ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಇಂಗ್ಲೆಂಡ್‌ಗೆ ಆಘಾತ ನೀಡಿದ ಮಿಚೆಲ್, ನೀಶಮ್: ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್

T20 world cup: New Zealand won semi Final match against England entered final

ರೋಚಕ ಸೆಮಿ ಫೈನಲ್ ಕದನದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ ತಂಡವಾಗಿರುವ ಕಿವೀಸ್ ಪಡೆ ಈಗ ಟಿ20 ವಿಶ್ವಕಪ್ ಮುಡುಗೇರಿಸಿಕೊಳ್ಳಲು ಒಂದೇ ಹೆಜ್ಜೆ ಹಿಂದಿದೆ. ಗೆಲ್ಲಲು 167 ರನ್‌ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ತಂಡ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಗೆದ್ದು ಬೀಗಿದ್ದು ಫೈನಲ್‌ಗೇ ಪ್ರವೇಶ ಗಿಟ್ಟಿಸಿಕೊಂಡಿದೆ. ಇಂಗ್ಲೆಂಡ್ ತನ್ನ ಹೋರಾಟವನ್ನು ಸೆಮಿಫೈನಲ್‌ಗೆ ಅಂತ್ಯಗೊಳಿಸಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಬೌಲಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿತು. ಬೃಹತ್ ಮೊತ್ತ ಪೇರಿಸದಂತೆ ತಡೆಯುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಸ್ಥಿತಿಯಿಂದ ನ್ಯೂಜಿಲೆಂಡ್ ಎದ್ದು ಬಂದು ಗೆಲುವು ಸಾಧಿಸಿದ ರೀತಿ ನಿಜಕ್ಕೂ ಅಮೋಘ. ಡೆರೆಲ್ ಮಿಚೆಲ್ ಕೊನೆಯ ವರೆಗೂ ನೆಲಕಚ್ಚಿ ನಿಂತು ಹೋರಾಡಿದ ರೀತಿಗೆ ಹಾಗೂ ಜಿಮ್ಮಿ ನೀಶಮ್ ಪ್ರದರ್ಶಿಸಿದ ಅಬ್ಬರದ ಆಟಕ್ಕೆ ಇಂಗ್ಲೆಂಡ್ ಸೋತು ಶರಣಾಯಿತು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ್ ಇಂಗ್ಲೆಂಡ್ ತಂಡಕ್ಕೆ ಹೇಳಿಕೊಳ್ಳುವಂತಾ ಆರಂಭ ದೊರೆಯಲಿಲ್ಲ. ಜಾನಿ ಬೈರ್‌ಸ್ಟೋವ್ 17 ಎಸೆತಗಳನ್ನು ಎದುರಿಸಿ 13 ರನ್‌ಗಳನ್ನಷ್ಟೇ ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದ ಜೋಸ್ ಬಟ್ಲರ್ ಕೂಡ 29 ರನ್‌ಗಳಿಗೆ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಈ ಮೂಲಕ ಇಂಗ್ಲೆಂಡ್ 8.1 ಓವರ್‌ಗಳಲ್ಲಿ 53 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಡೇವಿಡ್ ಮಲನ್ ಹಾಗೂ ಮೊಯೀನ್ ಅಲಿ ಇಂಗ್ಲೆಂಡ್ ತಂಡಕ್ಕೆ ಅದ್ಭುತ ಜೊತೆಯಾಟವೊಂದನ್ನು ನೀಡಿದರು.

ಡೇವಿಡ್ ಮಲನ್ 30 ಎಸೆತಗಳಲ್ಲಿ 41 ರನ್‌ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ಬಂದ ಲಿವಿಂಗ್ಸ್ಟನ್ 10 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಮೊಯೀನ್ ಅಲಿ ಜವಾಬ್ಧಾರಿಯುತ ಪ್ರದರ್ಶನ ಮುಂದಿವರಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್‌ಗಳಿಸಲು ಯಶಸ್ವಿಯಾಯಿತು. ಮೊಯೀನ್ ಅಲಿ 37 ಎಸೆತಗಳಲ್ಲಿ 51 ರನ್ ಬಾರಿಸಿ ಅಜೇಯವಾಗಿ ಉಳಿದರು.

ಇದನ್ನು ಬೆನ್ನಟ್ಟಲು ಆರಂಭಿಸಿದ ನ್ಯೂಹಿಲೆಂಡ್ ತಂಡ ಮಾರ್ಟಿನ್ ಗಪ್ಟಿಲ್ ವಿಕೆಟನ್ನು ಕೇವಲ 4 ರನ್‌ಗಳಿಗೆ ಕಳೆದುಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ ತಂಡದ ಮೊತ್ತ 13 ರನ್ ಆಗುವಷ್ಟರಲ್ಲಿ ಔಟಾದರು. ಆದರೆ ನಂತರ ಜೊತೆಯಾದ ಮಿಚೆಲ್ ಹಾಗೂ ಡೆವೋನ್ ಕಾನ್ವೆ ಅದ್ಭುತವಾದ ಜೊತೆಯಾಟವನ್ನು ನೀಡಿದರು. ಈ ಜೋಡಿ 82 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ತಂಡಕ್ಕೆ ನೀಡಿತು. 46 ರನ್‌ಗಳಿಸಿದ್ದ ಕಾನ್ವೆ ಲಿವಿಂಗ್ಸ್ಟನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ಗ್ಲೆನ್ ಫಿಲಿಪ್ಸ್ ಕೂಡ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡಾಗ ನ್ಯೂಜಿಲೆಂಡ್ ತಂಡ 15.1 ಓವರ್‌ಗಳಲ್ಲಿ 107 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಈ ಹಂತದಲ್ಲಿ ನ್ಯೂಜಿಲೆಂಡ್ ಮುಂದೆ 29 ಎಸೆತಗಳಲ್ಲಿ 59 ರನ್‌ಗಳಿಸುವ ಕಠಿಣ ಸವಾಲಿತ್ತು. ಇಂಗ್ಲೆಂಡ್ ತಂಡ ಗೆಲುವು ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ನಂತರ ಜೊತೆಯಾದ ಮಿಚೆಲ್‌ಗೆ ಜೊತೆಯಾದ ಜಿಮ್ಮಿ ನೀಶಮ್ ಇಂಗ್ಲೆಂಡ್ ತಂಡದ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದರು. ಕೇವಲ 11 ಎಸೆತ ಎದುರಿಸಿದ ನೀಶಮ್ 27 ರನ್‌ ಸಿಡಿಸಿದರು. ಈ ಮೂಲಕ ಕಿವೀಸ್ ಪಡೆಯ ಗೆಲುವಿನ ಅವಕಾಶವನ್ನು ತೆರೆದಿಟ್ಟರು. ಆದರೆ ಆದಿಲ್ ರಶೀದ್ ಎಸೆತಕ್ಕೆ ನೀಶಮ್ ವಿಕೆಟ್ ಕಲೆದುಕೊಂಡು ಫೆವಿಲಿಯನ್ ಸೇರಿದರು. ಈಗ ನ್ಯೂಜಿಲೆಂಡ್‌ಗೆ ಅಗತ್ಯವಿದ್ದದ್ದು 12 ಎಸೆತಗಳಲ್ಲಿ 20 ರನ್‌ಗಳಿಸುವ ಸವಾಲು. ಈ ಸವಾಲನ್ನು ನ್ಯೂಜಿಲೆಂಡ್ ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಮೀರಿ ನಿಂತಿತ್ತು. ಡೆರೆಲ್ ಮಿಚೆಲ್ ನ್ಯೂಜಿಲೆಂಡ್ ತಂಡವನ್ನು ಗೆಲ್ಲಿಸಿದ್ದು ಮಾತ್ರವಲ್ಲದೆ ಫೈನಲ್ ಹಂತಕ್ಕೆ ತಲುಪಿಸಿದ್ದರು.

ಇಂಗ್ಲೆಂಡ್ ಆಡುವ ಬಳಗ: ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಮೊಯಿನ್ ಅಲಿ, ಇಯಾನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್

ಬೆಂಚ್: ಡೇವಿಡ್ ವಿಲ್ಲಿ, ಜೇಮ್ಸ್ ವಿನ್ಸ್, ರೀಸ್ ಟೋಪ್ಲಿ, ಟಾಮ್ ಕರನ್

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್
ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

ಈತನ ಎಂಟ್ರಿಯಿಂದ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಭವಿಷ್ಯ ಅತಂತ್ರ | Oneindia Kannada

Story first published: Thursday, November 11, 2021, 9:53 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X