ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಮಾಡಿದ ಮಾರ್ಟಿನ್ ಗಪ್ಟಿಲ್

T20 World Cup: new zealand opener Martin Guptill major milestone in t20 cricket

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಚುಟುಕು ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಟ್ ವಿರುದ್ಧಧ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಭರ್ಜರಿ 93 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಅಬ್ಬರದ ಪ್ರದರ್ಶನದ ಸಂದರ್ಭದಲ್ಲಿ ಮಾರ್ಟಿನ್ ಗಪ್ಟಿಲ್ ಶ್ರೇಷ್ಠ ಮೈಲಿಗಲ್ಲೊಂದನ್ನು ದಾಟಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಾರ್ಟಿನ್ ಗಪ್ಟಿಲ್ 3000 ರನ್‌ಗಳನ್ನು ಗಳಿಸಿದ ಆಟಗಾರ ಎನಿಸಿದ್ದಾರೆ. ಸದ್ಯ ಈ ಸಾಧನೆ ಮಾಡಿದ ಕೇವಲ ಎರಡನೇ ಆಟಗಾರ ಎನಿಸಿದ್ದಾರೆ ಮಾರ್ಟಿನ್ ಗಪ್ಟಿಲ್. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ಸಾಧನೆ ಮಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 92 ಟಿ20 ಪಂದ್ಯಗಳಲ್ಲಿ 3225 ರನ್‌ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿವೀಸ್ ತಮಡದ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್ 105 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. 32.30 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಅವರು 136.29ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ದೊಡ್ಡ ಹೆಸರಿದೆ ಎಂದು ಕೆಟ್ಟ ಆಟವಾಡುವ ಈ ಸ್ಟಾರ್ ಆಟಗಾರರಿಗೆ ಅವಕಾಶ ಕೊಡಬೇಡಿ: ಕಪಿಲ್ ದೇವ್ದೊಡ್ಡ ಹೆಸರಿದೆ ಎಂದು ಕೆಟ್ಟ ಆಟವಾಡುವ ಈ ಸ್ಟಾರ್ ಆಟಗಾರರಿಗೆ ಅವಕಾಶ ಕೊಡಬೇಡಿ: ಕಪಿಲ್ ದೇವ್

ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2 ಶತಕಗಳಿಸಿದ್ದು 17 ಅರ್ಧ ಶತಕಗಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಾರ್ಟಿನ್ ಗಪ್ಟಿಲ್ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈವರೆಗೆ 148 ಸಿಕ್ಸರ್ ಸಿಡಿಸಿದ್ದಾರೆ ಮಾರ್ಟಿಬ್ ಗಪ್ಟಿಲ್. ಎರಡನೇ ಸ್ಥಾನದಲ್ಲಿ ಭಾರತದ ಉಪ ನಾಯಕ ರೋಹಿತ್ ಶರ್ಮಾ ಇದ್ದಾರೆ. 134 ಸಿಕ್ಸರ್‌ಗಳನ್ನು ರೋಹಿತ್ ಶರ್ಮಾ ಸಿಡಿಸಿದ್ದಾರೆ.

ಮಾರ್ಟಿನ್ ಗಪ್ಟಿಲ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಅವರು ಶತಕದ ಅಂಚಿನಲ್ಲಿ ಎಡವಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಎರಡು ಶತ ಸಿಡಿಸಿದ ಸಾಧನೆ ಮಾಡಿರುವ ಗಪ್ಟಿಲ್ ಕೇವಲ 7 ರನ್‌ಗಳಿಂದ ಮೂರನೇ ಶತಕದಿಂದ ವಂಚಿತರಾಗಿದ್ದಾರೆ.

ಟಿ20 ವಿಶ್ವಕಪ್: ಭಾರತ vs ಅಫ್ಘಾನಿಸ್ತಾನ, ಪಿಚ್ ರಿಪೋರ್ಟ್, ಹವಾಮಾನ ವರದಿಟಿ20 ವಿಶ್ವಕಪ್: ಭಾರತ vs ಅಫ್ಘಾನಿಸ್ತಾನ, ಪಿಚ್ ರಿಪೋರ್ಟ್, ಹವಾಮಾನ ವರದಿ

ಇನ್ನು ನ್ಯೂಜಿಲೆಂಡ್ ಹಾಗೂ ಸ್ಲಾಟ್ಲೆಂಡ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಾರ್ಟಿನ್ ಗಪ್ಟಿಲ್ ಅವರ ಅಬ್ಬರದ ಪ್ರದರ್ಶನದಿಂದಾಗಿ ಕಿವೀಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 172/5 ರನ್‌ಗಳಿಸಿತು.

ಅಫ್ಘಾನಿಸ್ತಾನದ ಈ ಇಬ್ಬರು ಭಾರತಕ್ಕೆ ಸೋಲು ತರಬಹುದು ಹುಷಾರ್; ಕೊಹ್ಲಿ ಪಡೆಗೆ ಎಚ್ಚರಿಸಿದ ಮಾಜಿ ಕ್ರಿಕೆಟಿಗ!ಅಫ್ಘಾನಿಸ್ತಾನದ ಈ ಇಬ್ಬರು ಭಾರತಕ್ಕೆ ಸೋಲು ತರಬಹುದು ಹುಷಾರ್; ಕೊಹ್ಲಿ ಪಡೆಗೆ ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್
ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸೆ, ಕೈಲ್ ಕೋಟ್ಜರ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಅಲಾಸ್ಡೇರ್ ಇವಾನ್ಸ್, ಬ್ರಾಡ್ಲಿ ವೀಲ್

Story first published: Thursday, November 4, 2021, 11:41 [IST]
Other articles published on Nov 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X