ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಬಲಿಷ್ಠ ಆಟಗಾರರನ್ನೇ ಹೊರಗಿಟ್ಟ ವೆಸ್ಟ್ ಇಂಡೀಸ್: ಕಾರಣ ಬಹಿರಂಗ!

T20 World Cup: No place for Andre Russell and Sunil Narine in West Indies world cup squad, reason revealed

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು ಆಗಸ್ಟ್ 15ರ ಒಳಗೆ ಎಲ್ಲಾ ತಂಡಗಳು ತಮ್ಮ ಸ್ಕ್ವಾಡ್ ಘೋಷಣೆ ಮಾಡಲು ಗಡುವು ನೀಡಲಾಗಿದೆ. ಹೀಗಾಗಿ ಅದಕ್ಕೂ ಒಂದು ದಿನ ಮುಂಚಿತವಾಗಿಯೇ ವೆಸ್ಟ್ ಇಂಡೀಸ್ ತಂಡದ ಸ್ಕ್ವಾಡ್ ಘೋಷಣೆ ಮಾಡಿದ್ದು ಈ ತಂಡದಲ್ಲಿ ಕೆಲ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ಇಬ್ಬರು ಪ್ರಮುಖ ಮ್ಯಾಚ್ ವಿನ್ನರ್‌ಗಳನ್ನು ಆಟಗಾರನನ್ನು ಕೈಬಿಟ್ಟಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಶಿಮ್ರಾನ್ ಹೇಟ್ಮೇಯರ್ ಎವಿನ್ ಲಿವೀಸ್ ಮೊದಲಾದ ಪ್ರತಿಭಾವಂತ ಆಟಗಾರರನ್ನು ಹೊಂದಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಪ್ರಮುಖ ಆಟಗಾರರಾದ ಸುನಿಲ್ ನರೈನ್ ಹಾಗೂ ಆಂಡ್ರೆ ರಸೆಲ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ನರೈನ್ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಸ್ಥಾನ ಪಡೆದುಕೊಂಡಿರಲಿಲ್ಲ. ಆದರೆ ರಸೆಲ್ ಅವಕಾಶ ಪಡೆದುಕೊಂಡಿದ್ದರಾದರೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಅದಾದ ಬಳಿಕ ಮತ್ತೆ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆಯಲು ರಸೆಲ್ ವಿಫಲವಾಗಿದ್ದಾರೆ.

ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ಫಾರ್ಮ್ ಸಮಸ್ಯೆಯೇ ಕಾರಣ

ಫಾರ್ಮ್ ಸಮಸ್ಯೆಯೇ ಕಾರಣ

ಆಂಡ್ರೆ ರಸೆಲ್ಈ ಬಾರಿಯ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗದ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಡೆಸ್ಮಾಂಡ್ ಹೃಯ್ನೆಸ್ ಪ್ರತಿಕ್ರಿಯಿಸಿದ್ದಾರೆ. ಟಿ20 ಮಾದರಿಯಲ್ಲಿ ಆಂಡ್ರೆ ರಸೆಲ್ ಅವರ ಫಾರ್ಮ್ ಉತ್ತಮವಾಗಿಲ್ಲ. ಆಯ್ಕೆ ಮಂಡಳಿ ಅವರ ಫಾರ್ಮ್‌ನಿಂದ ತೃಪ್ತವಾಗಿಲ್ಲ ಎಂದು ಆಯ್ಕೆಗೆ ಪರಿಗಣಿಸದಿರುವ ಕಾರಣವನ್ನು ತಿಳಿಸಿದ್ದಾರೆ. ಫಾರ್ಮ್ ವಿಚಾರವಾಗಿ ವರ್ಷಾರಂಭದಲ್ಲಿಯೇ ಆಂಡ್ರೆ ರಸೆಲ್ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ನಮಗೆ ತೃಪ್ತಿಯಾಗಿಲ್ಲ

ನಮಗೆ ತೃಪ್ತಿಯಾಗಿಲ್ಲ

"ನಾವು ಈ ವರ್ಷಾರಂಭದಲ್ಲಿಯೇ ಆಂಡ್ರೆ ರಸೆಲ್ ಜೊತೆಗೆ ಚರ್ಚೆಯನ್ನು ನಡೆಸಿದ್ದೇವೆ. ನಮಗೆ ಇನ್ನು ಕೂಡ ಅವರ ಫಾರ್ಮ್ ಬಗ್ಗೆ ತೃಪ್ತಿಯಿಲ್ಲ. ನಾವು ಅವರಿಂದ ಇಂಥಾ ಟೂರ್ನಿಯಲ್ಲಿ ನಿರೀಕ್ಷಿಸುತ್ತಿರುವ ಮಟ್ಟದ ಪ್ರದರ್ಶನವನ್ನು ಅವರು ನೀಡಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ನಾವು ಆಂಡ್ರೆ ರಸೆಲ್ ಅವರನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ" ಎಂದಿದ್ದಾರೆ ಆಯ್ಕೆ ಸಮಿತಿಯ ಮುಖ್ಯಸ್ಥ ಡೆಸ್ಮಾಂಡ್ ಹೃಯ್ನೆಸ್.

ನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶ

ನರೈನ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿಲ್ಲ

ನರೈನ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿಲ್ಲ

ಇನ್ನು ಮತ್ತೋರ್ವ ಆಲ್‌ರೌಂಡರ್ ಸುನಿಲ್ ನರೈನ್ ಟಿ20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗುವ ತಂಡಕ್ಕೆ ತಮ್ಮ ಲಭ್ಯತೆಯ ಸೂಚನೆಯನ್ನೇ ನೀಡಿಲ್ಲ ಎಂದು ಕೂಡ ಇದೇ ಸಂದರ್ಭದಲ್ಲಿ ಡೆಸ್ಮಾಂಡ್ ತಿಳಿಸಿದ್ದಾರೆ. ನಾಯಕ ನಿಕೋಲಸ್ ಪೂರನ್ ನರೈನ್ ಜೊತೆಗೆ ಮಾತುಕತೆಯನ್ನು ನಡೆಸಿದ್ದರು. ಆದರೆ ಅವರು ವಿಶ್ವಕಪ್‌ನಲ್ಲಿ ಭಾಗವಹಿಸಲು ಆಸಕ್ತರಾಗಿರುವಂತ ಕಂಡುಬಂದಿಲ್ಲ ಎಂದು ಸುನಿಲ್ ನರೈನ್ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ.

ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!

ವಿಶ್ವಕಪ್‌ಗೆ ಆಯ್ಕೆಯಾಗಿರುವ ವೆಸ್ಟ್ ಇಂಡೀಸ್ ತಂಡ

ವಿಶ್ವಕಪ್‌ಗೆ ಆಯ್ಕೆಯಾಗಿರುವ ವೆಸ್ಟ್ ಇಂಡೀಸ್ ತಂಡ

ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪ ನಾಯಕ), ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ರೇಮನ್ ರೈಫರ್, ಓಡಿಯನ್ ಸ್ಮಿತ್.

Story first published: Thursday, September 15, 2022, 17:55 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X