ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಬುಮ್ರಾ ಬದಲಿಗೆ ಸ್ಥಾನ ಪಡೆಯಲು ರೇಸ್‌ನಲ್ಲಿರುವ ಆಟಗಾರರು ಇವರು

T20 World Cup: Mohammad Shami And Mohammed Siraj In The Race To Get Chance In India Squad

ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ನಂತರ ಮುಂಬರುವ 20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ.

IND vs SA, 3rd T20I : ಇಂದೋರ್‌ನ ಕ್ರಿಕೆಟ್ ಪಿಚ್ ಇತಿಹಾಸ, ಟಿ20 ದಾಖಲೆ; ಭಾರತವೇ ಮೇಲುಗೈIND vs SA, 3rd T20I : ಇಂದೋರ್‌ನ ಕ್ರಿಕೆಟ್ ಪಿಚ್ ಇತಿಹಾಸ, ಟಿ20 ದಾಖಲೆ; ಭಾರತವೇ ಮೇಲುಗೈ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಷ್ಟ್ರೀಯ ಆಯ್ಕೆದಾರರು ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಬಗ್ಗೆ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡಕ್ಕೆ ಸೇರ್ಪಡೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಪಂದ್ಯ ಆಡದಿದ್ದರೂ ಎರಡು ಮತ್ತು ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಭಾರತದ ವೇಗದ ಬೌಲಿಂಗ್ ಪಡೆಯನ್ನು ಅವರು ಮುನ್ನಡೆಸುತ್ತಾರೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ, ಗಾಯದ ಸಮಸ್ಯೆ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಅತಿ ಶೀಘ್ರದಲ್ಲೇ ಬುಮ್ರಾ ಬದಲಿಗೆ ಆಟಗಾರರ ಹೆಸರನ್ನು ಶೀಘ್ರದಲ್ಲೇ ಹೆಸರಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಮಾಹಿತಿ ಇಲ್ಲ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಮಾಹಿತಿ ಇಲ್ಲ

ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ಗಾಗಿ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ, ಬುಮ್ರಾ ಬದಲಿಗೆ ನೇರವಾಗಿ ಆಯ್ಕೆಯಾಗಬೇಕಿತ್ತು. ಆದರೆ, ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ.

ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಆಯ್ಕೆದಾರರಿಗೆ ಇನ್ನೂ ಖಚಿತವಾಗಿಲ್ಲ. ಈ ಕಾರಣದಿಂದಾಗಿ ಈಗ ಅನುಭವಿ ವೇಗಿಗಳನ್ನು ಎನ್‌ಸಿಎಗೆ ಫಿಟ್‌ನೆಸ್ ಪರೀಕ್ಷೆಗೆ ಕರೆಯಲಾಗಿದೆ. ಶಮಿ ಅವರ ಫಿಟ್ನೆಸ್ ಪರೀಕ್ಷೆಯು ಬುಧವಾರ ಅಥವಾ ಗುರುವಾರ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

IND vs SA 3rd T20I : ಕೊಹ್ಲಿ, ರಾಹುಲ್ ಅನುಪಸ್ಥಿತಿ; ಸಂಭಾವ್ಯ ತಂಡಗಳು, ಸಮಯ, ಎಲ್ಲಿ ವೀಕ್ಷಣೆ?

ದೀಪಕ್ ಚಹಾರ್ ಪರಿಗಣನೆ ಸಾಧ್ಯತೆ

ದೀಪಕ್ ಚಹಾರ್ ಪರಿಗಣನೆ ಸಾಧ್ಯತೆ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡು ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ದೀಪಕ್ ಚಹಾರ್ ಕೂಡ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಅವರು ಇದೇ ರೀತಿ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರನ್ನು ಪರಿಗಣಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ದೀಪಕ್ ಚಹಾರ್ ಕೂಡ ಟಿ20 ವಿಶ್ವಕಪ್ ಭಾರತ ತಂಡದ ಮೀಸಲು ಆಟಗಾರ ಪಟ್ಟಿಯಲ್ಲಿದ್ದಾರೆ.

ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧ 4 ಓವರ್ ಗಳಲ್ಲಿ 24 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ ಪರವಾಗಿ ಉತ್ತಮ ಪ್ರದರ್ಶನ ನೀಡಿರುವ ಚಹಾರ್ ಸ್ವಿಂಗ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇರುವುದರಿಂದ ಸದ್ಯ ಆಯ್ಕೆ ರೇಸ್‌ನಲ್ಲಿದ್ದಾರೆ.

ಅಚ್ಚರಿಯೆಂಬಂತೆ ಸಿರಾಜ್ ಆಯ್ಕೆಯಾಗಬಹುದು

ಅಚ್ಚರಿಯೆಂಬಂತೆ ಸಿರಾಜ್ ಆಯ್ಕೆಯಾಗಬಹುದು

ರಾಷ್ಟ್ರೀಯ ಆಯ್ಕೆಗಾರರು ಮತ್ತು ತಂಡದ ನಿರ್ವಹಣೆಯ ಮುಂದಿರುವ ಇನ್ನೊಂದು ಆಯ್ಕೆ ಮೊಹಮ್ಮದ್ ಸಿರಾಜ್. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೆ ಬುಮ್ರಾ ಬದಲಿಗೆ ಸಿರಾಜ್ ಸ್ಥಾನ ಪಡೆದಿದ್ದಾರೆ.

ಶಮಿ ತನ್ನ ಫಿಟ್ನೆಸ್ ಅನ್ನು ಸಾಬೀತುಪಡಿಸಲು ವಿಫಲವಾದರೆ. ಬುಮ್ರಾ ಬದಲಿಯಾಗಿ ಸಿರಾಜ್ ಅವರನ್ನು ಇತರರಿಗಿಂತ ಮುಂಚಿತವಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಏನೇ ಆದರೂ, ಬುಮ್ರಾ ಅನುಪಸ್ಥಿತಿ ಮಾತ್ರ ಭಾರತ ತಂಡವನ್ನು ಬಹುವಾಗಿ ಕಾಡಲಿದೆ.

ಟೀಮ್ ಇಂಡಿಯಾ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ಹೊರಡಲು ಸಜ್ಜಾಗಿದ್ದರೂ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಂತರ ಮೀಸಲು ತಂಡ ಆಸ್ಟ್ರೇಲಿಯಾಕ್ಕೆ ಹೊರಡಲಿದೆ. ಅಷ್ಟರಲ್ಲಿ ಮೊಹಮ್ಮದ್ ಶಮಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಿದರೆ ಅವರು ಟಿ20 ವಿಶ್ವಕಪ್‌ ತಂಡದ ಭಾಗವಾಗುವ ಸಾಧ್ಯತೆ ಇದೆ.

ಉಮ್ರಾನ್ ಮಲಿಕ್‌ಗೆ, ಉಮೇಶ್‌ ಯಾದವ್‌ಗೆ ಅವಕಾಶ?

ಉಮ್ರಾನ್ ಮಲಿಕ್‌ಗೆ, ಉಮೇಶ್‌ ಯಾದವ್‌ಗೆ ಅವಕಾಶ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶಮಿ ಅಲಭ್ಯರಾಗಿದ್ದ ಕಾರಣ ಉಮ್ರಾನ್ ಮಲಿಕ್‌ಗೆ ಸಿದ್ಧವಾಗಿರುವಂತೆ ಬಿಸಿಸಿಐ ಸೂಚನೆ ನೀಡಿತ್ತು. ವೇಗದ ಬೌಲಿಂಗ್‌ನಿಂದ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ ಟೀಂ ಇಂಡಿಯಾ ಪರವಾಗಿ ಆಡಿದ್ದರು, ಹೆಚ್ಚಿನ ಅವಕಾಶ ಪಡೆದಿರಲಿಲ್ಲ.

ಉಮೇಶ್ ಯಾದವ್ ಭಾರತದ ಮತ್ತೊಬ್ಬ ಹಿರಿಯ ವೇಗಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಿದ ಉಮೇಶ್ ಯಾದವ್ ಎರಡು ವಿಕೆಟ್ ಪಡೆದಿದ್ದರು. ನಂತರದ ಪಂದ್ಯಗಳಲ್ಲಿ ಅವರು ಸ್ಥಾನ ಪಡೆಯುವಲ್ಲಿ ವಿಫಲರಾದರು. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದಲ್ಲಿರುವ ಅವರು, ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಅನುಭವದ ಆಧಾರದ ಮೇಲೆ ಉಮೇಶ್ ಯಾದವ್ ಅವರನ್ನು ಪರಿಗಣಿಸಬಹುದಾದರು, ಅದರ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

Story first published: Tuesday, October 4, 2022, 14:33 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X