಾನಿಯಾ ಮಿರ್ಜಾ ಹೊರಕ್ಕೆ

ಈ ಬಾರಿಯ ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಅತ್ಯಂತ ಬಲಿಷ್ಠವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಭಾರತ ತನ್ನ ವಿಶ್ವಕಪ್‌ನ ಅಭಿಯಾನವನ್ನು ಮುಂದಿನ ಭಾನುವಾರ ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಆರಂಭಿಸಲಿದೆ.

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!

"ನನ್ನ ಪ್ರಕಾರ ಇಂಗ್ಲೆಂಡ್ ತಂಡವೇ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಗೆಲ್ಲುವ ನೆಲ್ಲಿನ ತಂಡ ಎಂಬ ಹಣೆಪಟ್ಟಿ ಅದು ಹೇಗೆ ಪಡೆದಿದೆಯೋ ನನಗೆ ತಿಳಿದಿಲ್ಲ. ಈ ಹಿಂದಿನ ಟೂರ್ನಿಗಳಲ್ಲಿಯೂ ಅವರು ಪ್ರಶಸ್ತಿಗೆ ಬಹಳ ದೂರದಲ್ಲಿದ್ದರು" ಎಂದು ಮೈಕಲ್ ವಾನ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟಿ20 ವಿಶ್ವಕಪ್: ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚಿನ ಸಿದ್ಧತೆಯ ಅವಶ್ಯಕತೆಯಿಲ್ಲ: ರವಿ ಶಾಸ್ತ್ರಿಟಿ20 ವಿಶ್ವಕಪ್: ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚಿನ ಸಿದ್ಧತೆಯ ಅವಶ್ಯಕತೆಯಿಲ್ಲ: ರವಿ ಶಾಸ್ತ್ರಿ

ಮೈಕಲ್ ವಾನ್ ಈ ಸಂದರ್ಣದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಉಳಿದಂತೆ ಬಲಿಷ್ಠವೆನಿಸಬಲ್ಲ ಕೆಲ ತಂಡಗಳನ್ನು ಕೂಡ ಹೆಸರಿಸಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು ಎದುರಾಳಿಗಳಿಗೆ ಅಪಾಯಕಾರಿಯಾಗಬಲ್ಲದು ಎಂದಿರುವ ಅವರು ನ್ಯೂಜಿಲೆಂಡ್ ತಂಡದಲ್ಲಿಯೂ ಕೆಲ ಅದ್ಭುತವಾದ ವಿಶ್ವದರ್ಜೆಯ ಆಟಗಾರರು ಇದ್ದಾರೆ ಎಂದಿರುವ ವಾನ್ ಅವರೆಲ್ಲರೂ ಅದ್ಭುತವಾದ ರಣತಂತ್ರದೊಂದಿಗೆ ಟೂರ್ನಿಗೆ ಆಗಮಿಸಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಭದಲಲ್ಇ ಮೈಕಲ್ ವಾನ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿಯೂ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎಂದು ತನಗೆ ಅನಿಸುತ್ತಿಲ್ಲ ಎಂದಿದ್ದಾರೆ ಮೈಕಲ್ ವಾನ್. "ನಾನೀಗಲೇ ಹೇಳುತ್ತಿದ್ದೇನೆ, ಆಸ್ಟ್ರೇಲಿಯಾಗೆ ಈ ವಿಶ್ವಕಪ್‌ನಲ್ಲಿ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎನಿಸುತ್ತಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಅವರು ಬಹಳಷ್ಟು ಹೆಣಗಾಡುತ್ತಿದ್ದಾರೆ. ಇದಕ್ಕೆ ಮ್ಯಾಕ್ಸ್‌ವೆಲ್ ಮಾತ್ರ ಹೊರತಾಗಿದ್ದಾರೆ. ಆತ ಮಾತ್ರ ಈ ವಿಶ್ವಕಪ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಬಲ್ಲ ಆಟಗಾರ" ಎಂದು ಮೈಕಲ್ ವಾನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಆಸ್ಟ್ರೇಲುಯಾ ತಂಡ ಹೆಚ್ಚಿನ ಸಾಧನೆಯನ್ನು ಮಾಡುತ್ತದೆ ಎಂಬ ಭಾವನೆ ನನ್ನಲ್ಲಿಲ್ಲ ಎಂದಿದ್ದಾರೆ.

ಆತ್ಮವಿಶ್ವಾಸ ಹೆಚ್ಚಲು ಅವರಿಬ್ಬರು ಕಾರಣ: ಆರ್‌ಸಿಬಿ ತಂಡದ ಅನುಭವ ಬಿಚ್ಚಿಟ್ಟ ಮ್ಯಾಕ್ಸ್‌ವೆಲ್ಆತ್ಮವಿಶ್ವಾಸ ಹೆಚ್ಚಲು ಅವರಿಬ್ಬರು ಕಾರಣ: ಆರ್‌ಸಿಬಿ ತಂಡದ ಅನುಭವ ಬಿಚ್ಚಿಟ್ಟ ಮ್ಯಾಕ್ಸ್‌ವೆಲ್

ಇನ್ನು ಇದೇ ಸಂದರ್ಭದಲ್ಲಿ ಮೈಕಲ್ ವಾನ್ ಸೆಮಿಫೈನಲ್ ಹಂತಕ್ಕೇರುವ ನಾಲ್ಕು ತಂಡಗಳನ್ನು ಕೂಡ ಹೆಸರಿಸಿದ್ದಾರೆ. "ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೇರುವ ನಾಲ್ಕು ತಂಡಗಳಾಗಿದೆ. ಪರಿಸ್ಥಿತಿಯ ಕಾರಣದಿಂದಾಗಿ ಪಾಕಿಸ್ತಾನ ತಂಡಕ್ಕೂ ಕೂಡ ಅವಕಾಶವಿದೆ" ಎಂದಿದ್ದಾರೆ ಮೈಕಲ್ ವಾನ್. ಇನ್ನು ಇದೇ ಸಂದರ್ಭದಲ್ಲಿ ಅವರು ಟೂರ್ನಿಯಲ್ಲಿ ಪಿಚ್‌ಗಳು ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದಿದ್ದಾರೆ.

"ನನ್ನ ಒ್ರಕಾರ ಪಿಚ್‌ಗಳು ಬಹಳಷ್ಟು ಕುತೂಹಲಕಾರಿಯಾಗಿದೆ. ಯಾಕೆಂದರೆ ಬಹಳಷ್ಟು ನಿಧಾನಗತಿಯ ಪಿಚ್‌ಗಳನ್ನು ನಾವು ಐಪಿಎಲ್ ಸಂದರ್ಭದಲ್ಲಿ ಗಮನಿಸಿದ್ದೇವೆ. ಹೀಗಾಗಿ 150-160 ರನ್‌ಗಳನ್ನು ಕೂಡ ಇಂತಾ ಮೈದಾನದಲ್ಲಿ ರಕ್ಷಣೆ ಮಾಡಿಕೊಳ್ಳುವ ಅವಕಾಶಗಳಿವೆ" ಎಂದಿದ್ದಾರೆ ಮೈಕಲ್ ವಾನ್.

ಕ್ಯಾಪ್ಟನ್ ಕೂಲ್ ಗರಂ ಆದ ಕ್ಷಣ | Oneindia Kannada

Story first published: Wednesday, October 20, 2021, 9:12 [IST]
Other articles published on Oct 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X